ಗಂಗೊಳ್ಳಿ: ಎಸ್.ವಿ. ಶಾಲೆಯಲ್ಲಿ ವಿದ್ಯಾರ್ಥಿ ನಾಯಕನ ಆಯ್ಕೆಗೆ ಬಿರುಸಿನ ಮತದಾನ!

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನವಣಾ ಪ್ರಕ್ರಿಯೆ ಕಾವು ಪಡೆಯುತ್ತಿದ್ದರೆ ಇನ್ನೊಂದೆಡೆ ಇಲ್ಲೊಂದು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ ಹಾಗೂ ವಿದ್ಯಾರ್ಥಿ ಉಪನಾಯಕನ ಆಯ್ಕೆಗಾಗಿ ಸಾರ್ವತ್ರಿಕ ಮಾದರಿಯ ಚುನಾವಣೆ ಸುರಿವ ಮಳೆಯ ನಡುವೆಯೂ ಬಿರುಸಿನಿಂದ ನಡೆಯಿತು.

Call us

Click Here

ಕುಂದಾಪುರ ವಲಯದ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಸಂಸದೀಯ ಮಾದರಿಯ ಚುನಾವಣೆಯ ಮೂಲಕ ವಿದ್ಯಾರ್ಥಿ ನಾಯಕ ಮತ್ತು ಉಪನಾಯಕನನ್ನು ಆಯ್ಕೆ ಮಾಡಲಾಗುತ್ತಿದೆ. ಮತಗಟ್ಟೆ ಅಧಿಕಾರಿಗಳ ಬಳಿ ಮತದಾರರ ಪಟ್ಟಿ ಇರುತ್ತದೆ. ಓಟು ಹಾಕುವ ಪ್ರತಿ ವಿದ್ಯಾರ್ಥಿಯ ಸಹಿಯನ್ನು ರಿಜಿಸ್ಟರಿನಲ್ಲಿ ಪಡೆಯಲಾಗುತ್ತದೆ. ನಂತರ ಅಳಿಸಲಾಗದ ಶಾಯಿಯನ್ನು ಮತದಾರರ ಬಲಗೈ ತೋರು ಬೆರಳಿಗೆ ಹಾಕಿ ಅಭ್ಯರ್ಥಿಗಳ ಹೆಸರು ಇರುವ ಮುದ್ರಿತ ಮತಪತ್ರವನ್ನು ನೀಡಲಾಗಿ ಅದಕ್ಕೆ ಅಲ್ಲಿ ಇಡಲಾಗಿರುವ ಪೆನ್ನಿನಿಂದ ಗುರುತು ಹಾಕುವ ಮೂಲಕ ವಿದ್ಯಾರ್ಥಿಗಳು ಮತ ಚಲಾಯಿಸುತ್ತಾರೆ. ಮತದಾನ ಪ್ರಕ್ರಿಯೆ ಮುಗಿದ ನಂತರ ಮತ ಎಣಿಕೆಯನ್ನು ಅಭ್ಯರ್ಥಿಗಳ ಸಮ್ಮುಖದಲ್ಲಿ ನಡೆಸಲಾಗುತ್ತದೆ. ಶಾಲೆಯ ವಿದ್ಯಾರ್ಥಿಗಳು ಅತಿ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಶಾಲಾ ವಿದ್ಯಾರ್ಥಿ ನಾಯಕ ಸ್ಥಾನಕ್ಕೆ ಒಟ್ಟು ೯ ಮಂದಿ ಸ್ಪರ್ಧಿಸಿದ್ದು ಅತೀ ಹೆಚ್ಚು ಮತ ಪಡೆದ ೧೦ನೇ ತರಗತಿಯ ಋತು ಎಂ.ಗುತ್ತೇದಾರ್ ಶಾಲಾ ವಿದ್ಯಾರ್ಥಿ ನಾಯಕನಾಗಿ ಆಯ್ಕೆಯಾದರು ಹಾಗೂ ವಿದ್ಯಾರ್ಥಿ ಉಪನಾಯಕನ ಸ್ಥಾನಕ್ಕೆ ಸ್ಪರ್ಧಿಸಿದ ೪ ಮಂದಿಯ ಪೈಕಿ ಅತೀ ಹೆಚ್ಚು ಮತ ಪಡೆದ ರಂಜಿತ್ ನಾಯಕ್ ಉಪ ನಾಯಕನಾಗಿ ಆಯ್ಕೆಯಾದರು.

ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯ ಶಿಕ್ಷಕ ರಾಘವೇಂದ್ರ ಶೇರುಗಾರ್ ಅವರ ಸಂಯೋಜನೆ ಮತ್ತು ಮಾರ್ಗದರ್ಶನದಲ್ಲಿ ಈ ಕಾರ್ಯಕ್ರಮ ನಡೆಯಿತು. ಸಹಶಿಕ್ಷಕರಾದ ಸುಜಾತ ದೇವಾಡಿಗ, ಶೋಭಾ, ಶೈಲಜಾ, ನಾಗರತ್ನ, ಸುಪ್ರೀತಾ, ದಿವ್ಯಶ್ರೀ ಆಚಾರ್ಯ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕಿ ಶಾಂತಿ ಡಿಕೋಸ್ಟ, ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೇಷ್ಮಾ ಸಹಕರಿಸಿದರು.

 

Leave a Reply