ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಿತ್ತಳೆ ಮಾರಿ ವ್ಯಕ್ತಿಯೊಬ್ಬ ಸರಕಾರಿ ಶಾಲೆಯೊಂದನ್ನು ಕಟ್ಟಿ ಅದನ್ನು ಮುನ್ನಡೆಸಲು ಸಾಧ್ಯ ಎಂದು ತೋರಿಸಿಕೊಟ್ಟವರು ಹರೆಕಳ ಹಾಜಬ್ಬ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸಾಹೇಬರಕಟ್ಟೆ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ಯಡ್ತಾಡಿ ಶ್ರೀ ವಿನಾಯಕ ಯುವಕ ಮಂಡಲದ ನೇತೃತ್ವದಲ್ಲಿ 15ನೇ ವರ್ಷದ ಶಾರದೋತ್ಸವ ನಮ್ಮೂರ ದಸರಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಶ್ರೀಮಂತರ ಸ್ವತ್ತಾಗಿದ್ದ ಪದ್ಮಶ್ರೀಯಂತಹ ಅತ್ಯುನ್ನತ ಪ್ರಶಸ್ತಿಗಳು ತಳಮಟ್ಟದ ಹರೆಕಳ ಹಾಜಬ್ಬರಂತ ಸಾಮಾನ್ಯ ಸಾಧಕರಿಗೂ ತಲುಪುವಂತೆ ಮಾಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ. ಹರೇಕಳ ಹಾಜಬ್ಬ ಪದ್ಮಶ್ರೀ ಪ್ರಶಸ್ತಿ, ಗೌರವ ಡಾಕ್ಟರೇಟ್‌ನಂತಹ ಹಲವು ಪ್ರಶಸ್ತಿ, ಪಾರಿತೋಷಕ ಪಡೆದರೂ ಸರಳತೆ, ಸಾಮಾನ್ಯರಲ್ಲಿ ಸಾಮಾನ್ಯರಂತೆ ಬದುಕು ಕಟ್ಟಿಕೊಂಡವರು ಎಂದರು.
ಹರೇಕಳ ಹಾಜಬ್ಬರಿಗೆ ಶ್ರೀ ವಿನಾಯಕ ಸಾಧನಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ , ನನ್ನ ಧಣಿ ಅಚ್ಚಣ್ಣ ಶೆಟ್ಟರು ಬಾರ್ಕೂರು ಸೀಮೆಯವರು, ನನ್ನ ತಂದೆ ತಾಯಿ ಅವರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು ನನಗೂ ಈ ಬಾರ್ಕೂರಿಗೂ ಈ ರೀತಿಯ ಸಂಬಂಧ ಇದೆ. ಕಿತ್ತಳೆ ಮಾರಿಕೊಂಡಿದ್ದ ನನ್ನನ್ನು ಗುರುತಿಸಿ, ನನಗೆ ಸೂಕ್ತ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾಗಳು ಎಂದು ಹೇಳಿದರು.
ಹಾಜಬ್ಬರಿಂದ ನಾವು ಕಲಿಯಬೇಕಾಗಿದ್ದು ಬಹಳ ಇದೆ. ಅವರು ಕಿತ್ತಳೆ ಹಣ್ಣನ್ನು ಮಾರಿ ಶಾಲೆಯನ್ನು ಕಟ್ಟದರು. ಆದರೆ ನಮಲ್ಲಿ ಎಲ್ಲಾ ವ್ಯವಸ್ಥೆ ಇದ್ದರೂ ಕನ್ನಡ ಶಾಲೆಯನ್ನು ಮುಚ್ಚುತ್ತಿದ್ದೇವೆ. ಇಂಗ್ಲಿಷ್ ಬೇಕು ಎಲ್ಲಾ ಬೇಕು ಆದರೆ ಕನ್ನಡ ಶಾಲೆಯನ್ನು ಮುಚ್ಚಬೇಡಿ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸ್ಥಳೀಯ ಸಾಧಕರಾದ ನಿವೃತ್ತ ದೈಹಿಕ ಶಿಕ್ಷಕ ಗಜೇಂದ್ರ ಶೆಟ್ಟಿ ಡಾ. ಧನ್ಯ, ಸಜನ್, ವಿಜಯಲಕ್ಷ್ಮೀ ಇವರನ್ನು ಸನ್ಮಾನಿಸಲಾಯಿತು.
ಸಂಘದ ಅಧ್ಯಕ್ಷ ಪ್ರಭಾಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ಗಣೇಶ್ ಪ್ರಸಾದ್ ಕಾಂಚನ್, ಸಂದೀಪ್ ಶೆಟ್ಟಿ, ಸ್ವಾಮಿನಾಥ, ಕಾರ್ಯದರ್ಶಿ ಸುಧಾಕರ್ ನಾಯ್ಕ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಘವೇಂದ್ರ ಶೆಟ್ಟಿ ಹೆಸ್ಕುತ್ತೂರು ನಿರೂಪಿಸಿದರು. ಅಜಿತ್ ಕುಮಾರ್ ಸ್ವಾಗತಿಸಿದರು, ಪ್ರಶಾಂತ್ ಸೂರ್ಯ ವಂದಿಸಿದರು.

















