Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಡಿ ವಿಲೀನಕ್ಕೆ ಚರ್ಚೆ – ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಭೇಟಿ
    Uncategorized

    ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಡಿ ವಿಲೀನಕ್ಕೆ ಚರ್ಚೆ – ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಭೇಟಿ

    Updated:29/10/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಉಡುಪಿ:
    ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಲ್ಲಿ ವಿಲೀನಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿ – ಚಿಕ್ಕಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಅವರನ್ನು ಮುಂಬೈಯ ಮಂತ್ರಾಲಯದಲ್ಲಿ ಭೇಟಿ ಮಾಡಿ ಚರ್ಚಿಸಿದರು.

    Click Here

    Click Here

    Call us

    Click Here

    ಮಾಜಿ ರಕ್ಷಣಾ ಸಚಿವರಾದ ದಿ. ಜಾರ್ಜ್ ಫೆರ್ನಾಂಡಿಸ್ ಅವರ ಮೂಲಕ ಕರಾವಳಿ ಪ್ರಯಾಣಿಕರ ಜೀವನಾಡಿಯಾಗಿ ರೂಪುಗೊಂಡ ಕೊಂಕಣ ರೈಲ್ವೆ ಆರ್ಥಿಕ ಮುಗ್ಗಟ್ಟಿನ ಸಂಕಷ್ಟದಲ್ಲಿದೆ. ಸುಮಾರು 750 ಕಿ.ಮೀ ಉದ್ದದ ಕೊಂಕಣ ರೈಲ್ವೆಯ ಮಾರ್ಗವನ್ನು ಅಭಿವೃದ್ಧಿಪಡಿಸಲು ಹಾಗೂ ಭವಿಷ್ಯದ ಸಂಚಾರ ಬೆಳವಣಿಗೆಯ ಸಾಮರ್ಥ್ಯ ಹೆಚ್ಚಿಸಲು ಇಡೀ ಮಾರ್ಗವನ್ನು ದ್ವಿಗುಣಗೊಳಿಸುವ ಅನಿವಾರ್ಯವಾಗಿದೆ.

    ಒಂದು ಅಂದಾಜಿನ ಪ್ರಕಾರ ಮಾರ್ಗದ ಹಳಿಗಳನ್ನು ದ್ವಿಗುಣಗೊಳಿಸುವುದು ಮತ್ತು ತುಂಬಾ ಅವ್ಯವಸ್ಥೆಯಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಉತ್ತಮವಾಗಿ ನಿರ್ಮಾಣ ಮಾಡಲು 40,000 ಕೋಟಿ ರೂಪಾಯಿಗಳ ಅಗತ್ಯವಿದೆ, ಇಷ್ಟು ಹಣವನ್ನು ಬರಿಸಲು ಕೊಂಕಣ ರೈಲ್ವೆಯ ಆರ್ಥಿಕ ಸ್ಥಿತಿ ಸಹಕಾರಿಯಾಗಿಲ್ಲ. ಕೊಂಕಣ ರೈಲ್ವೆ ಹಾದುಹೋಗುವ ರಾಜ್ಯ ಸರಕಾರಗಳು ತಮ್ಮ ಪಾಲಿನ ಶೇರ್‌ಗಳನ್ನು ಬಿಟ್ಟುಕೊಟ್ಟರೆ ವಿಲೀನಗೊಳಿಸಬಹುದು ಎಂದು ಕೇಂದ್ರ ಸಚಿವರು ಲೋಕಸಭೆಯಲ್ಲಿ ಉಲ್ಲೇಖಿಸಿದ್ದನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಗಮನಕ್ಕೆ ತಂದರು.

    ಈ ಬಗ್ಗೆ ಗೋವಾ ಮತ್ತು ಕೇರಳ ಸರಕಾರಗಳು ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದ್ದು, ಕರ್ನಾಟಕ ಮುಖ್ಯಮಂತ್ರಿಳಾದ ಡಿ.ಕೆ ಶಿವಕುಮಾರ್ ರೈಲ್ವೆ ಅಭಿವೃದ್ಧಿ ದೃಷ್ಟಿಯಿಂದ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ನೇತೃತ್ವದ ಮಹಾರಾಷ್ಟ್ರ ಸರಕಾರವೂ ವಿಲೀನಕ್ಕೆ ಸಹಮತ ವ್ಯಕ್ತಪಡಿಸಿದರೆ ಮುಂದಿನ ದಿನಗಳಲ್ಲಿ ಕೊಂಕಣ ಮಾರ್ಗವು ದ್ವಿಪಥವಾಗುವುದಲ್ಲದೆ  ಇತರ ಅಭಿವೃದ್ಧಿಗಾಗಿ ಕರಾವಳಿ ರಾಜ್ಯಗಳ ಜನಪ್ರತಿನಿಧಿಗಳು ಕೇಂದ್ರವನ್ನು ಮನವಿ ಮಾಡಬಹುದಾಗಿದೆ ಎಂದು ಕೋಟ ವಿವರಿಸಿದರು.

    ಸಂಸದ ಕೋಟ ಅವರ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಇದೊಂದು ಬಹು ಮುಖ್ಯ ವಿಚಾರವಾಗಿದ್ದು, ಕೊಂಕಣ ರೈಲ್ವೆ ಮಾರ್ಗದ ಪ್ರಯಾಣಿಕರ ಹಿತ ದೃಷ್ಟಿಯಿಂದ ಸಹಮತದ ಬಗ್ಗೆ ಕೂಡಲೇ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

    Click here

    Click here

    Click here

    Call us

    Call us

    ಈ ಸಂದರ್ಭದಲ್ಲಿ ಕೋಟ ಜೊತೆ ಮಹಾರಾಷ್ಟ್ರದ ಚಂದಗಡ್ ಮತ ಕ್ಷೇತ್ರದ ಶಾಸಕ ಶಿವಾಜಿ ಪಾಟೀಲ್, ನ್ಯೂ ಮುಂಬೈ ಮಹಾನಗರ ಪಾಲಿಕೆ ಸದಸ್ಯ ಸಂತೋಷ ಶೆಟ್ಟಿ, ಕುಂದಾಪುರ ರೈಲ್ವೆ ಬಳಕೆದಾರರ ಸಂಘದ ಗೌತಮ್ ಶೆಟ್ಟಿ, ಮತ್ತು ಸುನಿಲ್ ಪೂಜಾರಿ ಉಪಸ್ಥಿತರಿದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಸೈಂಟ್ ಥಾಮಸ್ ಹೈಯರ್ ಪ್ರೈಮರಿ ಸ್ಕೂಲ್‌ ಇದೀಗ ‘ಸೈಂಟ್ ಥಾಮಸ್ ಸೆಂಟ್ರಲ್ ಸ್ಕೂಲ್’ ಆಗಿ ಮರುನಾಮಕರಣ

    19/10/2026

    ಅ.31 ರಂದು ಉಪ್ಪುಂದದಲ್ಲಿ ‘ಹುಲಿ ಪರ್ವ 2026’ ಕಾರ್ಯಕ್ರಮ

    10/10/2026

    ರೋಟರಿ ಕ್ಲಬ್ ಕೋಟ ಬ್ರಿಗೇಡ್ ವತಿಯಿಂದ ಶ್ರವಣ ಸಾಧನ ಉಚಿತ ಕೊಡುಗೆ

    09/10/2026
    Leave A Reply Cancel Reply

    ten + 1 =

    Call us

    Click Here

    Call us

    Call us

    Call us
    Highest Viewed Recently
    • ಮೈಸೂರು ವಿಭಾಗ ಮಟ್ಟದ ದೇಶಭಕ್ತಿ ಗೀತಗಾಯನ ಸ್ಪರ್ಧೆ: ಆಳ್ವಾಸ್‌ಗೆ ಮೂರು ವಿಭಾಗಗಳಲ್ಲಿ ಪ್ರಥಮ ಸ್ಥಾನ
    • ಶಿಕ್ಷಣದಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯ: ಯು. ನಿಸಾರ್ ಅಹ್ಮದ್
    • ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯಡಿ ವಿಲೀನಕ್ಕೆ ಚರ್ಚೆ – ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡ್ನವಿಸ್ ಭೇಟಿ
    • ರೋಟರಿ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ: ಕೋಟ ಬ್ರಿಗೇಡ್‌ಗೆ ರನ್ನರ್ಸ್‌ ಪ್ರಶಸ್ತಿ
    • ರಾಜ್ಯದ ಟಾಪ್‌ ಪೋಲಿಸ್‌ ಠಾಣೆಗಳ ಪೈಕಿ ಗಂಗೊಳ್ಳಿ ಠಾಣೆಗೆ 7ನೇ ಸ್ಥಾನ: ಗಂಗೊಳ್ಳಿ ಪೊಲೀಸರಿಗೆ ಶಾಸಕರಿಂದ ಅಭಿನಂದನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.