ನೈರ್ಮಲ್ಯಯುಕ್ತ, ರೋಗಮುಕ್ತ ಪಟ್ಟಣ ರಾಜ್ಯ ಸರಕಾರದ ಗುರಿ : ಸೊರಕೆ

Click Here

Call us

Call us

Call us

ಕುಂದಾಪುರ: ನಗರ, ಪಟ್ಟಣಗಳ ಮೂಲಭೂತ ಸೌಲಭ್ಯ, ವಾರಪೂರ್ತಿ ಶುದ್ಧಿ ಕುಡಿಯುವ ನೀರು ಪೂರೈಕೆ, ವೈಜ್ಞಾನಿಕ ಕಸ ವಿಲೇವಾರಿ, ಒಳ ಚರಂಡಿ ಯೋಜನೆ ಮೂಲಕ ತ್ಯಾಜ್ಯ ನೀರಿ ಪರಿಷ್ಕರಿಸಿ ಕೃಷಿ ಮತ್ತು ಕೃಷಿಯೇತರಕ್ಕ ಬಳಕೆ ಜೊತೆ ನಗರ ಪಟ್ಟಣಗಳ ರೋಗ ಮುಕ್ತವಾಗಿ ಪರಿವರ್ತಿಸುವುದು ನಮ್ಮ ರಾಜ್ಯ ಕಾಂಗ್ರೆಸ್ ಸರಕಾರದ ಗುರಿ ಎಂದು ಜಿಲ್ಲಾ ಉಸ್ತುವಾರ ಸಚಿವ ವಿನಿಯ ಕುಮಾರ್ ಸೊರಕೆ ಹೇಳಿದ್ದಾರೆ.

Call us

Click Here

ಶನಿವಾರ ಕುಂದಾಪುರ ಪುರಸಭೆ ಹಾಗೂ ಕರ್ನಾಟಕ ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸಹಯೋಗದೊಂದಿಗೆ ಆರಂಭಗೊಳ್ಳಲಿರುವ ಕುಂದಾಪುರ ಪುರಸಭಾ ವ್ಯಾಪ್ತಿಯ ಒಳಚರಂಡಿ ಯೋಜನೆಗೆ ಶಿಲನ್ಯಾಸ ನೆರವೇರಿಸಿ ಮಾತನಾಡಿದರು.

ಕರಾವಳಿ ತೀರದ ನಗರ ಪಟ್ಟಣಗಳ ಕುಡಿಯುವ ನೀರು ಮತ್ತು ಕಸ ವಿಲೇವಾರಿಗೆ ಅತ್ಯಾಧುನಿಕ ಟೆಚ್ಚ್ ನೀಡಿ, ತ್ಯಾಜ್ಯದಿಂದ ಗೊಬ್ಬರ ಮತ್ತು ವಿದ್ಯುತ್ ಉತ್ಪಾದನೆ ಮಾಡುವ ಬಗ್ಗೆ ಹೆಚ್ಚು ಒತ್ತು ನೀಡಲಾಗುತ್ತದೆ. ಎಡಿಬಿ ಯೋಜನೆಯಲ್ಲಿ 27 ಕೋಟಿ ರೂ.ವೆಚ್ಚದಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ಕುಡಿಯುವ ನೀರು ಯೋಜನೆ ಜಾರಿಗೆ ತರಲಾಗುತ್ತದೆ ಎಂದು ಹೇಳಿದರು.

ಕುಂದಾಪುರ ಒಳಚರಂಡಿ ಯೋಜನೆಗೆ ೪೮.೧೪ ಕೋಟಿ ಅನುದಾನವಿದ್ದು, ಮೊದಲ ಹಂತದಲ್ಲಿ ೩೨ ಕೋಟಿ ವೆಚ್ದದ ಕಾಮಗಾರಿ ಇನ್ನು ಹತ್ತು ದಿನದಲ್ಲಿ ಕೈಗೆತ್ತಿಕೊಳ್ಳಲಾಗುತ್ತದೆ. ಒಳಚರಂಡಿಗೆ ಬೇಕಾಗುವ ಭೂಮಿ ವಶಕ್ಕೆ ಪಡೆದ ನಂತರ ಮುಂದಿನ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂಬ ಮಾಹಿತಿ ನೀಡಿದರು.
ನಗರಪಟ್ಟಣಗಳಲ್ಲಿ ಸರಕಾರಿ ಜಾಗದಲ್ಲಿ ವಾಸ್ತವ್ಯ ಮಾಡಿದ ಜನರಿಗೆ 94.ಸಿಯಲ್ಲಿ ಹಕ್ಕು ಪತ್ರ ನೀಡಲಾಗುತ್ತದೆ. ಆನಗಳ್ಳಿ ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಕುಂದಾಪುರ ಪುರಸಭೆ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗುತ್ತದೆ. ಪುರೆಸಭೆಗಳಿಗೆ ಹಿಂದೆ ನೀಡುತ್ತಿದ್ದ ೫ ಕೋಟಿ ಅನುದಾನ ಬದಲು ೮ ಕೋಟಿ ನೀಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗುತ್ತದೆ ಎಂದರು

ಕುಂದಾಪುರ ಪುರಸಭಾಧ್ಯಕ್ಷೆ ಯು.ಎಸ್. ಕಲಾವತಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಪುರಸಭಾ ಉಪಾಧ್ಯಕ್ಷ ನಾಗರಾಜ ಕಾಮಧೇನು, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಾಕೋಬ್ ಡಿಸೋಜಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ, ಕರ್ನಾಟಕ ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧೀಕ್ಷಕ ಅಭಿಯಂತರ ಸುರೇಂದ್ರ, ತಹಶೀಲ್ದಾರ್ ಗಾಯತ್ರಿ ಎನ್. ನಾಯ್ಕ್, ಒಳಚರಂಡಿ ಮಂಡಳಿತ ಅಭಿಯಂತರ ನಟರಾಜ್ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಪುರಸಭಾ ವ್ಯಾಪ್ತಿಯ ಉಚಿತ ಗ್ಯಾಸ್ ಸಂಪರ್ಕದ ಯೋಜನೆಯ ಅರ್ಹ ಪಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು. ಪುರಸಭೆಯ ಕಂದಾಯ ನಿರೀಕ್ಷಕಿ ಜ್ಯೋತಿ ಸ್ವಾಗತಿಸಿ ನಿರೂಪಿಸಿದರು. ಸ್ಫೂರ್ತಿ ಜಿ. ಪ್ರಾರ್ಥಿಸಿದರು. ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು.

Leave a Reply