ಕುಂದಾಪುರ ತಾಲೂಕಿನ ವಿವಿಧೆಡೆ ರಾಮನವಮಿ ಆಚರಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಮನವಮಿ ಅಂಗವಾಗಿ ತಾಲೂಕಿನ ವಿವಿಧ ದೇವಸ್ಥಾನ ಹಾಗೂ ಭಜನಾ ಮಂದಿರಗಳಲ್ಲಿ ವಿಶೇಷ ಪ್ರಜೆ ಪುನಸ್ಕರಗಳು ನಡೆದವು. ಕೋಟೇಶ್ವರ, ಕುಂದಾಪುರ, ಮರವಂತೆ, ನಾವುಂದ, ಉಪ್ಮ್ಪಂದ, ಬೈಂದೂರು, ನಾಯ್ಕನಕಟ್ಟೆ, ಸಿದ್ಧಾಪುರ ಮುಂತಾದೆಡೆಗಳಲ್ಲಿ ರಾಮನಾಮ ಸ್ತುತಿ, ಭಜನೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.

Call us

Click Here

ಮರವಂತೆ ಮೀನುಗಾರರ ಸೇವಾ ಸಮಿತಿಯ ಆಶ್ರಯದಲ್ಲಿ ಇಲ್ಲಿನ ಶ್ರೀರಾಮ ಮಂದಿರದಲ್ಲಿ ವಾರ್ಷಿಕ ಭಜನಾ ಸಪ್ತಾಹ ಮತ್ತು ಶ್ರೀರಾಮ ನವಮಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು. ಕಳೆದ ಶನಿವಾರ ದೀಪಸ್ಥಾಪನೆ ನಡೆಸಿ, ಶ್ರೀರಾಮ ಭಜನಾ ಸಪ್ತಾಹ ಆರಂಭಿಸಲಾಗಿತ್ತು. ರಾಮನವಮಿ ನಿಮಿತ್ತ ವಿಶೇಷ ಪೂಜೆ, ಹೋಮಹವನದೊಂದಿಗೆ ಅಖಂಡ ಭಜನೆಗೆ ಚಾಲನೆ ನೀಡಲಾಯಿತು. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ರಾಮಮಂದಿರದಿಂದ ಮಹಾರಾಜಸ್ವಾಮಿ ವರಾಹ ದೇವಸ್ಥಾನದ ವರೆಗೆ ಪುರಮೆರವಣಿಗೆ ಹಮ್ಮಿಕೊಳ್ಳಲಾಯಿತು. ಮರುದಿನ ಬೆಳಿಗ್ಗೆ ಮಂಗಲೋತ್ಸವದೊಂದಿಗೆ ಭಜನಾ ಸಪ್ತಾಹ ಕೊನೆಗೊಳ್ಳುವುದು. ಈ ವಾರ್ಷಿಕ ಆಚರಣೆಯ ನಿಮಿತ್ತ ಶ್ರೀರಾಮ ಮಂದಿರವನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ಸಮಿತಿಯ ಅಧ್ಯಕ್ಷ ಬಿ. ವೆಂಕಟೇಶ ಖಾರ್ವಿ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.

ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ದೇವರ ಪ್ರಾರ್ಥನೆ, ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ ಜರುಗಿತು. ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾಸಮಾರಾಧನೆ ನಡೆಯಿತು. ದೇವಸ್ಥಾನದ ಮೊಕ್ತೇಸರರು, ಜಿಎಸ್‌ಬಿ ಸಮಾಜ ಭಾಂದವರು ಉಪಸ್ಥಿತರಿದ್ದರು. ದೇವತಾ ವಿಧಿ ವಿಧಾನಗಳನ್ನು ವೇ.ಮೂ.ಶ್ರೀನಿವಾಸ ಭಟ್ ಮತ್ತು ವೇ.ಮೂ.ಪ್ರಶಾಂತ ಭಟ್ ನೇರವೇರಿಸಿದರು.

Pattabhi ramachandra temple Koteshwara - Ramanavami (3) Pattabhi ramachandra temple Koteshwara - Ramanavami (2)

Leave a Reply