ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ನಡೆದ ಕುಟುಂಬ ಮಿಲನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯೋಗ ಶಿಕ್ಷಕಿ ಆಶಾ ಶಿವರಾಮ್ ಶೆಟ್ಟಿ ಅವರನ್ನು ಆನ್ಸ್ ಕ್ಲಬ್ ಹಿರಿಯ ಸದಸ್ಯರಾದ ಸಾವಿತ್ರಿ ಕನ್ನಂತ, ರತ್ನಾ ಹೊಳ್ಳ ಅವರು ಸನ್ಮಾನಿಸಿದರು.
ಮುಖ್ಯ ಅತಿಥಿ ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಸುಂದರ ಕುಂದಾಪುರ ಕುರಿತು ವಿಶೇಷ ಉಪನ್ಯಾಸ ನೀಡಿ, ದಿನೇ ದಿನೇ ಬೆಳೆಯುತ್ತಿರುವ ಕುಂದಾಪುರದ ಸೌಂದರ್ಯವನ್ನು ವೃದ್ಧಿಸುವ ಮತ್ತು ಜನತೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಇಂಗೀತ ವ್ಯಕ್ತಪಡಿಸಿ ಎಲ್ಲರ ಸಹಕಾರ ಕೋರಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ರೋಟರಿ ಕ್ಲಬ್ ಪೂವಾಧ್ಯಕ್ಷ ಡಾ. ಬಿ. ಆರ್. ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ ಉಪಸ್ಥಿತರಿದ್ದರು. ಆನ್ಸ್ ಕ್ಲಬ್ ಅಧ್ಯಕ್ಷೆ ಭಾರತಿ ಪ್ರಕಾಶ್ ಶೆಟ್ಟಿ, ರೋಟರಿ ಸದಸ್ಯ ನಾಗರಾಜ ಮಯ್ಯ ಅತಿಥಿಗಳನ್ನು ಪರಿಚಯಿಸಿದರು. ಆನ್ಸ್ ಕ್ಲಬ್ ಕಾರ್ಯದರ್ಶಿ ಸುನೇತ್ರಾ ಸತೀಶ್ ಕೋಟ್ಯಾನ್ ವಂದಿಸಿದರು.









