ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಕ್ಷೇತ್ರದ ಮುದೂರು ಗ್ರಾಮದ ಉದಯ ನಗರ ಶಶಿಧರ ಕೊರಗ ಅವರ ಮನೆಯಲ್ಲಿ ಆ ಭಾಗದ ಕೊರಗ ಸಮುದಾಯದ ಬಂಧುಗಳು ಹಾಗೂ ಪ್ರಮುಖರ ಜೊತೆ ಸಂವಾದ ನಡೆಸಿದರು. ಹಾಗೂ ಕೊರಗ ಬಂಧುಗಳ ದೈನಂದಿನ ಜೀವನದ ಬಗ್ಗೆ ಉಭಯ ಕುಶಲೋಪರಿ ನಡೆಸಿದರು.

ಆ ಭಾಗದಲ್ಲಿ ಸುಮಾರು 60 ಮನೆಗಳು ಹಕ್ಕು ಪತ್ರ ಪಡೆಯುವಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ಬಾರದೇ ಇರುವುದು ಹಾಗೂ ರೇಷನ್ ಕಾರ್ಡ್ ಸಮಸ್ಯೆಗಳ ಬಗ್ಗೆ ಅರಿತುಕೊಂಡು ತಕ್ಷಣ ಫೋನ್ ಮೂಲಕ ಅಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲು ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಶಾಸಕರ ಜೊತೆಗೆ ಬೈಂದೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಮಂಡಲ ಅಧ್ಯಕ್ಷರಾದ ಅನಿತಾ ಆರ್.ಕೆ., ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಪೂಜಾರಿ, ಪರಿಶಿಷ್ಟ ಪಂಗಡ ಮೋರ್ಚಾ ಅಧ್ಯಕ್ಷರಾದ ನಕ್ಷತ್ರ ನಾಯಕ್ ಹಾಗೂ ಸ್ಥಳೀಯ ಮುಖಂಡರುಗಳು ಉಪಸ್ಥಿತರಿದ್ದರು.












