ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಮೆಸ್ಕಾಂ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 9 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕೊಲ್ಲೂರು ಶಾಖೆಯ 33/11 ಕೆವಿ ಉಪಕೇಂದ್ರ ರಚನೆಗೆ ಗೋಳಿಹೊಳೆ ಗ್ರಾಪಂ ವ್ಯಾಪ್ತಿಯ ಎಲ್ಲೂರಿನಲ್ಲಿ ಶುಕ್ರವಾರ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷ, ಶಾಸಕ ಕೆ. ಗೋಪಾಲ ಪೂಜಾರಿ ಶಿಲಾನ್ಯಾಸ ಮಾಡಿದರು.
ನಂತರ ಮಾತನಾಡಿದ ಅವರು, ರಾಜ್ಯದ ಇಂಧನ ಸಚಿವ ಡಿ.ಕೆ. ಶಿವಕುಮಾರ ಗ್ರಾಮೀಣ ಭಾಗದ ಕೃಷಿಕರಿಗೆ ಗುಣಮಟ್ಟದ ವಿದ್ಯುತ್ ನೀಡಲು ಅಗತ್ಯ ಕ್ರಮ ಕೈಗೊಂಡಿದ್ದು, ಒಣಭೂಮಿಗಳಲ್ಲಿ ಸೋಲಾರ್ ಪಾರ್ಕ್‌ಗಳನ್ನು ನಿರ್ಮಿಸುವ ಮೂಲಕ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿದ್ದಾರೆ. ಬೈಂದೂರಿಗೆ ಹೆಚ್ಚುವರಿ 110/11 ಕೆ.ವಿ. ಉಪಕೇಂದ್ರ ಮಂಜೂರು ಮಾಡಿಸಿದ್ದು, ಉದ್ದೇಶಿತ ಕಾಮಗಾರಿಗೆ ಈಗಾಗಲೇ ಸ್ಥಳ ಪರಿಶೀಲನಾ ಕಾರ್ಯ ನಡೆಯುತ್ತಿದೆ, ಅಲ್ಲದೆ ಸಿಬ್ಬಂದಿಗಳ ವಸತಿಗಹ ನಿರ್ಮಾಣಕ್ಕೆ ಒಂದು ಕೋಟಿ ರೂ, ಹಾಗೂ ಅತಿಥಿಗೃಹ ನಿರ್ಮಾಣಕ್ಕೆ 80 ಲಕ್ಷ ರೂ. ಮಂಜೂರಾಗಿದೆ. ಮಲೆನಾಡು ಭಾಗದ ಮಾವಿನಕಾರು, ಹಳ್ಳಿಬೇರು, ಬಸ್ರಿಬೇರು, ಗೋಳಿಗುಡ್ಡೆ, ಬಾವಡಿ, ಹೊಸೂರು, ಬೆಳಿಕೊಡ್ಲು, ಮಣ್‌ವ್ಮಣ್‌ಹರ, ಚಾರ‍್ಸಾಲು, ದೊಡ್ಡಹರ, ಮೇಘ್ನಿ ಮೊದಲಾದ ಕುಗ್ರಾಮಗಳಿಗೆ ಅರಣ್ಯ ಇಲಾಖೆಯ (ವೈಡ್‌ಲೈಫ್) ಅಡೆತಡೆಗಳನ್ನು ನಿವಾರಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಬೈಂದೂರು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಯಶವಂತ್ ಮತನಾಡಿ, ಈ ಉಪಕೇಂದ್ರವು ಯಳಜಿತ್, ಇಡೂರು, ಜಡ್ಕಲ್-ಮುದೂರು ಪ್ರದೇಶಗಳಲ್ಲಿ ಲೋ-ವೋಲ್ಟೇಜ್ ಸಮಸ್ಯೆಗೆ ಮುಕ್ತಿ ಸಿಗುವುದರ ಜತೆಗೆ ನಿರಂತರ ವಿದ್ಯುತ್ ಸರಬರಾಜು ನೀಡುವ ಉದ್ದೇಶದಿಂದ ನಾಲ್ಕು ಪ್ರತ್ಯೇಕ ಮಾರ್ಗಗಳಾಗಿ ವಿಂಗಡಿಸಲಾಗಿದೆ. ಹಾಗೂ ಕೊಲ್ಲೂರು ಕ್ಷೇತ್ರಕ್ಕೆ ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗವನ್ನು ಕೂಡಾ ಪ್ರತ್ಯೇಕಿಸಲಾಗಿದೆ. ಇಲ್ಲಿಯೂ ಕೂಡಾ ತಲಾ ಒಂದು ಕೋಟಿ ವೆಚ್ಚದಲ್ಲಿ ಅತಿಥಿಗೃಹ ಮತ್ತು ಸಿಬ್ಬಂದಿ ವಸತಿಗೃಹ ನಿರ್ಮಾಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ರಾಜೇಶ್, ಮೆಸ್ಕಾಂ ನಿರ್ದೇಶಕ ರಿಯಾಜ್ ಅಹ್ಮದ್, ಗುತ್ತಿಗೆದಾರ ಮಂಗಳೂರು ಜ್ಯೋತಿ ಇಲೆಕ್ಟ್ರಿಕಲ್ಸ್‌ನ ಸೂರ್ಯನಾರಾಯಣ ಭಟ್, ತಾಪಂ ಸದಸ್ಯರಾದ ಎಚ್. ವಿಜಯ್ ಶೆಟ್ಟಿ, ಗ್ರೀಷ್ಮಾ ಭಿಡೆ, ಗೋಳಿಹೊಳೆ ಗ್ರಾಪಂ ಅಧ್ಯಕ್ಷ ರಾಜು ಪೂಜಾರಿ, ಕಾಲ್ತೋಡು ಗ್ರಾಪಂ ಉಪಾಧ್ಯಕ್ಷ ರಾಜು ಪೂಜಾರಿ, ಕೊಲ್ಲೂರು ಗ್ರಾಪಂ ಉಪಾಧ್ಯಕ್ಷೆ ನೇತ್ರಾವತಿ, ಸದಸ್ಯರಾದ ಪ್ರಕಾಶ ಪೂಜಾರಿ, ಎಸ್. ಕುಮಾರ್, ಪ್ರೇಮಾ, ಕೊಲ್ಲೂರು ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ, ನಿರ್ದೇಶಕ ಸುಧೀರ್ ಹೆಬ್ಬಾರ್, ಮುದೂರು ಸಹಕಾರಿ ಸಂಘದ ಅಧ್ಯಕ್ಷ ಪಿ. ಎಲ್. ಜೋಸ್, ರಮಣನ್, ಬಸ್ರೂರು ಕಿಶನ್ ಹೆಗ್ಡೆ, ದೇವದಾಸ್, ಎಂ. ಆರ್. ಶೆಟ್ಟಿ ಮತ್ತಿತರರು ಇದ್ದರು.