ಕುಂದಾಪುರದ ದಂಪತಿಗೆ ಏಕಕಾಲಕ್ಕೆ, ಒಂದೇ ವಿಭಾಗದಲ್ಲಿ ಡಾಕ್ಟರೇಟ್ ಪದವಿ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ, ಡಿ23: ಕುಂದಾಪುರ ಮೂಲಕ ದಂಪತಿಗೆ ಇದೇ ಮೊದಲ ಭಾರಿಗೆ ಒಂದೇ ವಿಭಾಗದಲ್ಲಿ, ಒಬ್ಬರದೇ ಮಾರ್ಗದರ್ಶನದಲ್ಲಿ ಏಕಕಾಲಕ್ಕೆ ಕುವೆಂಪು ವಿಶ್ವವಿದ್ಯಾನಿಲಯದ ಡಾಕ್ಟರೇಟ್ ಪದವಿ ದೊರೆತಿದ್ದು, ಕುಂದಾಪುರದ ಹಿರಿಮೆಗೊಂದು ಗರಿ ಮೂಡಿಸಿದಂತಾಗಿದೆ.

Call us

Click Here

ಬೆಂಗಳೂರಿನಲ್ಲಿ ಪತ್ರಕರ್ತರಾಗಿರುವ ಬಿ. ಅರವಿಂದ ಶೆಟ್ಟಿ ಹಾಗೂ ಅವರ ಪತ್ನಿ ಪ್ರಾಧ್ಯಾಪಕಿಯಾಗಿರುವ ವಾಹಿನಿ ಅರವಿಂದ್ ಅವರು ಮಂಡಿಸಿದ ಪ್ರತ್ಯೇಕ ಪ್ರಬಂಧಕ್ಕೆ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದ್ದು, ಇಂದು ಶಿವಮೊಗ್ಗದ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ 27ನೇ ವಾರ್ಷಿಕ ಘಟಿಕೋತ್ಸವದಲ್ಲಿ  ದಂಪತಿಗಳಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಿಲಾಯಿತು. ಕುಂದಾಪ್ರ ಡಾಟ್ ಕಾಂ.

ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖಸ್ಥರು ಹಾಗೂ ಸಹ ಪ್ರಾಧ್ಯಾಪಕರು ಆದ ಡಾ. ಪಿ.ಎ. ವರ್ಗೀಸ್ ಅವರ ಮಾರ್ಗದರ್ಶನಲ್ಲಿ ಇವರಿಬ್ಬರು ಪ್ರಬಂಧ ಮಂಡಿಸಿದ್ದರು. ಅರವಿಂದ ಶೆಟ್ಟಿ ಅವರು ‘ಬದಲಾದ ಸಾಮಾಜಿಕ-ಆರ್ಥಿಕ ಮತ್ತು ಮಾಧ್ಯಮ ಪರಿಸರ: ಕರ್ನಾಟಕ ಗ್ರಾಮೀಣ ಪತ್ರಿಕೆಗಳ ಉಳಿವಿನ ಕಾರ್ಯತಂತ್ರಗಳು’ ಎಂಬ ವಿಷಯದ ಮೇಲೆ ಮತ್ತು ಅವರ ಪತ್ನಿ ವಾಹಿನಿ ಅರವಿಂದ್ ಮಂಡಿಸಿದ ‘ಗ್ರಾಮೀಣ ಕರ್ನಾಟಕದಲ್ಲಿ ಆರೋಗ್ಯ ಜಾಗೃತಿ ಹಾಗೂ ಆಚರಣೆಯ ಮೇಲೆ ಬಹುಸಂವಹನ ಮಧ್ಯಸ್ಥಿಕೆಯ ಪರಿಣಾಮ: ಸುಗ್ಗನಹಳ್ಳಿ ಒಂದು ಅಧ್ಯಯನ’ ಎಂಬ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ. ಕುಂದಾಪ್ರ ಡಾಟ್ ಕಾಂ ವರದಿ.

ಅರವಿಂದ್‌ಶೆಟ್ಟಿ ಪ್ರಸ್ತುತ ಆಂಗ್ಲ ದೈನಿಕ ‘ಡೆಕ್ಕನ್ ಕ್ರಾನಿಕಲ್’ನಲ್ಲಿ ಸೇವೆ ಸಲ್ಲಿಸುತ್ತಿದ್ದರೆ, ವಾಹಿನಿ ಅರವಿಂದ್ ಅವರು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯುನ್ಮಾನ ಮಾಧ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ದಂಪತಿಗಳು ಕುಂದಾಪುರ ಮೂಲದವರಾಗಿದ್ದು ಅರವಿಂದ ಶೆಟ್ಟಿ ಅವರ ಮುದ್ದೂರು ವಿಠ್ಠಲ ಶೆಟ್ಟಿ ಅವರ ಪುತ್ರರಾದರೇ, ವಾಹಿನಿ ಶೆಟ್ಟಿ ನಾವುಂದದ ನಿವೃತ್ತ ಮುಖ್ಯೋಪಧ್ಯಾಯ ಭಾಸ್ಕರ ಶೆಟ್ಟಿ ಅವರ ಪುತ್ರಿ. © ಕುಂದಾಪ್ರ ಡಾಟ್ ಕಾಂ.

Click here

Click here

Click here

Click Here

Call us

Call us

Husband-wife got doctorate on same stream, Same time and guide also same in Kuvempu university Shimoga. Kundapura origine Journalist Aravinda Shetty and Professor Vahini Aravind

Leave a Reply