Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಿರೂಪಣೆಯಲ್ಲಿ ಜ್ಞಾನ, ಆತ್ಮವಿಶ್ವಾಸ, ಸಿದ್ಧತೆ ಮತ್ತು ಸ್ವಂತ ಶೈಲಿ ಮುಖ್ಯ: ನಿತೇಶ್ ಪೂಜಾರಿ ಮಾರ್ನಾಡ್
    alvas nudisiri

    ನಿರೂಪಣೆಯಲ್ಲಿ ಜ್ಞಾನ, ಆತ್ಮವಿಶ್ವಾಸ, ಸಿದ್ಧತೆ ಮತ್ತು ಸ್ವಂತ ಶೈಲಿ ಮುಖ್ಯ: ನಿತೇಶ್ ಪೂಜಾರಿ ಮಾರ್ನಾಡ್

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಮೂಡುಬಿದಿರೆ
    : ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿ ವೇದಿಕೆ ‘ಅಭಿವ್ಯಕ್ತಿ’ಯ 2026–27ನೇ ಸಾಲಿನ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಶುಕ್ರವಾರ ಕಾಲೇಜಿನ ಮಲ್ಟಿಮೀಡಿಯಾ ಸ್ಟುಡಿಯೋದಲ್ಲಿ ನಡೆಯಿತು.

    Click Here

    Click Here

    Call us

    Click Here

    ನಿರೂಪಕ ನಿತೇಶ್ ಪೂಜಾರಿ ಮಾರ್ನಾಡ್ ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ನಿರೂಪಣೆ ಎನ್ನುವುದು ಕೇವಲ ಮಾತಿನ ಕಲೆಯಲ್ಲ, ಅದಕ್ಕೆ ಜ್ಞಾನ, ಆತ್ಮವಿಶ್ವಾಸ, ಪೂರ್ವಸಿದ್ಧತೆ, ವಿಷಯದ ಮೇಲಿನ ಆಸಕ್ತಿ, ಧ್ವನಿಯ ಏರಿಳಿತ ಮತ್ತು ಬದ್ಧತೆ ಅತ್ಯಗತ್ಯ ಎಂದರು. ನಿರೂಪಣೆ ಸುಲಭದ ಕೆಲಸವಲ್ಲ. ಪ್ರತಿಯೊಂದು ಕಾರ್ಯಕ್ರಮಕ್ಕೂ ಅದರ ಸ್ವರೂಪಕ್ಕೆ ತಕ್ಕ ಸಿದ್ಧತೆ ಅಗತ್ಯ. ಕಾರ್ಯಕ್ರಮದ ಕುರಿತು ಮೂಲಭೂತ ಮಾಹಿತಿಯನ್ನಾದರೂ ನಿರೂಪಕರು ತಿಳಿದುಕೊಂಡಿರಬೇಕು.

    ವಿಷಯದ ಬಗ್ಗೆ ಆಳವಾದ ಜ್ಞಾನ ಇರಲೇಬೇಕೆಂದಿಲ್ಲವಾದರೂ, ಕಾರ್ಯಕ್ರಮದ ಹಿನ್ನೆಲೆ ಮತ್ತು ಸಂದರ್ಭವನ್ನು ಅರ್ಥಮಾಡಿಕೊಂಡಿರಬೇಕು. ನಿರೂಪಣೆಯ ಸ್ಕ್ರಿಪ್ಟ್ ಅನ್ನು ಕಂಠಪಾಠ ಮಾಡುವುದಕ್ಕಿಂತ ಅದರ ಆಶಯವನ್ನು ಮನಸ್ಸಿನಲ್ಲಿ ಅರ್ಥಮಾಡಿಕೊಂಡು ಸಹಜವಾಗಿ ಪ್ರಸ್ತುತಪಡಿಸುವುದು ಮುಖ್ಯ.

    ಧ್ವನಿಯ ವಿಭಿನ್ನ ಭಾವಗಳು, ಸೂಕ್ತ ಏರಿಳಿತ ಮತ್ತು ಮಾತಿನ ಶೈಲಿ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತವೆ. ನಿರೂಪಕರು ತಮ್ಮ ಜ್ಞಾನವನ್ನು ನಿರಂತರವಾಗಿ ನವೀಕರಿಸಿಕೊಳ್ಳಬೇಕು ಹಾಗೂ ಕಾಲಕ್ಕೆ ತಕ್ಕಂತೆ ಬೆಳವಣಿಗೆ ಹೊಂದಬೇಕು ಎಂದು ಸಲಹೆ ನೀಡಿದರು.

    ತಮ್ಮ ವೃತ್ತಿಜೀವನದ ಆರಂಭವನ್ನು ಸ್ಮರಿಸಿದ ಅವರು, ಆಳ್ವಾಸ್ ವಿರಾಸತ್ ತಮ್ಮ ನಿರೂಪಣಾ ಬದುಕಿಗೆ ವೇದಿಕೆಯಾಯಿತು ಎಂದು ಹೇಳಿದರು. ನಿರೂಪಣೆಯಲ್ಲಿ ಇತರರನ್ನು ಗಮನಿಸಿ ಕಲಿಯುವುದು ಉತ್ತಮವಾದರೂ, ಅವರನ್ನೇ ಅನುಕರಿಸುವ ಬದಲು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ರೂಪಿಸಿಕೊಳ್ಳಬೇಕು. ಯಶಸ್ಸು ಅಲ್ಪಾವಧಿಯಲ್ಲಿ ದೊರೆಯುವುದಿಲ್ಲ. ಸಣ್ಣಪುಟ್ಟ ಅವಕಾಶಗಳನ್ನು ಕಡೆಗಣಿಸದೆ, ಅವುಗಳನ್ನು ಬೆಳವಣಿಗೆಯ ಮೆಟ್ಟಿಲುಗಳನ್ನಾಗಿ ಮಾಡಿಕೊಳ್ಳಬೇಕು ಎಂದರು.

    Click here

    Click here

    Click here

    Call us

    Call us

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ್ ಶೆಟ್ಟಿ ಮಾತನಾಡಿದರು.

    ‘ಅಭಿವ್ಯಕ್ತಿ’ ವಿದ್ಯಾರ್ಥಿ ವೇದಿಕೆಯ ಕಾರ್ಯದರ್ಶಿಯಾಗಿ ರವಿ ಕೊಪ್ಪಳ, ಉಪಕಾರ್ಯದರ್ಶಿಯಾಗಿ ಕಾವ್ಯ ಎನ್.ವಿ. ಹಾಗೂ ಖಜಾಂಚಿಯಾಗಿ ವಿಧಿಶಾ ಜವಾಬ್ದಾರಿ ವಹಿಸಿಕೊಂಡರು. ಪ್ರಚಾರ ವಿಭಾಗದ ಜವಾಬ್ದಾರಿಯನ್ನು ಸಾಮ್ಯುಲ್, ಅಲಕನಂದಾ, ಮಹೇಶ್ ಡಿ.ಎನ್. ಮತ್ತು ರೋಬಿನ್ ಬೆಳ್ಳಿಯಪ್ಪ ನಿರ್ವಹಿಸಲಿದ್ದಾರೆ.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವಿಜ್ಞಾನ ವಿಚಾರಗೋಷ್ಠಿಯಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಮದರ್ ತೆರೇಸಾ ಸ್ಕೂಲ್‌ನ ಸಮನ್ವಿ ಶೆಟ್ಟಿ

    24/10/2026

    ಜನತಾ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆಗೆ ಆಯ್ಕೆ

    24/10/2026

    ಶ್ರೀ ವೆಂಕಟರಮಣ ಪ.ಪೂ ಕಾಲೇಜಿನ ಮೂವರು ವಿದ್ಯಾರ್ಥಿಗಳು ಯುವ ಸಂಸತ್ತು – 2026ರ ಜಿಲ್ಲಾಮಟ್ಟಕ್ಕೆ ಆಯ್ಕೆ

    23/10/2026
    Leave A Reply Cancel Reply

    four × five =

    Call us

    Click Here

    Call us

    Call us

    Call us
    Highest Viewed Recently
    • ಕೋಟ: ಟೆಂಪೊ, ಬೈಕ್‌ ನಡುವೆ ಭೀಕರ ಅಪಘಾತ – ಬೈಕ್‌ ಸವಾರನಿಗೆ ಗಾಯ
    • ಕುಂದಾಪುರ: ಕ್ರೆಡಿಟ್ ಕಾರ್ಡ್‌ನಿಂದ ಸೈಬರ್ ವಂಚನೆ – 2.24 ಲಕ್ಷ ರೂ. ವರ್ಗಾವಣೆ
    • ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಶ್ರೀ ವಿನಾಯಕ ಸಾಧನಶ್ರೀ ಪ್ರಶಸ್ತಿ ಪ್ರದಾನ
    • ನಿರೂಪಣೆಯಲ್ಲಿ ಜ್ಞಾನ, ಆತ್ಮವಿಶ್ವಾಸ, ಸಿದ್ಧತೆ ಮತ್ತು ಸ್ವಂತ ಶೈಲಿ ಮುಖ್ಯ: ನಿತೇಶ್ ಪೂಜಾರಿ ಮಾರ್ನಾಡ್
    • ಸಾಲಿಗ್ರಾಮ ಶ್ರೀ ಗುರುನರಸಿಂಹ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಕಟ್ಟಡ ನಿರ್ಮಾಣದ ಶಿಲಾನ್ಯಾಸ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.