ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಂಪಾರು ರೋಟರಿ ಕ್ಲಬ್ನ ಆಶ್ರಯದಲ್ಲಿ ನಡೆದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ರೋಟರಿ ಕ್ಲಬ್ ಕೋಟ ಬ್ರಿಗೇಡ್ಗೆ ರನ್ನರ್ಸ್ ಪ್ರಶಸ್ತಿ ಪಡೆದುಕೊಂಡಿತು.
ಯುಗಳ ಗೀತೆ ಪ್ರಥಮ, ಏಕ ವ್ಯಕ್ತಿಗಾಯನ ದ್ವಿತೀಯ, ಸಮೂಹ ನೃತ್ಯ ದ್ವಿತೀಯ, ಏಕ ಪಾತ್ರಾಭಿನಯ ದ್ವಿತೀಯ, ರಂಗೋಲಿ ದ್ವಿತೀಯ ಹಾಗೂ ಚಿತ್ರಕಲೆಗೆ ಪ್ರಥಮ ಪ್ರಶಸ್ತಿ ಲಭಿಸಿದೆ.
ಈ ಸ್ಪರ್ಧೆಯಲ್ಲಿ ವಲಯದ ಏಳು ಕ್ಲಬ್ಗಳು ಭಾಗವಹಿಸಿದ್ದು, ಅ.25ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಸುಧಾಕರ್ ಶೆಟ್ಟಿ ಹಾಗೂ ಗಣ್ಯರು ಕ್ಲಬ್ನ ಅಧ್ಯಕ್ಷ ಪ್ರಕಾಶ್ ಪೂಜಾರಿ ಬನ್ನಾಡಿ ಮತ್ತು ಸದಸ್ಯರು ಇದ್ದರು.












