ಕಪ್ಪಾಡಿ ಶಾಲೆ ಕಟ್ಟಡ ಮೇಲ್ಛಾವಣಿ ಕುಸಿತ: ವಿದ್ಯಾರ್ಥಿಗಳು ಅತಂತ್ರ. ಶಾಲೆಗೆ ಕಳಿಸೋಲ್ಲ ಅಂದ್ರು ಪೋಷಕರು

Call us

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಬೈಂದೂರು: ಸಂಪೂರ್ಣ ಶಿಥಿಲಗೊಂಡ ಹಳೆಯ ಅಪಾಯಕಾರಿ ಶಾಲಾ ಕಟ್ಟಡದಲ್ಲಿಯೇ ಆಟ ಪಾಠ. ಮಳೆಗಾಲದಲ್ಲಿ ನೀರಿನ ಪಸೆ ಏಳುವ ಕೋಣೆಯೊಳಕ್ಕೆ ಕುಳಿತುಕೊಂಡ ಮಕ್ಕಳಿಗೆ ಶೀತ ಜ್ವರ ತಪ್ಪಿದ್ದಲ್ಲ. ನಿಂತುಕೊಂಡೆ ಮಧ್ಯಾಹ್ನದ ಊಟ ಸೇವಿಸಬೇಕಾದ ದುಸ್ಥಿತಿ. ಪಕ್ಕದ ದೇವಸ್ಥಾನವೊಂದೇ ತಾತ್ಕಾಲಿಕ ಆಸರೆ. ಇಷ್ಟನ್ನೂ ಸಹಿಸಿಕೊಂಡು ಮಕ್ಕಳನ್ನು ಧೈರ್ಯಮಾಡಿ ಶಾಲೆಗೆ ಕಳುಹಿಸಿದ್ದ ಪೋಷಕರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಶಾಲೆಯ ಮೇಲ್ಛಾವಣಿ ಮತ್ತಷ್ಟು ಶಿಥಿಲಗೊಂಡು ಹೆಂಚುಗಳು ಗಾಳಿ ಮಳೆಗೆ ಉದುರಿ ಬೀಳುತ್ತಿದ್ದು ಮಕ್ಕಳ ಜೀವಕ್ಕೆ ಹೊಣೆಯಾರು ಎಂದು ಆತಂಕಗೊಂಡಿದ್ದಾರೆ. ಉತ್ತರಿಸಬೇಕಾದ ಅಧಿಕಾರಿಗಳು ಮಾತ್ರ ಉಡಾಫೆಯ ಉತ್ತರ ನೀಡಿ ಜಾರಿಕೊಳ್ಳುತ್ತಿದ್ದಾರೆ.

Call us

Click Here

Click here

Click Here

Call us

Visit Now

Click here

ಇದು ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕರುಣಾಜನಕ ಸ್ಥಿತಿ. ಕಳೆದ ನಾಲ್ಕೈದು ವರ್ಷಗಳಿಂದ ಶಾಲಾ ಕಟ್ಟಡಕ್ಕಾಗಿ ಪೋಷಕರು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ನಿರಂತರವಾಗಿ ಮನವಿ ಮಾಡುತ್ತಾ, ಹೋರಾಟ ನಡೆಸುತ್ತಲೇ ಬಂದಿದ್ದರೂ ಆಶ್ವಾಸನೆಗಳು ಈವರೆಗೂ ಕಾರ್ಯ ರೂಪಕ್ಕೆ ಬಂದಿಲ್ಲ.

ಒಂದನೇ ತರಗತಿಯಿಂದ ರಿಂದ ಏಳನೇ ತರಗತಿಯವರೆಗೆ ೪೦ ಮಕ್ಕಳಿಗೆ ಕುಳಿತುಕೊಳ್ಳಲು ಇರುವುದು ಕೇವಲ ಎರಡು ಕೊಠಡಿ. ಒಂದು ತರಗತಿಯ ಮಕ್ಕಳನ್ನು ಹತ್ತಿರದಲ್ಲಿರುವ ದೇವಾಲಯವೊಂದರಲ್ಲಿ ಕುಳ್ಳಿರಿಸಿ ಪಾಠ ಮಾಡಲಾಗುತ್ತದೆ. ಇರುವ ಎರಡು ಕೊಠಡಿಯು ಸಂಪೂರ್ಣ ದುಸ್ಥಿತಿಯಲ್ಲಿದ್ದು ಬೀಸಿದ ಬಿರುಗಾಳಿಗೆ ಅದರ ಮೇಲ್ಛಾವಣೆಯು ಕುಸಿದಿದೆ. ಹೀಗಾಗಿ ಮಕ್ಕಳಿಗೆ ಕುಳಿತುಕೊಳ್ಳಲು ಅನ್ಯ ಕಟ್ಟಡವಿಲ್ಲದೆ ಮಕ್ಕಳು ಅತಂತ್ರರಾಗಿದ್ದಾರೆ.

ಗಾಳಿ ಮಳೆಗೆ ಹಾರಿಹೊದ ಹೆಂಚುಗಳು:
ಸಂಪೂರ್ಣ ಶಿಥಿಲಗೊಂಡಿರುವ ಕಟ್ಟಡದ ಹೆಂಚುಗಳು ಬುಧವಾರ ರಾತ್ರಿಯ ಗಾಳಿ ಮಳೆಗೆ ಕೆಳಕ್ಕೆ ಬಿದ್ದಿವೆ. ಹಳೆಯ ಕಟ್ಟಡವನ್ನು ದುರಸ್ತಿಗೊಳಿಸುವಂತೆ ಪೋಷಕರು ಸಾಕಷ್ಟು ಭಾರಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಏನೂ ಪ್ರಯೋಜನವಾಗಿಲ್ಲ. ಕಳೆದ ವರ್ಷ ಕಾಲ್ತೋಡು ಗ್ರಾಮ ಪಂಚಾಯತಿಯಿಂದ ಶಿಥೀಲಗೊಂಡ ಮೇಲ್ಛಾವಣಿಗೆ ಕಬ್ಬಿಣದ ಕಂಬ ನಿಲ್ಲಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದ ಬಿಟ್ಟರೆ ಮತ್ತೆನೂ ಮಾಡಿರಲಿಲ್ಲ. ಬುಧವಾರ ರಾತ್ರಿ ವೇಳೆಯಲ್ಲಿ ಬಿದ್ದ ಹೆಂಚು ಶಾಲಾ ಅವಧಿಯಲ್ಲಿ ಬಿದ್ದಿದ್ದರೆ ಮಕ್ಕಳ ಗತಿಯೇನು ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಪೋಷಕರ ಧರಣಿ. ಮಕ್ಕಳನ್ನು ಶಾಲೆಗೆ ಕಳುಹಿಸದಿರುವ ನಿರ್ಧಾರ:
ಶಾಲೆಯ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಭಾರಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಈವರೆಗೆ ಶಾಲೆಯ ಸ್ಥಿತಿ ಬದಲಾಗಿಲ್ಲ. ಬೀಳುವ ಹಂಚುಗಳು, ಕುಸಿಯುವ ಗೋಡೆಯ ಮಧ್ಯೆ ನಮ್ಮ ಮಕ್ಕಳನ್ನು ಕೂರಿಸಲು ನಾವು ತಯಾರಿಲ್ಲ. ಶಾಲೆಯನ್ನು ಶೀಘ್ರವೇ ದುರಸ್ತಿಗೊಳಿಸಿ ಇಲ್ಲವೇ ಹೊಸ ಕಟ್ಟಡವನ್ನು ನಿರ್ಮಿಸಿಕೊಡಿ ಎಂದು ಧರಣಿ ನಡೆಸಿದ ಪೋಷಕರು ಆಗ್ರಹಿಸಿದರು. ಮಕ್ಕಳಿಗೆ ಬದಲಿ ವ್ಯವಸ್ಥೆ ಮಾಡದೇ ಹೋದರೆ ನಾವ್ಯಾರೂ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಪೋಷಕರು ಪಟ್ಟು ಹಿಡಿದಿದ್ದಾರೆ.

Call us

ಅಧಿಕಾರಿಗಳ ತರಾಟೆ:
ಶಾಲೆಯ ಮಾಡಿನ ಹೆಂಚು ಬಿದ್ದಿರುವ ವಿಚಾರ ತಿಳಿದ ಡಿಡಿಪಿಐ ದಿವಾಕರ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಓ. ಆರ್. ಪ್ರಕಾಶ್, ತಾಲೂಕು ಅಕ್ಷರದಾಸೋಹದ ಅಧಿಕಾರಿ ಸೀತಾರಾಮ ಶೆಟ್ಟಿ ಹಾಗೂ ಸಿಆರ್‌ಪಿ ಶ್ರೀಕಾಂತ್ ಅವರನ್ನು ಪೋಷಕರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ನಾವು ಅದೆಷ್ಟು ಭಾರಿ ಇಲಾಖೆಯ ಗಮನಕ್ಕೆ ತಂದರೂ ಆ ಬಗ್ಗೆ ಗಮನ ಹರಿಸಿಲ್ಲ. ಪ್ರಸಕ್ತ ವರ್ಷದ ಆರಂಭದಲ್ಲಿ ಶಾಲಾ ಕಟ್ಟಡ ನಿರ್ಮಿಸಿಕೊಟ್ಟರೆ ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡುತ್ತೇವೆ ಎಂದು ಪಟ್ಟು ಹಿಡಿದಿದ್ದ ಪಾಲಕರಿಗೆ ಅಧಿಕಾರಿಗಳು ಕಟ್ಟಡ ನಿರ್ಮಿಸುವ ಭರವಸೆ ನೀಡಿತ್ತು. ಆದರೆ ಈವರೆಗೆ ಆ ಬಗ್ಗೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವು ಭಾರಿ ಶಿಕ್ಷಣಾಧಿಕಾರಿಗಳು ಡಿಡಿಪಿಐ, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾರೂಬ್ಬರೂ ಸಮಸ್ಯೆ ಬಗೆಹರಿಸುವ ಬಗ್ಗೆ ಆಲೋಚಿಸಿಲ್ಲ. ಮಾಡು ಬಿದ್ದ ಮೇಲೆ ಇಲ್ಲಿ ಬಂದು ಮಾಡುವುದೇನಿದೆ ಎಂದು ಅಧಿಕಾರಿಗಳನ್ನು ಪೋಷಕರು ಪ್ರಶ್ನಿಸಿದಾಗ ಸದ್ಯಕ್ಕೆ ಬದಲಿ ವ್ಯವಸ್ಥೆ ಮಾಡೋಣ. ಮತ್ತೆ ಕಟ್ಟಡದ ಪ್ರಸ್ತಾಪವನ್ನು ಕೈಗೆತ್ತಿಕೊಳ್ಳೋಣ ಎಂದಾಗ ಗರಂ ಆದ ಪೋಷಕರು ಬದಲಿ ವ್ಯವಸ್ಥೆ ಮಾಡುವವರು ಇಷ್ಟು ದಿನ ಎಲ್ಲಿದ್ದಿರಿ ಎಂದು ತರಾಟೆಗೆ ತೆಗೆದುಕೊಂಡರು.

ಊಟಕ್ಕಾದರೂ ಶಾಲೆಗೆ ಕಳುಹಿಸಿ!
ಕಟ್ಟಡ ದುರಸ್ತಿ ಅಥವಾ ಬದಲಿ ನಿರ್ಮಾಣ ಆಗುವ ತನಕ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಶಾಲೆಗೆ ಬೀಗ ಹಾಕುತ್ತೇವೆ ಎಂದು ಪೋಷಕರು ಹೇಳಿದಾಗ ಡಿಡಿಪಿಐ ದಿವಾಕರ ಶೆಟ್ಟಿ ಮಕ್ಕಳನ್ನು ಶಾಲೆಗೆ ಕಳುಹಿಸದೇ ಮನೆಯಲ್ಲಿಟ್ಟುಕೊಳ್ಳುವುದು ಸರಿಯಲ್ಲ. ಬೇರೆ ಶಾಲೆಯಲ್ಲಾದರೂ ವ್ಯವಸ್ಥೆ ಮಾಡೋಣ ಎಂಬ ಪ್ರಸ್ತಾವನ್ನಿಟ್ಟರು. ಬೇರೆ ಶಾಲೆಯೂ ಈ ಶಾಲೆಯಿಂದ ನಾಲ್ಕು ಕಿ.ಮೀ ದೂರದಲ್ಲಿದೆ. ಅದು ಸಾಧ್ಯವಿಲ್ಲ. ಈ ಶಾಲೆ ಸರಿಯಾಗುವ ತನಕ ಮಕ್ಕಳು ಬರುವುದಿಲ್ಲ ಎಂದು ಪೋಷಕರು ಹೇಳಿದಾಗ ಮಧ್ಯಾಹ್ನದ ಊಟಕ್ಕಾದರೂ ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಡಿಡಿಪಿಐ ಕೇಳಿಕೊಂಡು ನಗೆಪಾಟಲಿಗೀಡಾದರು. ಮಕ್ಕಳಿಗೆ ಊಟ ಹಾಕಲಾಗದಂತಹ ಪರಿಸ್ಥಿತಿ ನಮಗಿನ್ನೂ ಬಂದಿಲ್ಲ. ಶಾಲೆಯೇ ಬಿದ್ದು ಹೋಗುವ ಸ್ಥಿತಿಯಲ್ಲಿರುವಾಗ ಮಧ್ಯಾಹ್ನದ ಊಟಕ್ಕೆ ಯಾರಾದರೂ ದೂರದಿಂದ ಶಾಲೆಗೆ ಕಳುಹಿಸುತ್ತಾರೆಯೇ ಎಂದು ಪೋಷಕರು ಮರುಪ್ರಶ್ನೆ ಹಾಕಿದಾಗ ಮಕ್ಕಳಿಗೆ ಮಧ್ನಾಹ್ನದ ಊಟ ಹಾಕುವುದು ನಮ್ಮ ಜವಾಬ್ದಾರಿ ಎಂದು ಡಿಡಿಪಿಐ ಪ್ರತಿಕ್ರಿಯಿಸಿದರು. ಮಕ್ಕಳ ಸುರಕ್ಷತೆ ಜವಾಬ್ದಾರಿ ಯಾರದ್ದು ಎಂಬ ಪೋಷಕರ ಮರುಪ್ರಶ್ನೆಗೆ ನಿರುತ್ತರರಾದರು.

ಕಾಲ್ತೋಡು ಗ್ರಾ.ಪಂ ಅಧ್ಯಕ್ಷ ಬಿ. ಅಣ್ಣಪ್ಪ ಶೆಟ್ಟಿ, ಸಿಆರ್‌ಪಿ ಶ್ರೀಕಾಂತ್, ಪಿಡಿಓ, ಗ್ರಾಮ ಲೆಕ್ಕಿಗ ಹಾಗೂ ಗ್ರಾಮಸ್ಥರು ಈ ಸಂದರ್ಭ ಉಪಸ್ಥಿತರಿದ್ದರು.

ಹೊಳೆ ದಾಟಲು ಸೇತುವೆಯಿಲ್ಲ:
ಇಲ್ಲಿನ ಶಾಲೆಯ ಸಮೀಪ ಕಿರು ಹೊಳೆಯೊಂದು ಹರಿಯುತ್ತಿದೆ. ಪ್ರತಿನಿತ್ಯ ಶಾಲೆಗೆ ಬರುವ ಮೂರುರು ಭಾಗದ ೧೮ಕ್ಕೂ ಹೆಚ್ಚು ಮಕ್ಕಳು ಇದನ್ನು ದಾಟಿ ಕೊಂಡು ಬರದೇ ಅನ್ಯ ಮಾರ್ಗವಿಲ್ಲ, ಮಳೆಗಾಲದಲ್ಲಿ ಈ ನದಿ ತುಂಬಿ ಹರಿಯುವುದರಿಂದ ಮಕ್ಕಳು ತಾತ್ಕಲಿಕ ಮರದ ಕಾಲು ಸಂಕದಲ್ಲಿ ಸರ್ಕಸ್ ಮಾಡುತ್ತಾ, ಭಯದಲ್ಲಿಯೇ ಶಾಲೆಗೆ ಬರಬೇಕಾಗಿದೆ. ಶೀಘ್ರ ಇಲ್ಲಿ ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಶಾಲಾ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಶಿಕ್ಷಣ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ, ಆದರೆ ಅವರು ಅನುದಾನದ ಕೊರತೆಯ ನೆಪವೊಡ್ಡಿ ಜಾರಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಎಲ್ಲಾ ಗ್ರಾಮಸ್ಥರು ಒಟ್ಟಾಗಿ ಚಿಕ್ಕದಾದ ಶೆಡ್ ನಿರ್ಮಿಸಿ ಹಾಗೂ ಉಳಿದ ಮಕ್ಕಳನ್ನು ದೇವಾಲಯದಲ್ಲಿ ಕುಳ್ಳಿರಿಸಿದ್ದೇವೆ, ಈಗ ಶಾಲಾ ಕಟ್ಟಡವು ಕುಸಿದಿದ್ದು ತಾತ್ಕಲಿಕ ವ್ಯವಸ್ಥೆ ಮಾಡಿದ ಬಳಿಕವೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೇವೆ. ಅಲ್ಲಿಯವರೆಗೆ ಶಾಲೆಗೆ ಕಳುಹಿಸುವುದಿಲ್ಲ. ನಮಗೆ ಮಕ್ಕಳ ವಿದ್ಯಾಭ್ಯಾಸಕ್ಕಿಂತ ಅವರ ಜೀವ ಮುಖ್ಯ  – ವಿದ್ಯಾರ್ಥಿ ಪಾಲಕರು.

ಶಾಲಾ ಕಟ್ಟಡ ದುರಸ್ತಿಗೊಳಿಸುವಂತೆ ವರ್ಷದ ಹಿಂದೆಯೇ ಎಲ್ಲಾ ಜನಪ್ರತಿನಿಧಿಗಳಿಗೂ ಹಾಗೂ ಇಲಾಖಾಧಿಕಾರಿಗಳಿಗೂ ಗ್ರಾಮ ಪಂಚಾಯಿತ್‌ನಿಂದ ಲಿಖಿತವಾಗಿ ಮನವಿ ಸಲ್ಲಿಸಲಾಗಿದೆ. ಮಕ್ಕಳಿಗೆ ತೊಂದರೆಯಾಗದಂತೆ ಶೀಘ್ರ ತಾತ್ಕಲಿಕ ಶೆಡ್‌ನ್ನಾದರೂ ನಿರ್ಮಿಸಿಕೊಡುವಂತೆ ಸಂಬಂಧಿತರಿಗೆ ಮನವಿ ಸಲ್ಲಿಸಲಾಗಿದೆ  – ಬಿ. ಅಣ್ಣಪ್ಪ ಶೆಟ್ಟಿ ಅಧ್ಯಕ್ಷರು ಗ್ರಾ.ಪಂ. ಕಾಲ್ತೋಡು.

ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಎರಡು ದಿನದಲ್ಲಿ ತಾತ್ಕಾಲಿಕವಾಗಿ ಶೆಡ್ ನಿರ್ಮಿಸಿಕೊಡಲಾಗುವುದು. ಬೇರೆ ಶಾಲೆಗೆ ಈಗಾಗಲೇ ಮಂಜೂರಾಗಿ ಕಾಮಗಾರಿ ಕೈಗೆತ್ತಿಕೊಳ್ಳದ ಯೋಜನೆಯನ್ನು ಈ ಶಾಲೆಗೆ ನೀಡಿ ಕಟ್ಟಡ ನಿರ್ಮಿಸುವ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯ ತನಕ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವ್ಯವಸ್ಥೆ ಮಾಡಲಾಗುವುದು. – ದಿನಕರ ಶೆಟ್ಟಿ, ಡಿಡಿಪಿಐ ಉಡುಪಿ

ಇದನ್ನೂ ಓದಿ ಇಲ್ಲಗಳ ನಡುವೆಯೇ ಇದೆ ಕಪ್ಪಾಡಿ ಸರ್ಕಾರಿ ಶಾಲೆ – http://kundapraa.com/?p=3545 

Leave a Reply

Your email address will not be published. Required fields are marked *

fifteen − one =