ವಿಶ್ವದ ಪ್ರತಿಷ್ಠಿತ ಕಲಾ ಮೇಳಕ್ಕೆ ಕುಂದಾಪುರ ಮೂಲದ ತಲ್ಲೂರು ಎಲ್.ಎನ್. ಆಯ್ಕೆ

Call us

Call us

Call us

L N Talluru 1

Call us

Click Here

ಕುಂದಾಪುರ: ವಿಶ್ವದ ಅತ್ಯಂತ ಪ್ರತಿಷ್ಠಿತ ಸಮಕಾಲೀನ ಕಲಾ ಮೇಳವಾದ ಆರ್ಟ್ ಬಾಷೆಲ್‌ನ ‘ಆರ್ಟ್ ಅನ್ ಲಿಮಿಟೆಡ್‌’ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಕುಂದಾಪುರ ಮೂಲದ ಕಲಾವಿದ ತಲ್ಲೂರು ಎಲ್.ಎನ್. ಆಯ್ಕೆ ಆಗಿದ್ದಾರೆ.

ಸ್ವಿಡ್ಜರ್‌ಲ್ಯಾಂಡ್- ಜರ್ಮನಿ ಗಡಿ ಭಾಗದಲ್ಲಿರುವ ಬಾಷೆಲ್ ನಗರದಲ್ಲಿ ಇದೇ ಜೂ.13ರಿಂದ 16ರ ತನಕ ಈ ಕಲಾಮೇಳ ನಡೆಯಲಿದೆ. ನಾಲ್ಕು ದಿನಗಳ ಕಾಲ ನಡೆಯುವ ಪ್ರದರ್ಶನದಲ್ಲಿ ತಲ್ಲೂರು ಎಲ್.ಎನ್ ಅವರನ್ನು ಮುಂಬಯಿಯ ಕೆಮೊಲ್ಡ್ ಮತ್ತು ದಿಲ್ಲಿಯ ನೇಚರ್ ಮೋರ್ತಾ ಗ್ಯಾಲರಿಗಳು ಜೊತೆಯಾಗಿ ಪ್ರಾಯೋಜಿಸಿವೆ.

ಆರ್ಟ್ ಅನ್ ಲಿಮಿಟೆಡ್ ಕಲಾ ಪ್ರದರ್ಶನದಲ್ಲಿ ಜಗತ್ತಿನಾದ್ಯಂತ ಆಯ್ದ 79 ಮಂದಿ ಕಲಾವಿದರು ಭಾಗವಹಿಸುತ್ತಿದ್ದು, ವಿವಿಧ ವಿಭಾಗಗಳಲ್ಲಿ ಜಗತ್ತಿನ ಒಟ್ಟು 300 ಗ್ಯಾಲರಿಗಳು ತಮ್ಮ ಕಲಾವಿದರ ಕಲಾಕೃತಿಗಳನ್ನು ಇಲ್ಲಿ ಪ್ರದರ್ಶಿಸಲಿದೆ.

ತಲ್ಲೂರ್ ಎನ್. ಎಲ್ ಪರಿಚಯ:
1971ರಲ್ಲಿ ತಾಲೂಕಿನ ತಲ್ಲೂರಿನಲ್ಲಿ ಜನಿಸಿದ ತಲ್ಲೂರು ಎಲ್. ಎನ್(ತಲ್ಲೂರು ಲಕ್ಷ್ಮೀನಾರಾಯಣ), ಮೈಸೂರು ವಿಶ್ವವಿದ್ಯಾನಿಲಯದಿಂದ ಚಿತ್ರಕಲೆಯಲ್ಲಿ ಬಿ.ಎಫ್.ಎ(bachelor of fine arts) ಪದವಿ, ಬರೋಡಾ ವಿಶ್ವವಿದ್ಯಾನಿಲಯದಿಂದ ಎಂ.ಎಫ್.ಎ ಪದವಿ ಪಡೆದು, ಯು.ಕೆಯ ಲೀಡ್ದ್ ವಿಶ್ವವಿದ್ಯಾನಿಲಯದಲ್ಲಿ ಸಮಕಾಲೀನ ಕಲೆ ಕುರಿತು ಎಂ.ಎ ಪದವಿ ಪಡೆದಿದ್ದಾರೆ. ಅವರು ಪ್ರಸ್ತುತ ದಕ್ಷಿಣ ಕೋರಿಯಾದಲ್ಲಿ ವಾಸವಾಗಿದ್ದಾರೆ.

Click here

Click here

Click here

Click Here

Call us

Call us

ಪ್ರಶಸ್ತಿಗಳು:
ತಲ್ಲೂರು ಎಲ್. ಎನ್ ಅವರಿಗೆ 1995ರಲ್ಲಿ ಕರ್ನಾಟಕ ಲಲಿತಕಲಾ ಅಡಾಡೆಮಿಯ ವಿದ್ಯಾರ್ಥಿ ವೇತನ, 1996ರಲ್ಲಿ ಭಾರತ ಸರ್ಕಾರದಿಂದ ರಾಷ್ಟೀಯ ವಿದ್ಯಾರ್ಥಿ ವೇತನ, 1997ರಲ್ಲಿ ದೆಹಲಿಯ ಇನ್ಲಾಕ್ಸ್ ಪೈನ್ ಆರ್ಟ್ ಪ್ರಶಸ್ತಿ, 1999ರಲ್ಲಿ ನ್ಯೂಯಾರ್ಕನಲ್ಲಿ ಎಮರ್ಜಿಂಗ್ ಆರ್ಟಿಸ್ಟ್ ಪ್ರಶಸ್ತಿ, 2003ರಲ್ಲಿ ದೆಹಲಿಯ ಸಂಸ್ಕ್ರತಿ ಫೌಂಡೇಶನ್ ನಿಡುವ ಸಂಸ್ಕೃತಿ ಪ್ರಶಸ್ತಿ ದೊರೆತಿರುವುದಲ್ಲಿದೇ 2012ರಲ್ಲಿ ಅವರು ತಮ್ಮ ಸಮಕಾಲೀನ ಕಲಾಕೃತಿಗಳಿಗಾಗಿ 12 ಲಕ್ಷ ನಗದು ಹೊಂದಿರುವ ವಿಶ್ವಪ್ರತಿಷ್ಠಿತ ‘ಸ್ಕೋಡಾ-2012’ ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದರು.
ತಲ್ಲೂರು ಎಲ್ ಎನ್ ಜಗತ್ತಿನ ವಿವಿಧ ದೇಶಗಳಾದ ಅಮೇರಿಕಾ, ಚೈನಾ, ಯೋರೋಪ್, ಜರ್ಮನಿ, ದಕ್ಷಿಣ ಕೋರಿಯಾ, ಲಂಡನ್ ಹಾಗೂ ಭಾರತದ ದೆಹಲಿ, ಮುಂಬೈ ಹಾಗೂ ಬೆಂಗಳೂರಿನಲ್ಲಿ ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಹಲವಾರು ಕಾರ್ಯಾಗಾರ ಗಳಲ್ಲಿ ಭಾಗವಹಿಸಿದ್ದಾರೆ.
ಕಲಾಮೇಳದಲ್ಲಿ ತಲ್ಲೂರು ಎಲ್.ಎನ್. ಅವರ ‘ವೆನಿ, ವಿಡಿ, ವಿಸಿ’ ಕಲಾಕೃತಿಗಳು ಪ್ರದರ್ಶನಗೊಳ್ಳಲಿದ್ದು, ಕರಾವಳಿ ಜಿಲ್ಲೆಗಳ ಜೊತೆ ಬಾಷೆಲ್ ಮಿಷನರಿಗಳ ನಿಡುಗಾಲದ ಸಂಬಂಧಗಳ ಹಿನ್ನೆಲೆಯಲ್ಲಿ ಅವರದೇ ಕೊಡುಗೆಯಾದ ಹೆಂಚುಗಳನ್ನು ಬಳಸಿಕೊಂಡು ಸಿದ್ಧಪಡಿಸಿರುವ ಕಲಾಕೃತಿ ಮೂಲ ಬಾಷೆಲ್ ನಗರದಲ್ಲಿ ಪ್ರದರ್ಶನಗೊಳ್ಳುತ್ತಿರುವುದು ಮಹತ್ವದ್ದೆನಿಸಿದೆ.

Leave a Reply