ಕುಂದಾಪುರ ತಾಪಂ-ಜಿಪಂ ಚುನಾವಣೆ: ಟಿಕೆಟ್ ಟಿಕೆಟ್ ಯಾರಿಗೆ ಟಿಕೆಟ್?

Call us

Call us

Call us

 ತಾಪಂ-ಜಿಪಂ ಚುನಾವಣೆ. ಕುಂದಾಪುರ ತಾಲೂಕಿನಲ್ಲಿ ಯಾರಿಗೆ ಮಣೆ.

Call us

Click Here

ಕುಂದಾಪ್ರ ಡಾಟ್ ಕಾಂ ವರದಿ.

ಕುಂದಾಪುರ: ಫೆ.20ರಂದು ನಡೆಯಲಿರುವ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗೆ ಭೂಮಿಕೆ ಸಿದ್ದಗೊಂಡಿದ್ದು ಟಿಕೆಟಿಗಾಗಿ ಭಾರಿ ಪೈಪೋಟಿ ನಡೆಯುತ್ತಿದೆ. ತಾಪಂ ಗಿಂತ ಜಿಪಂಗೆ ಸ್ವರ್ಧಿಸಲು ಹಲವೆಡೆ ಆಕಾಂಕ್ಷಿಗಳ ಬೇಡಿಕೆ ಇಟ್ಟಿರುವುದರಿಂದ ಯಾರಿಗೆ ನೀಡಿದರೆ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿ ಪಕ್ಷದ ನಾಯಕರುಗಳಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಲು ಕೊನೆ ಕ್ಷಣದ ತಯಾರಿ ನಡೆಸಲಾಗಿದೆ ಎನ್ನಲಾಗಿದ್ದು, ಸದ್ಯದಲ್ಲಿ ಅಂತಿಮ ಪಟ್ಟಿ ಹೊರಬೀಳಲಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸಿ ತಾಪಂ ಹಾಗೂ ಜಿಪಂ ನಲ್ಲಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಮತ್ತೆ ತನ್ನ ಪ್ರಾಬಲ್ಯ ಮೆರೆಯುವ ತವಕದಲ್ಲಿದ್ದರೇ, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಹಾಗೂ ಜಿಲ್ಲೆಯಲ್ಲಿ ತಮ್ಮದೇ ಪಕ್ಷದ ಶಾಸಕರು ಹಾಗೂ ಮಂತ್ರಿಗಳಿರುವುದರಿಂದ ಕುಂದಾಪುರ ತಾಲೂಕಿನ ಹೆಚ್ಚಿನ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವುದು ಕಷ್ಟವಾಗಲಾರದು ಎಂದು ಕಾಂಗ್ರೆಸಿಗರು ಹೇಳುತ್ತಿದ್ದಾರೆ. ಈ ನಡುವೆ 10 ಜಿಲ್ಲಾ ಪಂಚಾಯತ್ ಹಾಗೂ 37 ತಾಲೂಕು ಪಂಚಾಯತ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ‘ಕುಂದಾಪ್ರ ಡಾಟ್ ಕಾಂ’ಗೆ ಲಭಿಸಿದ್ದು, ಅಂತಿಮವಾಗಿ ಯಾರಿಗೆ ಟಿಕೆಟ್ ದೊರೆಯಲಿದೆ ಎಂಬುದು ಕೂಡ ಸದ್ಯದಲ್ಲಿಯೇ ತಿಳಿಯಲಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಜಿ. ಪಂ ಸಂಭಾವ್ಯ ಅಭ್ಯರ್ಥಿಗಳು:
ಶಿರೂರು: ಜಿಪಂ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, ಪುಪ್ಪರಾಜ ಶೆಟ್ಟಿ(ಬಿಜೆಪಿ), ಮಾಜಿ ತಾಪಂ ಸದಸ್ಯ ಮದನ್ ಕುಮಾರ್ (ಕಾಂಗ್ರೆಸ್).
ಬೈಂದೂರು: ಮಾಜಿ ಜಿಪಂ. ಅಧ್ಯಕ್ಷ ರಾಜು ಪೂಜಾರಿ (ಕಾಂಗ್ರೆಸ್), ಶಂಕರ ಪೂಜಾರಿ ಮತ್ತು ಶಿವರಾಜ ಪೂಜಾರಿ (ಬಿಜೆಪಿ).
ಕಂಬದಕೋಣೆ: ಜಿಪಂ. ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ದೇವಾಡಿಗ (ಕಾಂಗ್ರೆಸ್), ಮಾಜಿ ಜಿಪಂ. ಉಪಾಧ್ಯಕ್ಷೆ ಶಾರದಾ ದೇವಾಡಿಗ ಪುತ್ರಿ ಪ್ರಿಯದರ್ಶಿನಿ, ನೀಲಮ್ಮ ಮೋಹನ ಮೊಗವೀರ(ಬಿಜೆಪಿ)
ತ್ರಾಸಿ: ಶೋಭಾ ಜಿ. ಪುತ್ರನ್, ಅಂಬಿಕಾ ನಾಯಕ್ (ಬಿಜೆಪಿ), ಮಾಜಿ ತಾಪಂ ಸದಸ್ಯೆ ಸಾಧು ಎಸ್.ಬಿಲ್ಲವ (ಕಾಂಗ್ರೆಸ್).
ಸಿದ್ದಾಪುರ: ತಾರಾನಾಥ ಶೆಟ್ಟಿ, ಉಮೇಶ್ ಶೆಟ್ಟಿ (ಬಿಜೆಪಿ) ಸಂಪಿಗೇಡಿ ಸಂಜೀವ ಶೆಟ್ಟಿ (ಕಾಂಗ್ರೆಸ್) (ಕುಂದಾಪ್ರ ಡಾಟ್ ಕಾಂ ಸುದ್ದಿ)
ವಂಡ್ಸೆ: ಮಾಜಿ ತಾಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ, ಮಾಜಿ ತಾಪಂ ಉಪಾಧ್ಯಕ್ಷ ಬಾಳೆಮನೆ ಸಂತೋಷ್ ಕುಮಾರ್ ಶೆಟ್ಟಿ (ಕಾಂಗ್ರೆಸ್) ಡಾ. ಅತುಲ್ ಕುಮಾರ್ ಶೆಟ್ಟಿ, ಪ್ರಣಯ ಶೆಟ್ಟಿ, ಜಿಪಂ ಮಾಜಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ, (ಬಿಜೆಪಿ)
ಹಾಲಾಡಿ: ಬೇಬಿ ಪೂಜಾರ್ತಿ, ಸುಪ್ರಿತಾ, ಸವಿತಾ, ಮಂಜುಳಾ ಆರ್. ಮೊಗವೀರ(ಬಿಜೆಪಿ)
ಬಿಜಾಡಿ: ಶ್ರೀಲತಾ ಶೆಟ್ಟಿ, ವಾಣಿ ಅಡಿಗ, ಸರಸ್ವತಿ ಎಸ್. ಪುತ್ರನ್ ಶೋಭಾ ಚಂದ್ರ (ಬಿಜೆಪಿ)  (ಕುಂದಾಪ್ರ ಡಾಟ್ ಕಾಂ ಸುದ್ದಿ)
ಕೋಟೇಶ್ವರ: ಕಲ್ಪನಾ ಭಾಸ್ಕರ್, ಜಾನಕಿ ಬಿಲ್ಲವ, ಲಕ್ಷ್ಮಿ ಎಂ. ಬಿಲ್ಲವ, ಶಾಂತಾ ಗೋಪಾಲಕೃಷ್ಣ (ಬಿಜೆಪಿ)

Click here

Click here

Click here

Click Here

Call us

Call us

ತಾಪಂ ಸಂಭಾವ್ಯ ಅಭ್ಯರ್ಥಿಗಳು (ಆಯ್ದ ಕ್ಷೇತ್ರಗಳು):
ಶಿರೂರು_1: ದಸ್ತಗೀರ್ ಸಾಹೇಬ್ (ಬಿಜೆಪಿ),
ಶಿರೂರು_2: ಪುಷ್ಪರಾಜ್ ಶೆಟ್ಟಿ ಮತ್ತು ಪ್ರಥ್ವಿರಾಜ್ ಶೆಟ್ಟಿ (ಬಿಜೆಪಿ).
ಉಪ್ಪುಂದ: ಪ್ರಮೀಳಾ ದೇವಾಡಿಗ (ಬಿಜೆಪಿ),
ಬೈಂದೂರು: ಶ್ರೀಮತಿ ಕೆ. ಜಯಾನಂದ (ಬಿಜೆಪಿ),
ಯಡ್ತರೆ: ಭಾರತಿ,
ಕೊಲ್ಲೂರು: ಲಕ್ಷ್ಮೀದೇವಿ ಐತಾಳ್, ವೀಣಾ ಅನಂತಮೂರ್ತಿ(ಬಿಜೆಪಿ).
ಕಾಲ್ತೋಡು: ಮೂಡಮಕ್ಕಿ ಚಂದ್ರ ಶೆಟ್ಟಿ, ಎಂ.ಆರ್.ಶೆಟ್ಟಿ (ಬಿಜೆಪಿ),  (ಕುಂದಾಪ್ರ ಡಾಟ್ ಕಾಂ ಸುದ್ದಿ)
ಕಂಬದಕೋಣೆ: ಮಹೇಂದ್ರ ಪೂಜಾರಿ, ಶ್ರೀನಿವಾಸ ಪೂಜಾರಿ (ಬಿಜೆಪಿ),
ನಾವುಂದ: ಜಾನಕಿ ಮೊಗವೀರ, ನೀಲಮ್ಮ ಮೊಗವೀರ, ವಂದನಾ ಖಾರ್ವಿ (ಬಿಜೆಪಿ),
ಬಿಜೂರು: ರಮೇಶ್ ಆಚಾರ್ಯ, ದುರ್ಗಾಪ್ರಸಾದ್ ದೇವಾಡಿಗ (ಬಿಜೆಪಿ),
ತ್ರಾಸಿ: ಕೆ. ನಾರಾಯಣ (ಬಿಜೆಪಿ) ಮಾಜಿ ಜಿಪಂ ಸದಸ್ಯ ಅನಂತ ಮೋವಾಡಿ, (ಕಾಂಗ್ರೆಸ್),
ಗಂಗೊಳ್ಳಿ: ಸುರೇಂದ್ರ ಖಾರ್ವಿ(ಬಿಜೆಪಿ), ಹೆಮ್ಮಾಡಿ ಚಂದ್ರ ಭಟ್, ನಾಗರಾಜ ಪುತ್ರನ್, ನಾಣಿ ಶೇರಿಗಾರ್ (ಬಿಜೆಪಿ),
ಮರವಂತೆ: ಕುರುಣಾಕರ ಆಚಾರ‍್ಯ, ಲೋಕೇಶ್ ಖಾರ್ವಿ, ಗಣೇಶ್ ಪೂಜಾರಿ (ಬಿಜೆಪಿ), (ಕುಂದಾಪ್ರ ಡಾಟ್ ಕಾಂ ಸುದ್ದಿ)
ನಾಡ: ರವಿ ಮೊಗವೀರ ಪಡುಕೋಣೆ, ಪ್ರಣಯ ಕುಮಾರ್ ಶೆಟ್ಟಿ, ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ(ಬಿಜೆಪಿ), ರಾಜು ಪಡುಕೋಣೆ ಕಮ್ಯನಿಸ್ಟ್.
ವಂಡ್ಸೆ: ಚಂದ್ರಯ್ಯ ಆಚಾರ‍್ಯ ಕಳಿ (ಬಿಜೆಪಿ), ಉದಯ ಜಿ. ಪೂಜಾರಿ(ಕಾಂಗ್ರೆಸ್), ಅಣ್ಣಪ್ಪ ಆಚಾರಿ(ಜೆಡಿಎಸ್) ಸುರೇಶ್ ಕಲ್ಲಾಗಾರ್ (ಕಮ್ಯುನಿಸ್ಟ್)
ಆಲೂರು: ಮಾಜಿ ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಇಂದಿರಾ ಶೆಟ್ಟಿ (ಬಿಜೆಪಿ),
ಕಾವ್ರಾಡಿ: ಸಂತೋಷ್ ಪೂಜಾರಿ, ಸಂತೋಷ ದೇವಾಡಿಗ,
ಆಜ್ರಿ: ಪ್ರವೀಣ್ ಕುಮಾರ್ ಶೆಟ್ಟಿ, ದೇವಾನಂದ ಶೆಟ್ಟಿ, (ಕುಂದಾಪ್ರ ಡಾಟ್ ಕಾಂ ಸುದ್ದಿ)
ಸಿದ್ದಾಪುರ: ಭರತ್ ಕಾಮತ್, ಪ್ರದೀಪ್ ಹೆಗ್ಡೆ, ರೋಹಿತ್ ಶೆಟ್ಟಿ,
ಶಂಕರನಾರಾಯಣ: ಹದ್ದೂರು ರಾಜೀವ ಶೆಟ್ಟಿ, ಬಿ.ಕೆ.ಶ್ರೀನಿವಾಸ ಸೌಡ, ರೋಹಿತ್ ಕುಮಾರ್ ಶೆಟ್ಟಿ,
ಹಳ್ಳಿಹೊಳೆ: ಭಾರತಿ ನಾಯ್ಕ್, ಪೂರ್ಣಿಮಾ ನಾಯ್ಕ್

Leave a Reply