ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೇಸ್- ಬಿಜೆಪಿ ಒಂದು ನಾಣ್ಯದ ಎರಡು ಮೂಖಗಳಿದ್ದಂತೆ ಅವರು ಆರೋಪ ಪ್ರತ್ಯಾರೋಪದಲ್ಲಿಯೂ ದಿನಕಳೆಯುತ್ತಿದೆ. ಜನರ ಬಗ್ಗೆ ಕಾಳಜಿ ಇಲ್ಲ ರಾಜ್ಯದ ಹಿತಕ್ಕಿಂತ ಪಕ್ಷಗಳ ಅಸ್ಥಿತ್ವವೇ ಅವರಿಗೆ ಮುಖ್ಯವಾಗಿದ್ದು ರಾಜ್ಯದ ಜನತೆಯ ಕಣ್ಣೋರಿಸುವ ಕೆಲಸವಾಗುತ್ತಿದ್ದು ಜನತೆ ಭ್ರಮೆ ನಿರಸನಗೊಂಡಿದ್ದಾರೆ. ಎಂದು ಜೆಡಿಎಸ್ ಪಕ್ಷದ ಜಿಲಾಧ್ಯಕ್ಷ ಯೋಗೀಶ್ ಶೆಟ್ಟಿ ಹೇಳಿದರು.
ಅವರು ಉಪ್ಪುಂದ ಶಂಕರಕಲಾಮಂದಿರ ಸಮೃಧ್ಧಿ ಸಭಾ ಭವನ ಬೈಂದೂರು ಬ್ಲಾಕ್ ಜೆಡಿಎಸ್ ಪಕ್ಷದ ಪದಾಧಿಕಾರಿಗಳ ಮತ್ತು ಪ್ರಮುಖ ಕಾರ್ಯಕರ್ತರ ವಿಧಾನ ಸಭಾ ಚುನಾವಣೆಯ ಪೂರ್ವ ಸಿದ್ದತಾ ಸಭೆಯಲ್ಲಿ ಮಾತನಾಡಿ ಜೆಡಿಎಸ್ ಪಕ್ಷವು ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದೆ. ಅದಕ್ಕಾಗಿಯೇ ಪ್ರಣಾಳಿಕೆಯಲ್ಲಿ ರೈತರ, ಮೀನುಗಾರರ, ನೌಕರರ ಸಂಪೂರ್ಣ ಸಾಲ ಮನ್ನಾ ಮಾಡುವ ಘೋಷಣೆಯೊಂದಿಗೆ ಹಲವಾರು ಜನಪರ ಯೋಜನೆಗಳನ್ನು ಪೋಷಿಸಿದ್ದಾರೆ. ಅದಕ್ಕಾಗಿ ೨ ರಾಷ್ಟ್ರೀಯ ಪಕ್ಷಗಳನ್ನು ಅಧಿಕಾರದಿಂದ ದೂರವಿಡಲು ಇಂದು ಸಕಾಲವೆಂದು ಹೇಳಿದರು.
ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಮಾನ್ಸೂರ್ ಇಬ್ರಾಹಿಂ, ಪಕ್ಷದ ಪ್ರಮುಖರಾದ ಸಬ್ಲಾಡಿ ಮಂಜಯ್ಯ ಶೆಟ್ಟಿ, ಯು. ರಮೇಶ ಕಾರಂತ, ರವಿ ಶೆಟ್ಟಿ ರಂಜಿತ ಕುಮಾರ ಶೆಟ್ಟಿ, ಶಾಲಿನಿ ಶೆಡ್ತಿ ಕೆಂಚನೂರು, ವಿಶಾಲಾಕ್ಷಿ ಶೆಟ್ಟಿ, ಉದಯ ಹೆಗ್ಡೆ ಜಯಕುಮಾರ ಪರ್ಕಳ, ನಿತಿನ್ ಶೆಟ್ಟಿ, ಯೋಗೀಶ್ ಕೋಟ್ಯಾನ್ ಗೋಪಾಲ ಪೂಜಾರಿ, ಮನೋಹರ ಪೂಜಾರಿ, ಮಂಜುನಾಥ ಖಾರ್ವಿ, ಪ್ರಸನ್ನ ಎಮ್.ಆರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಸೂಚನೆಯ ಮೇರೆಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ರವಿ ಶೆಟ್ಟಿಯವರು ಅಧಿಕೃತವಾಗಿ ಘೋಷಿಸಿ ಅಭಿನಯಿಸಲಾಯಿತ್ತು. ಹಾಗೂ ಶಂಕರ ಕಲಾ ಮಂದಿರದ ಮ್ಯಾನೇಜರ್ ಆಗಿ ಸೇವೆ ಸಲ್ಲಿಸಿ ಹೃದಯಾಘಾತದಿಂದ ಅಕಾಲಿಕ ನಿಧನರಾದಾ ಅಣ್ಣಪ್ಪ ಕಾರಂತರಿಗೆ ೧ ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಬೈಂದೂರು ಜೆಡಿಎಸ್ ಬ್ಲಾಕ್ ಅಧ್ಯಕ್ಷತೆಯನ್ನು ಸಂದೇಶ ಭಟ್ ವಹಿಸಿದ್ದರು.
ಸಂತೋಷ ಶೆಟ್ಟಿ ಸ್ವಾಗತಿಸಿದ್ದರು. ಯುವ ಘಟಕದ ಅಧ್ಯಕ್ಷ ವಾಹಬ್ ಇಬ್ರಾಹಿಂ ವಹಿಸಿದ್ದರು. ಸಚಿನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದ್ದರು.