ನೀವು ಹೊಸ ಕಂಪ್ಯೂಟರ್ ಅನ್ನು ತಂದಿದ್ದೀರಿ ಮತ್ತು ಅದನ್ನು ಭದ್ರಪಡಿಸಲು ಇಚ್ಛಿಸುತ್ತಿದ್ದೀರಾ? ಹಾಗಿದ್ದರೆ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿರುವ ಸಲಹೆಗಳು ಇಲ್ಲಿವೆ. ನಿಮ್ಮ ಕಂಪ್ಯೂಟರ್‌ನ ಜೊತೆಗೆ ಅದರಲ್ಲಿರುವ ಫೈಲ್‌ಗಳನ್ನು ಹೇಗೆ ಭದ್ರಪಡಿಸುವುದು ಎಂಬುದರ ಬಗ್ಗೆ ಮಾಹಿತಿಯನ್ನು ಇಂದಿನ ಲೇಖನ ನಿಮಗೆ ನೀಡಲಿದೆ. ಇದನ್ನೂ ಓದಿ: ಸಿಮ್ ಲಾಕ್ ಆಗಿದೆಯೇ? ಇಲ್ಲಿದೆ ಪರಿಹಾರ ನಿಮ್ಮ ಕಂಪ್ಯೂಟರ್ ಅನ್ನು ಹೇಗೆ ಆರಿಸಬೇಕು ಅದರಲ್ಲಿರುವ ಫೈಲ್‌ಗಳನ್ನು ಹೇಗೆ ಭದ್ರಪಡಿಸಬೇಕು ಎಂಬುದನ್ನು ಕುರಿತ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ. ಹಾಗಿದ್ದರೆ ಆ ಅಂಶಗಳು ಯಾವುವು ಎಂಬುದನ್ನು ನೋಡೋಣ.
ಆಪರೇಟಿಂಗ್ ಸಿಸ್ಟಮ್ ಆರಿಸಿ
ಭದ್ರತೆ ಮತ್ತು ಅದರ ಬಳಕೆಯನ್ನು ಅನುಸರಿಸಿ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಮ್ ಆರಿಸಿ. ಬಳಕೆದಾರರ ಖಾತೆಗಳು, ಫೈಲ್ ಅನುಮತಿಗಳು ಮೊದಲಾದ ಮಾಹಿತಿಗಳನ್ನು ಆಗಾಗ್ಗೆ ನವೀಕರಿಸಲಾಗುತ್ತಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಆಪರೇಟಿಂಗ್ ವ್ಯವಸ್ಥೆಯನ್ನು ಭದ್ರತಾ ನವೀಕರಣಗಳೊಂದಿಗೆ ನವೀಕರಿಸುತ್ತಿರಿ ಮತ್ತು ಇತರ ಸಾಫ್ಟ್‌ವೇರ್ ಕಡೆಗೂ ಈ ಭದ್ರತೆಯನ್ನು ಅನುಸರಿಸುತ್ತಿರಿ.
ವೆಬ್ ಬ್ರೌಸರ್
ನಿಮ್ಮ ವೆಬ್ ಬ್ರೌಸರ್ ಮೂಲಕ ಮಾಲ್‌ವೇರ್‌ಗಳು ನಿಮ್ಮ ಕಂಪ್ಯೂಟರ್ ಅನ್ನು ಪ್ರವೇಶಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಭದ್ರತೆಯ ಕಡೆಗೆ ಹೆಚ್ಚು ಗಮನ ಹರಿಸಿ.
ನಿಮ್ಮ ಬಳಕೆದಾರ ಖಾತೆ
ರೂಟರ್ ಖಾತೆ ಪಾಸ್‌ವರ್ಡ್ ಭದ್ರವಾಗಿರಲಿ ನಿಮ್ಮ ಬಳಕೆದಾರ ಖಾತೆ ಮತ್ತು ರೂಟರ್ ಖಾತೆಯ ಪಾಸ್‌ವರ್ಡ್ ಅನ್ನು ಭದ್ರವಾಗಿರಿಸುವುದು ಕಂಪ್ಯೂಟರ್‌ನ ಸುರಕ್ಷತೆಗೆ ಅತೀ ಅಗತ್ಯವಾಗಿದೆ.
ವಿಶ್ವಾಸಾರ್ಹ ಮೂಲಗಳನ್ನು ಬಳಸಿ
ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡುವ ಸಂದರ್ಭದಲ್ಲಿ ವಿಶ್ವಾಸಾರ್ಹ ಮೂಲಗಳಿಂದ ಅವುಗಳನ್ನು ಹುಡುಕಿ ಮತ್ತು ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ.
ಉತ್ತಮ ಆಂಟಿವೈರಸ್ ಸಾಫ್ಟ್‌ವೇರ್
ನಿಮ್ಮ ಕಂಪ್ಯೂಟರ್‌ನಲ್ಲಿ ಉತ್ತಮ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಅಳವಡಿಸುವುದು ತುಂಬಾ ಮುಖ್ಯವಾಗಿದೆ. ಭದ್ರವಾದ ಆಂಟಿವೈರಸ್ ನಿಮ್ಮ ಕಂಪ್ಯೂಟರ್ ಅನ್ನು ಸುರಕ್ಷಿತವಾಗಿರಿಸುತ್ತದೆ.
ಸ್ಪೈವೇರ್‌ನೊಂದಿಗೆ ಹೋರಾಡುವ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಿ
ಆಂಟಿ ಸ್ಪೈವೇರ್ ಮತ್ತು ಆಂಟಿ ಮಾಲ್‌ವೇರ್ ಪ್ರೊಗ್ರಾಮ್ ಆದ ಸ್ಪೈಬೋಟ್ ಅನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಚಾಲನೆ ಮಾಡುವುದು ಅತೀ ಅವಶ್ಯಕವಾಗಿದೆ.
ಫೈರ್‌ವಾಲ್ ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡಿ
ನೀವು ರೂಟರ್ ಅನ್ನು ಬಳಸುತ್ತಿದ್ದೀರಿ ಎಂದಾದಲ್ಲಿ, ಫೈರ್‌ವಾಲ್‌ನ ಬಳಕೆಯು ನಿಮಗೆ ಹೆಚ್ಚುವರಿ ಭದ್ರತೆಯನ್ನು ನೀಡುತ್ತದೆ.
ಎಲ್ಲಾ ಪೋರ್ಟ್‌ಗಳನ್ನು ಮುಚ್ಚಿ
ಪೋರ್ಟ್ ಸ್ಕ್ಯಾನಿಂಗ್ ಅನ್ನು ಹ್ಯಾಕರ್‌ಗಳು ಬಳಸುವ ಸಾಧ್ಯತೆ ಹೆಚ್ಚಿರುವುದರಿಂದ ಎಲ್ಲಾ ಪೋರ್ಟ್‌ಗಳನ್ನು ಮುಚ್ಚುವುದು ಅತೀ ಅವಶ್ಯಕವಾಗಿದೆ.
ಪೆನಟ್ರೇಶನ್ ಪರೀಕ್ಷೆ ಮಾಡಿ
ಪಿಂಗ್‌ನೊಂದಿಗೆ ಆರಂಭಿಸಿ, ನಂತರ ಸರಳವಾದ ಎನ್ ಮ್ಯಾಪ್ ಸ್ಕ್ಯಾನ್ ಅನ್ನು ರನ್ ಮಾಡಿ.