ತಿದ್ದುಪಡಿ ಕರಡಿನಲ್ಲಿ ಸಿಆರ್‌ಝಡ್ ವಲಯ ಮೂರಕ್ಕೆ ಜನಸಂಖ್ಯೆಯ ಶರತ್ತು ವಿಧಿಸಿದ್ದು ಸರಿಯಲ್ಲ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮುದ್ರತೀರ ನಿಯಂತ್ರಣ ವಲಯಗಳಿಗೆ ಸಂಬಂಧಿಸಿದ 2011ರ ಅಧಿಸೂಚನೆಯನ್ನು ತಿದ್ದುಪಡಿ ಮಾಡಲು ಉದ್ದೇಶಿಸಿ ಕೇಂದ್ರ ಸರ್ಕಾರ ಸಿದ್ಧಪಡಿಸಿದ ಕರಡಿನಲ್ಲಿ 3ನೆ ವಲಯದಲ್ಲಿ ಅಭಿವೃದ್ಧಿ ನಿಷೇಧಿತ ಪ್ರದೇಶವನ್ನು ಈಗಿನ 200 ಮೀಟರಿನಿಂದ 50 ಮೀಟರಿಗೆ ಇಳಿಸಲಾಗಿದೆ. ಆದರೆ ಅಲ್ಲಿನ ಜನಸಾಂದ್ರತೆ ಚದರ ಕಿಲೋಮೀಟರಿಗೆ 2161ಕ್ಕಿಂತ ಅಧಿಕ ಇದ್ದರಷ್ಟೆ ಈ ರಿಯಾಯಿತಿ ಅನ್ವಯವಾಗುತ್ತದೆ ಎಂಬ ಶರ್ತ ವಿಧಿಸಲಾಗಿದೆ. ಇದರಿಂದ ಜಿಲ್ಲೆಯ ಯಾವುದೇ ಗ್ರಾಮೀಣ ಪ್ರದೇಶಕ್ಕೆ ಲಾಭವಾಗುವುದಿಲ್ಲ ಮಾತ್ರವಲ್ಲ ಕಡಲತೀರ ಪ್ರವಾಸೋದ್ಯಮಕ್ಕೂ ಇದು ಅನುಕೂಲವೆನಿಸದು ಎನ್ನುತ್ತಾರೆ ಬೈಂದೂರಿನ ಬೆಸುಗೆ ಫೌಂಡೇಶನ್ ಅಧ್ಯಕ್ಷ ಕೆ. ವೆಂಕಟೇಶ ಕಿಣಿ.

Call us

Click Here

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯವು ಕಡಲತೀರಗಳನ್ನು ಹೊಂದಿರುವ ದೇಶದ ರಾಜ್ಯಗಳ ಮತ್ತು ಕೇಂದ್ರಾಧೀನ ಪ್ರದೇಶಗಳ ಮನವಿ ಹಾಗೂ ಡಾ. ಶೈಲೇಶ್ ನಾಯಕ್ ಸಮಿತಿಯ ವರದಿ ಅನುಸರಿಸಿ ಏಪ್ರಿಲ್ 18ರಂದು ಕರಡು ತಿದ್ದುಪಡಿ ಪ್ರಕಟಿಸಿದೆ. ಇದಕ್ಕೆ ಈ ತಿಂಗಳ 18ರ ಮುನ್ನ ಆಕ್ಷೇಪಣೆ, ಸಲಹೆ ಸಲ್ಲಿಸಬಹುದಾಗಿದೆ. ಕರಡು ಅಧಿಸೂಚನೆಯಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ತೀರಪ್ರದೇಶದ ಬಳಕೆಗೆ ಕೆಲವು ರಿಯಾಯಿತಿಗಳನ್ನು ಸೂಚಿಸಲಾಗಿದೆ.

ರಾಜ್ಯದ ಕರಾವಳಿಯ ಬಹುತೇಕ ಗ್ರಾಮೀಣ ಪ್ರದೇಶಗಳು ವಲಯ 3ರ ವ್ಯಾಪ್ತಿಯಲ್ಲಿವೆ. ಇಲ್ಲಿ ಉಬ್ಬರ ರೇಖೆಯಿಂದ 200 ಮೀಟರು ವರೆಗಿನ ತೀರವು ಈಗ ಅಭಿವೃದ್ಧಿ ನಿಷೇಧಿತ ಪ್ರದೇಶವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ 1991ರ ಪೂರ್ವದಲ್ಲಿದ್ದ ವಸತಿ ಕಟ್ಟಡಗಳ ದುರಸ್ತಿ, ಮರುರಚನೆ ಸಾಧ್ಯ. ಆದರೆ ಹೊಸ ಮನೆಗಳನ್ನು ಕಟ್ಟುವಂತಿಲ್ಲ. ಇಲ್ಲಿ ವಾಸಿಸುತ್ತಿರುವವರಿಗೆ ಇದು ತೊಡಕಾಗಿ ಪರಿಣಮಿಸಿರುವುದರಿಂದ ಇದನ್ನು ಬದಲಿಸಬೇಕೆಂದು ಜನ ಒತ್ತಾಯಿಸುತ್ತ ಬಂದಿದ್ದರು. ಉದ್ದೇಶಿತ ತಿದ್ದುಪಡಿಯಲ್ಲಿ ಈ ವಲಯವನ್ನು 50 ಮೀಟರಿಗೆ ಇಳಿಸಿರುವುದು ಸ್ವಾಗತಾರ್ಹವಾದರೂ, ಜನಸಾಂದ್ರತೆಯ ಶರ್ತ ವಿಧಿಸಿರುವುದು ಸರಿಯಲ್ಲ ಎನ್ನುವುದು ಉಪ್ಪುಂದದ ಮೀನುಗಾರ ಮುಖಂಡ ಎಸ್. ಮದನ್‌ಕುಮಾರ್ ಅವರ ಅಭಿಪ್ರಾಯ.

ವೆಂಕಟೇಶ ಕಿಣಿ ಮತ್ತು ಮದನ್‌ಕುಮಾರ್ ಜನಸಾಂದ್ರತೆಯ ಶರ್ತವನ್ನು ಬಿಡಬೇಕು; ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು; ಸಂಬಂಧಿಸಿದ ಗ್ರಾಮ ಪಂಚಾಯಿತಿಗಳೂ ತಕ್ಷಣ ಎಚ್ಚತ್ತುಕೊಂಡು ಕೇಂದ್ರ ಮಂತ್ರಾಲಯಕ್ಕೆ ಆಕ್ಷೇಪಣೆ ಕಳುಹಿಸಬೇಕು ಎಂದು ಸಲಹೆ ನೀಡಿದ್ದಾರೆ.

 

Click here

Click here

Click here

Click Here

Call us

Call us

Leave a Reply