Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಒತ್ತಿನಣೆಯ ಕಾಮಗಾರಿಯ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸಿ. ಬೈಂದೂರು ಗಾಣಿಗ ಸಂಘಟನೆಗಳ ಆಗ್ರಹ
    Uncategorized

    ಒತ್ತಿನಣೆಯ ಕಾಮಗಾರಿಯ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಒದಗಿಸಿ. ಬೈಂದೂರು ಗಾಣಿಗ ಸಂಘಟನೆಗಳ ಆಗ್ರಹ

    Updated:20/06/2017No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು: ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಪಡುವರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾಸ್ತಿಕಟ್ಟೆಯ ಮನೆಯೊಂದಕ್ಕೆ ಜೇಡಿ ಮಣ್ಣು ನುಗ್ಗಿ ವಾಸಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಊಟ ಹಾಗೂ ವಸತಿಯಿಲ್ಲದೇ ಅಂತಂತ್ರರಾಗಿರು ಬಡ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ, ಸಮಸ್ಯೆ ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಬೈಂದೂರು ವಲಯ ಗಾಣಿಗ ಯುವ ಸಂಘಟನೆಯ ಅಧ್ಯಕ್ಷ ಶ್ರೀಗಣೇಶ್ ಗಾಣಿಗ ಉಪ್ಪುಂದ ಹೇಳಿದರು.

    Click Here

    Call us

    Click Here

    ಅವರು ಒತ್ತಿನಣೆಯಲ್ಲಿ ನಡೆದ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆಯೊಳಕ್ಕೆ ಜೇಡಿಮಣ್ಣು ನುಗ್ಗಿ ಅಂತಂತ್ರರಾಗಿರುವ ಪಾರ್ವತಿ ಶೇಖರ ಶೆಟ್ಟಿ ಅವರ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಬೈಂದೂರು ವಿಶೇಷ ತಹಶೀಲ್ದಾರರ ಕಛೇರಿ ಎದುರು ನಡೆದ ಸಭೆಯಲ್ಲಿ ಆಗ್ರಹಿಸಿದರು. ಮಳೆಯಿಂದಾಗಿ ಮಣ್ಣು ಮನೆಯೊಳಕ್ಕೆ ಬಂದು ಕುಳಿತಿದ್ದು ಸುಮಾರು ಐದು ಅಡಿಯಷ್ಟು ಮಣ್ಣು ನಿಂತು ವಾಸಿಸಲಾರದ ಸ್ಥಿತಿ ಬಂದೊದಗಿದೆ. ಆಹಾರ ಸಾಮಾಗ್ರಿಗಳು, ಬಟ್ಟೆ, ಮಕ್ಕಳ ಪುಸ್ತಕವೆಲ್ಲ ಕೆಸರು ಮಣ್ಣಿನಲ್ಲಿ ಮುಳುಗಿ ಹೋಗಿದೆ. ಮಳೆಗಾಲದಲ್ಲಿ ಅವರ ಬದುಕು ಕಷ್ಟದಲ್ಲಿದೆ. ಕೂಡಲೇ ಈ ಅವ್ಯವಸ್ಥೆಗೆ ಕಾರಣವಾದ ಕಂಪೆನಿಯ ಮೂಖಾಂತರ ಪರಿಹಾರ ಒದಗಿಸಿಕೊಟ್ಟು, ಸಮಸ್ಯೆ ಮರುಕಳಿಸದಂತೆ ನೋಡಿಕೊಳ್ಳಬೇಕು. ಸೂಕ್ತ ಸ್ಪಂದನ ದೊರೆಯದೇ ಹೋದಲ್ಲಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದರು.

    ಮನವಿ ಸ್ವೀಕರಿಸಿದ ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರತಿಕ್ರಿಯಿಸಿ ಕಳೆದ ವರ್ಷವು ಆ ಪಾರ್ವತಿ ಅವರ ಕುಟುಂಬಕ್ಕೆ ನಷ್ಟವಾಗಿದ್ದು ಪರಿಹಾರ ಒದಗಿಸಿಕೊಡಲಾಗಿತ್ತು. ಈ ಭಾರಿಯೂ ಸಮಸ್ಯೆ ಮರುಕಳಿಸಿದೆ. ಕೂಡಲೇ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಕಂಪೆನಿಯನ್ನು ಸಂಪರ್ಕಿಸಿ ಪರಿಹಾರ ನೀಡುವಂತೆ ತಿಳಿಸಲಾಗುವುದಲ್ಲದೇ, ಸಮಸ್ಯೆ ಮರುಕಳಿಸದಂತೆ ಮುಂಜಾಗ್ರತಾ ಕ್ರಮ ವಹಿಸುವುದಾಗಿ ತಿಳಿಸಿದರು. ಕುಂದಾಪ್ರ ಡಾಟ್ ಕಾಂ ಸುದ್ದಿ.

    ಈ ಸಂದರ್ಭದಲ್ಲಿ ಬೈಂದೂರು ಗಾಣಿಗ ಸೇವಾ ಸಂಘ ಬೈಂದೂರು ಘಟಕದ ಅಧ್ಯಕ್ಷ ಗೋಪಾಲ ಗಾಣಿಗ, ಕಾರ್ಯದರ್ಶಿ ಸವಿತಾ ದಿನೇಶ್, ಉಪ್ಪುಂದ ಘಟಕದ ಅಧ್ಯಕ್ಷ ರಾಘವೇಂದ್ರ ಗಾಣಿಗ, ಕಾರ್ಯದರ್ಶಿ ಗೋಪಿ ಹಾಗೂ ಸಂಘಟನೆಯ ಪ್ರಮುಖರು ಜೊತೆಗಿದ್ದರು.

    Click here

    Click here

    Click here

    Click Here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಪಡುಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಾರ್ಷಿಕೋತ್ಸವ ಹಾಗೂ ಗಣಕಯಂತ್ರ ಹಸ್ತಾಂತರ ಸಮಾರಂಭ

    20/05/2026

    ಎಸ್.ಎಸ್.ಎಲ್.ಸಿ: ರಾಜ್ಯಕ್ಕೆ 5ನೇ ರ್ಯಾಂಕ್‌ ಪಡೆದ ವಿದ್ಯಾರಣ್ಯ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಶಾಲೆಗೆ ಶೇ.100 ಫಲಿತಾಂಶ

    23/04/2026

    ಶಂಕರನಾರಾಯಣ: ಮದರ್ ತೆರೆಸಾ ಶಾಲೆಯ ವಿದ್ಯಾರ್ಥಿ ಎಸ್‌.ಎಸ್.‌ಎಲ್.‌ಸಿಯಲ್ಲಿ ಪ್ರೀತಮ್ ಜಿ. ಪೂಜಾರಿ ರಾಜ್ಯಕ್ಕೆ ಟಾಪರ್‌

    23/04/2026
    Leave A Reply Cancel Reply

    one × 4 =

    Call us

    Click Here

    Call us

    Call us

    Call us
    Highest Viewed Recently
    • ಹಾಲಾಡಿ ಜಮದಗ್ನಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ಪ್ರತಿಷ್ಠಾ ವರ್ಧಂತಿ
    • 21ನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆಳ್ವಾಸ್ ವಿದ್ಯಾರ್ಥಿನಿಯರು
    • ಕುಂದಾಪುರ: ಬಲಾಡಿಯಲ್ಲಿ ಹಿರಿಯ ಯಕ್ಷಗಾನ ಕಲಾವಿದರಿಗೆ ಸನ್ಮಾನ
    • ಶಂಕರನಾರಾಯಣ: ಕಟ್ಟೆಮಕ್ಕಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಶಿಲಾದೇಗುಲ ಲೋಕಾರ್ಪಣೆ
    • ಬಹುಮಾನ ಹಣ ಮಂಜೂರು: ಅರ್ಜಿ ಆಹ್ವಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.