ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮರಳಿ ಬಿಜೆಪಿಗೆ!

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯ ಬಿಜೆಪಿ ಸರಕಾರದ ಅವಧಿಯಲ್ಲಿ ಸಚಿವ ಸಂಪುಟ ಪುನಃರಚನೆಯ ವೇಳೆ ಸಚಿವ ಕೈತಪ್ಪಿದ್ದರಿಂದ ಬಿಜೆಪಿ ಪಕ್ಷ ತೊರೆದು ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಬಂದಿದ್ದ ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮರಳಿ ಮಾತೃ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಈ ಬಗ್ಗೆ ಹಲವು ದಿನಗಳಿಂದ ಹಬ್ಬಿದ್ದ ವದಂತಿಗಳಿಗೆ ತೆರೆ ಬಿದ್ದಿದ್ದು, ಸ್ವತಃ ಶಾಸಕ ಹಾಲಾಡಿ ಬಿಜೆಪಿ ಸೇರುವ ಬಗೆಗೆ ತಮ್ಮ ನಿಲುವು ಸ್ಪಷ್ಟಪಡಿಸಿದ್ದಾರೆ.

Call us

Click Here

ಬೆಂಗಳೂರಿನ ಅರಮನೆ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿರುವ ಹಿಂದುಳಿದ ವರ್ಗದವರ ಬೃಹತ್ ಏಕತಾ ಸಮಾವೇಶದಲ್ಲಿ ಭಾಗವಹಿಸಿದ್ದ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತನಗೆ ಬಿಜೆಪಿ ಮಾತೃಪಕ್ಷ. ಈ ಹಿಂದೆ ಮೂರು ಬಾರಿ ಶಾಸಕನಾಗಿ ಬಿಜೆಪಿಯಿಂದ ಆಯ್ಕೆಯಾಗಿದ್ದೆ. ಕೆಲವು ಅಹಿತಕರ ಘಟನೆಯಿಂದ ಮನನೊಂದು ಪಕ್ಷ ತೊರೆಯಬೇಕಾಯಿತು. ಆದರೆ ಈಗ ಎಲ್ಲವೂ ಇತಿಹಾಸ. ಪುನಃ ಪಕ್ಷ ಸೇರ್ಪಡೆಯಾಗುವಂತೆ ಮುಖಂಡರು ಹೇಳಿದ್ದರಿಂದ ಸೇರ್ಪಡೆಗೊಳ್ಳುತ್ತಿದ್ದೇನೆ. ಕುಂದಾಪ್ರ ಡಾಟ್ ಕಾಂ.

ನಾನು ಪಕ್ಷೇತರ ಶಾಸಕನಾಗಿರುವುದರಿಂದ ಪಕ್ಷ ಸೇರಲು ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಆದರೆ ಬಿಜೆಪಿ ಸೇರುವುದು ಖಚಿತ ಎಂದು ಸ್ಪಷ್ಟಪಡಿಸಿದ ಅವರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿ ಟಿಕೆಟ್ ನೀಡಿದರೆ ಸ್ಪರ್ಧಿಸಲು ಸಿದ್ದನಿದ್ದೇನೆ ಎಂದು ಹೇಳಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಈ ಹಿಂದೆ ಸದಾನಂದ ಗೌಡ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಉಡುಪಿ ಜಿಲ್ಲೆಯಿಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿಗೆ ಮಂತ್ರಿಸ್ಥಾನ ನೀಡಲು ಮುಂದಾಗಿದ್ದರು. ಆದರೆ ಕೊನೆಕ್ಷಣದಲ್ಲಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬದಲಿಗೆ ಕೋಟಾ ಶ್ರೀನಿವಾಸ್ ಪೂಜಾ ಅವರಿಗೆ ಮಂತ್ರಿಸ್ಥಾನ ಲಭಿಸಿತ್ತು. ಇದರಿಂದ ನೊಂದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಪಕ್ಷದ ಚಟುವಟಿಕೆಯಿಂದ ದೂರ ಉಳಿದಿದ್ದರು. 2012ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬಂದಿದ್ದರು. ಆ ಬಳಿಕವೂ ನಡೆದ ಕುಂದಾಪುರದ ತಾಲೂಕಿನ ಪುರಸಭೆ, ಗ್ರಾಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ತಮ್ಮ ಬಾಹ್ಯ ಬೆಂಬಲ ನೀಡಿದ್ದರು. ಕುಂದಾಪ್ರ ಡಾಟ್ ಕಾಂ – Kundapraa.com

kundapur mla Halady Shrinivas Shetty joining Back to BJP party

Click here

Click here

Click here

Click Here

Call us

Call us

Leave a Reply