ಯಕ್ಷರಂಗದ ಭರವಸೆಯ ಕಲಾವಿದ ಪ್ರಸನ್ನ ಶೆಟ್ಟಿಗಾರ್

Call us

Call us

Call us

ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ

Call us

Click Here

ಕರಾವಳಿಯ ಯಕ್ಷರಂಗದ ಬಡಗುತಿಟ್ಟಿನ ಕ್ಷೇತ್ರವನ್ನು ಆಳಿದ ದೀಮಂತ ದಿಗ್ಗಜರುಗಳ ಭವ್ಯ ಪರಂಪರೆಯೇ ನಮ್ಮ ನಡುವೆ ಇದೆ. ಅದೀಗ ಇತಿಹಾಸ ಹೌದು. ಆ ಇತಿಹಾಸದ ಪುಟಗಳಿಗೆ ಮತ್ತೆ ಇನ್ನಷ್ಟು ಸಾಧನೆಗಳನ್ನು ಸೇರಿಸಲು ಯಕ್ಷರಂಗದಲ್ಲಿ ಸಾಧನೆಯಿಂದ ಬೆಳೆಯುತ್ತಿರುವ ಕಲಾವಿದರು ನೂರಾರು ಮಂದಿ ನಮ್ಮ ಮುಂದೆ ಕಾಣಸಿಗುತ್ತಾರೆ. ಅದರಲ್ಲೂ ಯುವ ಕಲಾವಿದರ ಸಾಲಿನಲ್ಲಿ ಭರವಸೆಯ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಕೂಡ ಒರ್ವರು.

6 ವರ್ಷದ ಎಳೆ ವಯಸ್ಸಿನಲ್ಲೇ ಯಕ್ಷರಂಗಕ್ಕೆ ಪಾದಾರ್ಪಣೆ ಮಾಡಿ ಪ್ರಸ್ತುತ ತನ್ನದೇ ಅಭಿಮಾನಿಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಲಾವಿದ ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ. ಕುಂದಾಪುರ ತಾಲೂಕಿನ ಮಂದಾರ್ತಿ ಗ್ರಾಮದ ತಂತ್ರಾಡಿಯ ಗಂಗಾಧರ ಶೆಟ್ಟಿಗಾರ್ ಮತ್ತು ಸುಲೋಚನಾ ದಂಪತಿಯ 3 ಮಕ್ಕಳಲ್ಲಿ ಹಿರಿಯ ಮಗನಾಗಿ ಜನಿಸಿದರು. 20ನೇ ವಯಸಿನಲ್ಲಿಯೇ ತಂತ್ರಾಡಿಯ ಹಿರಿಯಣ್ಣ ಶೆಟ್ಟಿಗಾರ್ ಅವರಿಂದ ಪ್ರಾಥಮಿಕ ನೃತ್ಯಾಭ್ಯಾಸವನ್ನು ಅಭ್ಯಾಸ ಮಾಡಿ, ಅನಂತರ ಮಂದಾರ್ತಿ ಕಲಾಕೇಂದ್ರದಲ್ಲಿ ಪೂರ್ಣ ಪ್ರಮಾಣದ ಅಭ್ಯಾಸವನ್ನು ಪೂರೈಸಿದರು. ಬಳಿಕ ಪ್ರಥಮ ಬಾರಿಗೆ ರಂಗದ ಮೇಲೆ ಮಿಂಚಿದ್ದು ಹುಟ್ಟೂರಿನ ಮೇಳವಾಗಿರುವ ಮಂದಾರ್ತಿ ಮೇಳದಲ್ಲಿ ತಿರುಗಾಟ ನಡೆಸಿದರು. ಆಗ ಬಾಲಗೋಪಾಲ, ಒಡ್ಡೋಲಗದ ನೃತ್ಯ ಇತ್ಯಾದಿ ವೇಷಗಳ ಮೂಲಕ ಇನ್ನಷ್ಟು ಅಭ್ಯಾಸವನ್ನು ತಿರುಗಾಟದಲ್ಲೇ ನಡೆಸಿದರು.  ಕುಂದಾಪ್ರ ಡಾಟ್ ಕಾಂ ಲೇಖನ.

ಯಕ್ಷಗಾನದಲ್ಲಿ ಪ್ರಬುದ್ಧ ಕಲಾವಿದ ಎಂಬ ಹೆಗ್ಗಳಿಕೆ ಪಡೆಯಲು ಕೆಲವು ಅರ್ಹತೆಗಳಿವೆ. ಆಳಂಗ ನಿಲುವು, ಶೃತಿ, ಬದ್ದ ಸ್ವರ, ವೇಷ ಭೂಷಣ ಕಟ್ಟುವ ಕೌಶಲ್ಯ, ಗತ್ತು ಗಾಂಭೀರ್ಯ, ಪೌರಾಣಿಕ ಕಥಾವಸ್ತುಗಳ ಬಗ್ಗೆ ಆಳವಾದ ಜ್ಞಾನ, ಲಯಬದ್ಧತೆ ಇತ್ಯಾದಿ. ಹೀಗೆ ಈ ಎಲ್ಲಾ ವಿಚಾರಗಳಲ್ಲಿಯೂ ಪ್ರಸನ್ನ ಗುರುತಿಸಿಕೊಂಡಿದ್ದಾರೆ. ಇವರು ಒಡ್ಡೋಲಗ ವೇಷ, ಮೂರನೇ ವೇಷ, ಪುರುಷ ವೇಷ, ಹೀಗೆ ಹಂತ ಹಂತವಾಗಿ ಹಿರಿಯರ ಒಡನಾಟದಿಂದಲೇ ಪಳಗಿ ಮುಖ್ಯ ವೇಷದ ಸ್ಥಾನ ಪಡೆದರು. ಸುಮಾರು ವರ್ಷದ ಹಿಂದೆ ಅರಾಟೆ ಮಂಜುನಾಥರ ಪ್ರವಾಸಿ ಯುಕ್ಷಗಾನ ಮಂಡಳಿಯ ವತಿಯಿಂದ ಮುಂಬಯಿ ನಗರಕ್ಕೆ ಪ್ರಥಮವಾಗಿ ಕಾಲಿಟ್ಟು ಇವರು ಅನೇಕ ಪೌರಾಣಿಕ ಪಾತ್ರಗಳಲ್ಲಿ ತನ್ನ ಪ್ರತಿಭೆಯನ್ನು ಹೊರ ರಾಜ್ಯಗಳಲ್ಲೂ ತೋರಿಸಿದ್ದಾರೆ.

ಪ್ರಸನ್ನರವರು ಗದಾಯುದ್ಧದ ಕೌರವ, ಕಾರ್ತವೀರ್ಯ, ಚಕ್ರಚಂಡಿಕಾದ ಬರ್ಬರಿಕಾ, ಬಭ್ರುವಾಹನ, ದೇವಿ ಮಹಾತ್ಮೆಯ ವಿಷ್ಣು, ರುದ್ರಕೋಪ ಮುಂತಾದ ಪಾತ್ರಗಳು ಸುಪ್ರಸಿದ್ಧವಾಗಿದೆ. ಸಾಮಾಜಿಕ ಪ್ರಸಂಗಗಳಲ್ಲಿಯೂ ಸೈಎನಿಸಿಕೊಂಡಿದ್ದಾರೆ. ಕಳೆದವರ್ಷದ ಈಶ್ವರ ಮಂಗಲ ವಿರಚಿತ ವಜ್ರ ಮಾನಸಿ ಪ್ರಸಂಗದಲ್ಲಿ ಭುವನೇಂದ್ರನಾಗಿ ಹೀಗೆ ಹಲವು ಪ್ರಸಂಗಗಳಲ್ಲಿ ಪಾತ್ರವನ್ನು ನಿರ್ವಹಿಸಿದ್ದಾರೆ. ಇವರ ಅಭಿನಯದಲ್ಲಿ ಬಡಾ ಬಡಗಿನ ಕಲಾವಿದರ ಚಿರಮುದ್ರೆಯನ್ನು ಕಾಣುತ್ತೇವೆ.

Click here

Click here

Click here

Click Here

Call us

Call us

ಇವರು ರಂಗದ ಮೇಲೆ ಮಿಂಚಲು ಮತ್ತು ತಪ್ಪೊಪ್ಪುಗಳನ್ನು ತಿದ್ದಿದವರು ಸಾಲಿಗ್ರಾಮದ ಮೇಳದ ಹಿರಿಯ ಕಲಾವಿದರು ಮತ್ತು ಇತರರು. ತನ್ನ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ನೀಡಿದ ಮೇಳದ ಯಜಮಾನರನ್ನು ಮತ್ತು ಹಿರಿಯ ಕಲಾವಿದರನ್ನು ಸ್ಮರಿಸುತ್ತಾರೆ. ನಿರಂತರ ೬ ವರ್ಷಗಳ ಕಾಲ ಮಂದಾರ್ತಿ ಮೇಳದಲ್ಲಿ ಕಲಾಸೇವೆ ಗೈದು ಪ್ರಸ್ತುತ ಪ್ರಸಿದ್ಧ ಮೇಳವಾದ ಸಾಲಿಗ್ರಾಮ ಮೇಳದ ತಿರುಗಾಟದಲ್ಲಿ ಇದ್ದಾರೆ. ಇವರ ಕಲಾಸೇವೆ ಇನ್ನೂ ನಿರಂತರವಾಗಿ ನಡೆದು ಕಲಾಕ್ಷೇತ್ರದಲ್ಲಿ ವಿನೂತನ ಸಾಧನೆ ಮಾಡಲಿ ಎಂದು ಹಾರೈಸೋಣ. © ಕುಂದಾಪ್ರ ಡಾಟ್ ಕಾಂ.

ಲೇಖಕರು ಮಂಗಳೂರು ಎಕ್ಸಪರ್ಟ್  ಪಿಯು ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರು.

Leave a Reply