ಮುಲ್ಲಿಬಾರು: ಸ.ಹಿಪ್ರಾಶಾಲೆಯಲ್ಲಿ ಜ್ಞಾನ ಸಂವಹನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿನ ಯಡ್ತರೆ ಗ್ರಾ. ಪಂ. ನ ಹೊಸೂರು ವ್ಯಾಪ್ತಿಯ ಮುಲ್ಲಿಬಾರು ಸ.ಹಿಪ್ರಾಶಾಲೆಯಲ್ಲಿ ಜ್ಞಾನ ಸಂವಹನ ಕಾರ್ಯಕ್ರಮ ಜರುಗಿತು.

Call us

Click Here

ಈ ಸಂದರ್ಭ ವಿಶೇಷ ಆಹ್ವಾನಿತರಾಗಿ ರೀಡ್ ಸಂಸ್ಥೆಯ ಸಂಸ್ಥಾಪಕ ಮಂಜುನಾಥ ಗಾಣಿಗರವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದು, ಪ್ರಸ್ತುತ ಗ್ರಾಮೀಣ ಭಾಗದ ಪ್ರತಿಭಾನ್ವಿತ ಮಕ್ಕಳ ಪ್ರತಿಭೆಯು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೇಗೆ ಪ್ರಚುರಪಡಿಸಬೇಕು ಹಾಗೂ ಅದರ ಹಿಂದಿನ ಶ್ರಮ ಮತ್ತು ಕಾರ್ಯ ವೈಖರಿಯ ಬಗ್ಗೆ ತಿಳಿಸುತ್ತಾ ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಮುಲ್ಲಿಬಾರು ಶಾಲೆಯ ವಿದ್ಯಾರ್ಥಿಗಳು ಕಾರ್ಯ ಪ್ರವೃತ್ತರಾಗಬೇಕು, ಆದಿಸೆಯಲ್ಲಿ ಉಪಗ್ರಹ ಆಧಾರಿತ ಕಲಿಕೆಗೆ ಸಂಬಂಧಿಸಿದಂತೆ ತಮ್ಮ ರೀಡ್ ಸಂಸ್ಥೆಯ ಮೂಲಕ ಹೆಚ್ಚಿನ ಸೌಕರ್ಯ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಸ್ವಾಮೀ ವಿವೇಕಾನಂದರ ವಿದ್ಯುತ್ ವಾಣಿ ಯನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿದರು. ಈ ಸಂದರ್ಭದಲ್ಲಿ ಪಾಲಕರ ಪ್ರತಿನಿಧಿ ಸರಸ್ವತಿ ಮರಾಠಿ ಎಸ್‌ಡಿಎಮ್‌ಸಿ ಉಪಾಧ್ಯಕ್ಷೆ ಸಾವಿತ್ರಿ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದು, ಅಧ್ಯಕ್ಷೆ ಚಂದ್ರ ಪೂಜಾರಿ ಅಧ್ಯಕ್ಷತೆಯನ್ನು ವಹಿಸಿದ್ದು, ಮುಖ್ಯಶಿಕ್ಷಕ ಗಿರೀಶ್ ಪಿ. ಮೇಸ್ತ, ಸ್ವಾಗತಿಸಿ, ಸಹಶಿಕ್ಷಕ ಸುಧಾಕರ ಪಿ. ಬೈಂದೂರು ಪ್ರಾಸ್ತಾವಿಕ ಮಾತಾನಾಡಿ ರಾಮನಾಥ ಮೇಸ್ತ ವಂದಿಸಿ ಹಾಲೇಶ್ ಡಿ.ಆರ್. ನಿರೂಪಿಸಿದರು.

Leave a Reply