ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹಾಲಾಡಿಯಲ್ಲಿ ಯಕ್ಷಗಾನ ಮೇಳದ ಕ್ಯಾಬ್ ಹಾಗೂ ಬೈಕ್ ನಡುವಿನ ಅಫಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು ಘಟನೆ ವರದಿಯಾಗಿದೆ. ಶಿರಿಯಾರ ಯಡಾಡಿ ನಿವಾಸಿ ಗಣೇಶ್ ಹೆಗ್ಡೆ (35) ಮೃತ ದಾರುಣವಾಗಿ ಮೃತಪಟ್ಟ ದುರ್ದೈವಿ. ಕುಂದಾಪ್ರ ಡಾಟ್ ಕಾಂ ಸುದ್ದಿ.
ಸಾಲಿಗ್ರಾಮ ಮೇಳಕ್ಕೆ ಸೇರಿದ ಮಿನಿ ಬಸ್‌ನಲ್ಲಿ ಮೇಳದ ಕಲಾವಿದರು ರಾತ್ರಿ ಯಕ್ಷಗಾನವನ್ನು ಮುಗಿಸಿ ಬೆಳಿಗ್ಗೆ ಬೇರೊಂದೆಡೆಗೆ ಪ್ರಯಾಣ ಬೆಳೆಸಿರುವಾಗ ಹಾಲಾಡಿ ಸರ್ಕಲ್ ಬಳಿ ಈ ದುರ್ಘಟನೆ ನಡೆದಿದೆ. ಢಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಕ್ಯಾಬ್‌ನಲ್ಲಿದ್ದ ಕಲಾವಿದರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.