ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರದ ರೊಜರಿ ಮಾತಾ ಇಗರ್ಜಿಯ ಆವರಣದೊಳಗೆ, ಲೂರ್ದ ಮಾತೆಯ ನೂತನ ಗ್ರೊಟ್ಟೊವನ್ನು (ಗುಹೆ) ಉದ್ಘಾಟನೆ ಮತ್ತು ಆಶಿರ್ವಚನ ಕಾರ್ಯಕ್ರಮ ಮೇರಿ ಮಾತೆಗೆ ಸಮರ್ಪಿಸಲ್ಪಟ್ಟ ಮೇ ತಿಂಗಳ ಮೊದಲನೇ ದಿನ ನಡೆಯಿತು.
ಉಡುಪಿ ಧರ್ಮಕ್ಷೇತ್ರದ ಛಾನ್ಸಲರ್, ಉಡುಪಿ ವಲಯ ಹಾಗೂ ಚರ್ಚಿನ ಪ್ರಧಾನ ಧರ್ಮಗುರುಗಳಾದ ವಂ. ವಾಲೇರಿಯನ್ ಮೆಂಡೊನ್ಸಾ, ದೀಪ ಬೆಳಗಿಸಿ ಗ್ರೋಟ್ಟೊವನ್ನು ಉದ್ಘಾಟಿಸಿದರು. ಈ ಮೊದಲು ಇದ್ದ ಗ್ರೋಟ್ಟೊವನ್ನು ಸ್ಥಳಾಂತರ ಮಾಡಿ ತಾತ್ಕಾಲಿಕವಾದ ಗ್ರೋಟ್ಟೊವನ್ನು ನಿರ್ಮಿಸಲಾಗಿತ್ತು, ಅದನ್ನು ಕೆಡವಿ ಅದೇ ಜಾಗದಲ್ಲಿ ನೂತನವಾದ ಸ್ಥಿರವಾದ ಗ್ರೋಟ್ಟೊವನ್ನು ನಿರ್ಮಿಸಲಾಗಿದೆ.
ಚರ್ಚಿನ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾ, ಸಹಾಯ ಧರ್ಮಗುರು ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ, ಪ್ರಾಂಶುಪಾಲ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್ ಮತ್ತು ಧರ್ಮಗುರು ವಂ.ಪ್ಯಾಟ್ರಿಕ್ ಪಾಯ್ಸ್ ಸಹ ಭಾಗಿತ್ವದಲ್ಲಿ ಪವಿತ್ರ ಬಲಿದಾನ ನಡೆಯಿತು.
ನೂತನ ಗ್ರೋಟ್ಟೊ ಮುಂದೆ ಭಕ್ತರೊಡಗೂಡಿ, ಮೇರಿ ಮಾತೆ ಕಳಿಸಿಕೊಟ್ಟ ಜಪಸರ ಪ್ರಾರ್ಥನೆಯನ್ನು ನಡೆಸಲಾಯಿತು. ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಮತ್ತು ಕಾನ್ವೆಂಟಿನ ಮುಖ್ಯಸ್ಥೆ ಸಿಸ್ಟರ್ ವಾಯ್ಲೆಟ್ ಇದ್ದರು.