ಕೋಟೇಶ್ವರ ಜಿಪಂ ಕ್ಷೇತ್ರ: ಕುಡಿಯುವ ನೀರು, ಕಸ ವಿಲೇವಾರಿ ಅಭ್ಯರ್ಥಿಗಳಿಗೆ ಸವಾಲು

Call us

Call us

Call us

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಕುಂದಾಪುರ: ತಾಲೂಕಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಕೋಟೇಶ್ವರ, ಧಾರ್ಮಿಕ ಕ್ಷೇತ್ರ ಹಾಗೂ ಪ್ರಮುಖ ಕೈಗಾರಿಕಾ ಪ್ರದೇಶಗಳನ್ನು ಒಳಗೊಂಡ ಪ್ರದೇಶ. ನಗರ ಹಾಗೂ ಗ್ರಾಮೀಣ ಪ್ರದೇಶಗಳೇರಡನ್ನೂ ಒಳಗೊಳ್ಳುವ ಕೋಟೇಶ್ವರ ಜಿಲ್ಲಾ ಪಂಚಾಯತ್ ಕ್ಷೇತ್ರ ರಾಷ್ಟ್ರೀಯ ಹೆದ್ದಾರಿಗೆ ತಾಕಿಕೊಂಡಿದೆ. ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಅವಳಿ ಜಿಲ್ಲೆಗಳ ಬಹುದೊಡ್ಡ ಜಾತ್ರೆಗಳಲ್ಲೊಂದಾಗಿದೆ.

Call us

Click Here

post-election-votersಈ ಭಾರಿ ಕ್ಷೇತ್ರ ಮರುವಿಂಗಡನೆಯ ಬಳಿಕ ಬಸ್ರೂರು ಜಿಲ್ಲಾ ಪಂಚಾಯತ್(ಜಿಪಂ) ಕ್ಷೇತ್ರದ ಹೆಚ್ಚಿನ ಪಂಚಾಯತಿಗಳು ಕೋಟೇಶ್ವರ ಕ್ಷೇತ್ರಕ್ಕೆ ಸೇರ್ಪಡೆಗೊಂಡು ಬಸ್ರೂರು ಕ್ಷೇತ್ರ ಇಲ್ಲವಾದರೇ, ಕೋಟೇಶ್ವರ ಕ್ಷೇತ್ರದ ಬಹುಪಾಲು ಗ್ರಾಮಗಳು ಹೊಸದಾಗಿ ಬೀಜಾಡಿ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದೆ. ಈ ಭಾರಿ ಜಿಪಂ. ಮಹಿಳಾ ಮೀಸಲು ಬಂದಿದ್ದರಿಂದ ಕಾಂಗ್ರೆಸ್ ನಿಂದ ಗೀತಾ ಶಂಭು ಪೂಜಾರಿ, ಬಿಜೆಪಿಯಿಂದ ಲಕ್ಷ್ಮಿ ಮಂಜು ಬಿಲ್ಲವ ಹಾಗೂ ಸಿಪಿಎಂ ಪಕ್ಷದಿಂದ ಜ್ಯೋತಿ ಉಪಧ್ಯಾಯ ಕಣದಲ್ಲಿದ್ದಾರೆ. ಬಿಜೆಪಿಯ ಸಕ್ರಿಯೆ ಕಲ್ಪನಾ ಭಾಸ್ಕರ್ ಅವರಿಗೆ ಟಿಕೇಟ್ ನೀಡುವುದು ಬಹುತೇಕ ಪಕ್ಷದಿಂದಲೇ ಖಚಿತವಾಗಿದ್ದರೂ ಕೊನೆ ಕ್ಷಣದಲ್ಲಿ ಹಾಲಾಡಿ ಬಣ ಮೇಲುಗೈ ಸಾಧಿಸಿದ್ದರಿಂದ ಕಲ್ಪನಾ ಅವರಿಗೆ ಟಿಕೇಟ್ ಕೈತಪ್ಪಿತ್ತು.

2000ರಲ್ಲಿ ಕೋಟೇಶ್ವರ ಜಿಪಂ. ಸದಸ್ಯರಾಗಿದ್ದ ದಿ. ಅಶೋಕ್ ಕುಮಾರ್ ಶೆಟ್ಟಿ ಎರಡನೇ ಅವಧಿಯಲ್ಲಿ ಅಧಕ್ಷರಾಗುವ ಮೂಲಕ ಕೋಟೇಶ್ವರ ಜಿಪಂ. ಕ್ಷೇತ್ರಕ್ಕೆ ರಾಜ್ಯಮಟ್ಟದ ಹೆಸರು ತಂದು ಕೊಟ್ಟರು. ಆಡಳಿತ ಪಕ್ಷದ ಅಧ್ಯಕ್ಷರಾಗಿದ್ದುಕೊಂಡೇ ಜಿಪಂ. ಬ್ರಹ್ಮಾಂಡ ಭ್ರಷ್ಟಾಚಾರ ಹೊರಗೆಳೆದು ರಾಜ್ಯದ್ಯಂತ ಕುತೂಹಲ ಮೂಡಿಸಿದರು. ಭ್ರ್ರಷ್ಟಾಚಾರ ತನಿಖೆಗೆ ಸಮಿತಿ ರಚನೆ ಮಾಡಲಾಯಿತು. ಲೋಕಾಯುಕ್ತಕ್ಕೂ ದೂರು ನೀಡಲಾಗಿತ್ತು. ಆದರೆ ಭೀಕರ ರಸ್ತೆ ಅಪಘಾತದಲ್ಲಿ ಅಶೋಕ್ ಕುಮಾರ್ ಶೆಟ್ಟಿ ನಿಧರಾಗುವ ಮೂಲಕ ಭ್ರ್ರಷ್ಟಾಚಾರ ಸಂಗತಿ ಮಾತ್ರ ಬಯಲಾಗಲೇ ಇಲ್ಲ. ಭ್ರ್ರಷ್ಟಾಚಾರದಲ್ಲಿ ಪಾಲ್ಗೊಂಡು ಕೆಲ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಲಾಯಿತು. ಇದು ಕುಂದಾಪ್ರ ಡಾಟ್ ಕಾಂ ವರದಿ.

ಕೋಟೇಶ್ವರ ಕೋಟಿಲಿಂಗೇಶ್ವರ, ಪಟ್ಟಾಭಿ ರಾಮಚಂದ್ರ ದೇವಸ್ಥಾನ, ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನ, ಉಳ್ಳೂರು ಕಾರ್ತಿಕೇಯ ದೇವಸ್ಥಾನ, ಹಂಗಳೂರು ಆಂಜನೇಯ ದೇವಸ್ಥಾನ ಮುಂತಾದವುಗಳ ಜಿಪಂ ಕ್ಷೇತ್ರ ವ್ಯಾಪ್ತಿಯ ಪ್ರಮುಖ ದೇವಾಲಯಗಳಾದರೇ, ಯುವ ಮೆರೀಡಿಯನ್, ಸಹನಾ ಕನ್ವೆನಷನ್ ಹಾಲ್ ಸೇರಿಂದಂತೆ ಹತ್ತಾರು ಸಭಾಂಗಣಗಳೇ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಕೋಟೇಶ್ವರ, ಬಸ್ರೂರಿನ ಐತಿಹಾಸಿಕ ಕೆರೆ-ದೇವಾಲಯ, ಕೈಗಾರಿಯ ವಲಯ ಮುಂತಾದವುಗಳು ನೋಡಬಹುದಾದ ತಾಣಗಳು.

ಕೋಟೇಶ್ವರ ಜಿಪಂ. ದೊಡ್ಡ ಸಮಸ್ಯೆ ಕುಡಿಯುವ ನೀರು ಮತ್ತು ಘನ ತ್ಯಾಜ್ಯ ವಿಲೇವಾರಿ. ತ್ಯಾಜ್ಯ ವಿಲೇವಾರಿಗೆ ಸರಕಾರಿ ಜಾಗ ಇಲ್ಲದಿರುವುದು ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆಗೆ ಹಿನ್ನೆಡೆ. ತ್ಯಾಜ್ಯ ವಿಲೇವಾರಿ ಬಗ್ಗೆ ದೊಡ್ಡ ಆಶ್ವಾಸನೆಗಳು ಸಿಕ್ಕರೂ ಇದೂವರಗೆ ಮುಕ್ತಿ ಸಿಗದಿರುವುದು ಮುಂದಿನ ಜಿಲ್ಲಾ ಪಂಚಾಯಿತಿ ಮಹಿಳಾ ಸದಸ್ಯೆ ಮುಂದಿರುವ ದೊಡ್ಡ ಸವಾಲು. ಆದರೆ ಒಂದು ಸಮಾಧಾನದ ಸಂಗತಿ ಎಂದರೆ ಆನಗಳ್ಳಿ, ಬಸ್ರೂರು ಕುಂದಾಪುರ ಪುರಸಭೆಯಿಂದ ನೀರು ಪಡೆಯುತ್ತಿದ್ದು, ಕುಡಿಯುವ ನೀರಿನ ಸಮಸ್ಯೆಯಿಂದ ಬಚಾವಾಗಿದೆ. ಆದರೆ ಮಿಕ್ಕ ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಜೊತೆ ಮೂಲಭೂತ ಸೌಲಭ್ಯದಿಂದ ವಂಚಿತವಾಗಿದೆ. ಒಟ್ಟಾರೆ ಜಿಪಂ ಸದಸ್ಯೆ ಮುಂದೆ ಬೆಟ್ಟದಷ್ಟು ಸಮಸ್ಯೆಗಳೇ ಹಾಸು ಹೊದ್ದು ಮಲಗಿದೆ. (ಕುಂದಾಪ್ರ ಡಾಟ್ ಕಾಂ ವಿಶೇಷ)

Click here

Click here

Click here

Click Here

Call us

Call us

ಕೋಟೇಶ್ವರ ಜಿಪಂ.ಕ್ಷೇತ್ರ್ರಕ್ಕೆ ಗಣಪತಿ ಶ್ರೀಯಾನ್ ಅವಧಿಯಲ್ಲಿ ಒಟ್ಟು 7.75 ಕೋಟಿ ರೂ ಅನುದಾನ ಬಿಡುಗಡೆ ಆಗಿದೆ. ಶಾಲಾ ಕಂಪೌಂಡ್ ರಚನೆ, ಸಭಾಂಗಣ, ಕಂಪೌಂಡ್ ವಾಲ್ ಕಟ್ಟಡಕ್ಕೆ ಬಳಸಲಾಗಿದ್ದು, ಅತೀ ಹೆಚ್ಚು ಅನುದಾನ ಕುಡಿಯುವ ನೀರು ಪೂರೈಕೆಗೆ ಖರ್ಚು ಮಾಡಲಾಗಿದೆ. ಕುಂಭಾಶಿ ವಿನಾಯಕ ಕಾಲೋನಿಯಲ್ಲಿ ಹಿಂದೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿತು. ಈ ಮೀಟರ್ ಸಹಿತ ನಲ್ಲಿ ಜೋಡಣೆಯಿಂದ ನೀರಿನ ಸಮಸ್ಯೆ ತೀರಿದೆ. ಕೋಟೇಶ್ವರ ಹೆಚ್ಚಿನ ಗ್ರಾಮಗಳ ಕುಡಿಯುವ ನೀರು, ರಸ್ತೆ ಸಂಪರ್ಕಕ್ಕೆ ಹೆಚ್ಚ್ಚು ಒತ್ತು ನೀಡಲಾಗಿದೆ.

ಜಿಪಂ ಪ್ರಮುಖ ಸಮಸ್ಯೆ :
* ಕೋಟೇಶ್ವರ ಜಿಪಂ ಹೆಚ್ಚಿನ ಎಲ್ಲಾ ಗ್ರಾಮಗಳಲ್ಲಿ ತ್ಯಾಜ್ಯ ವಿಲೇ ದೊಡ್ಡ ಸಮಸ್ಯೆ.
* ಆನಗಳ್ಳಿ, ಕೋಣಿ, ಬಸ್ರೂರು ಗ್ರಾಪಂ. ಕುಂದಾಪುರ ಪುರಸಭೆಯಿಂದ ನೀರು ಪಡೆಯುತ್ತಿದ್ದರೆ, ಹಂಗಳೂರು, ಕೋಟೇಶ್ವರ, ಕಂದಾವರ ಗ್ರಾಮಕ್ಕೆ
* ಕುಡಿಯುವ ನೀರೇ ದೊಡ್ಡ ಸಮಸ್ಯೆ.
* ಅತಿಕ್ರಮ ಮರಳುಗಾರಿಕೆಗೆ ಬಳ್ಕೂರು, ಆನಗಳ್ಳಿ ಗ್ರಾಪಂ. ತತ್ತರ.
* ಶೌಚಾಲಯ, ಬೀದಿ ದೀಪ, ಗ್ರಾಮೀಣ ರಸ್ತೆ , ಸಾರಿಗೆ ಸಂಪರ್ಕ, ವಿದ್ಯುತ್ ಸಂಪರ್ಕ ಮೂಲಭೂತ ಸೌಲಭ್ಯ ಮತ್ತೊಂದು ದೊಡ್ಡ ಸಮಸ್ಯೆ.

ಚುನಾವಣೆ ಕ್ಷೇತ್ರಗಳು: ಬಸ್ರೂರು, ಬಳ್ಕೂರು, ಹಂಗಳೂರು, ಆನಗಳ್ಳಿ, ಕೋಣಿ, ಕಂದಾವರ, ಕೋಟೇಶ್ವರ

ಕಾಂಗ್ರೆಸ್ ಬೆಂಬಲಿತ: ಆನಗಳ್ಳಿ
ಬಿಜೆಪಿ ಬೆಂಬಲಿತ: ಕೋಟೇಶ್ವರ, ಬಸ್ರೂರು, ಬಳ್ಕೂರು, ಕೋಣಿ, ಕಂದಾವರ, ಹಂಗಳೂರು.

Koteshwara Zilla panchayath election special report on Kundapa (1) Koteshwara Zilla panchayath election special report on Kundapa (2)

Leave a Reply