ಹಟ್ಟಿಕುದ್ರು: ಪಂಜುರ್ಲಿ ಚಿಕ್ಕಮ್ಮ ಹೈಗುಳಿ ಸಪರಿವಾರ ದೈವಸ್ಥಾನದ ಪ್ರತಿಷ್ಠಾಪನೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಹಟ್ಟಿಕುದ್ರುವಿನಲ್ಲಿ ಶ್ರೀ ಪಂಜುರ್ಲಿ ಚಿಕ್ಕಮ್ಮ ಹೈಗುಳಿ ಸಪರಿವಾರ ದೈವಸ್ಥಾನದ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಆಶೀರ್ವಚನ ನೀಡಿದ ಶ್ರೀ ಮಠ ಬಾಳೆಕುದ್ರು ಹಂಗಾರಕಟ್ಟೆ ಪರಮಪೂಜ್ಯ ಸ್ವಾಮೀಜಿಯವರಾದ ನೃಸಿಂಹಾಶ್ರಮ ಸ್ವಾಮಿಜಿಯವರು ಶ್ರದ್ಧಾ ಕೇಂದ್ರಗಳಾದ ಮಠ ಮಂದಿರ ದೇವಸ್ಥಾನಗಳ ಮೂಲಕ ಆದ್ಯಾತ್ಮಿಕ ಚಿಂತನೆಗಳನ್ನು ಹೆಚ್ಚಿಸಿಕೊಂಡಲ್ಲಿ ಜೀವನದಲ್ಲಿ ಉನ್ನತಿ ಹೊಂದಲು ಸಾಧ್ಯ. ಭಾರತದಲ್ಲಿ ಹಲವಾರು ದೇವರುಗಳು ಅವತಾರ ಎತ್ತಿದ್ದು ವಿದೇಶಿಯರು ಕೂಡ ಸಾಧನೆಗೋಸ್ಕರ ನಮ್ಮಲ್ಲಿ ಬರುತ್ತಿರುವುದು ಭಾರತದ ವೈಶಿಷ್ಠ್ಯ ಎಂದು ಹೇಳಿದರು.

Call us

Click Here

ಸಮಾರಂಭದ ಅಧ್ಯಕ್ಷತೆಯನ್ನು ಬಸ್ರೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಬಿ.ಅಪ್ಪಣ್ಣ ಹೆಗ್ಡೆ ವಹಿಸಿದ್ದರು.

ವಿಶ್ವ ಹಿಂದೂ ಪರಿಷತ್‌ನ ದಕ್ಷಿಣ ಪ್ರಾಂತ ಮಠ ಮಂದಿರಗಳ ಸಂಪರ್ಕ ಪ್ರಮುಖರಾದ ಕೆ.ಪ್ರೇಮಾನಂದ ಶೆಟ್ಟಿ ಧಾರ್ಮಿಕ ಪ್ರವಚನ ನೀಡಿದರು.

ಮುಖ್ಯ ಅತಿಥಿಗಳಾಗಿ ಹಟ್ಟಿಯಂಗಡಿ ಸಿದ್ದಿವಿನಾಯಕ ದೇವಸ್ಥಾನದ ಬಾಲಚಂದ್ರ ಭಟ್, ಬಾರ್ಕೂರು ಏಕನಾಥೇಶ್ವರಿ ದೇವಸ್ಥಾನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ ,ಬಸ್ರೂರು ವ್ಯವಸಾಯ ಸೇವಾ ಸಂಘದ ಅಧ್ಯಕ್ಷರಾದ ಗೋಪಾಲ ಪೂಜಾರಿ, ಶ್ರೀ ಮಹಾಗಣಪತಿ ಯವಕ ಮಂಡಲದ ಗೌರವ ಅಧ್ಯಕ್ಷರಾದ ಜಯಸೂರ್ಯ ಪೂಜಾರಿ, ಸ್ಥಳೀಯರಾದ ಶ್ರೀಕಂಠ ಉಡುಪ, ಕುಂದಾಪುರ ದೇವಾಡಿಗರ ಸಮಾಜ ಸೇವಾ ಸಂಘ ಅಧ್ಯಕ್ಷರಾದ ನಾಗರಾಜ ರಾಯಪ್ಪನ ಮಠ, ದೈವಸ್ಥಾನದ ಪ್ರಮುಖರಾದ ಕುಷ್ಠ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹರೀಶ ದೇವಾಡಿಗ ಸ್ವಾಗತಿಸಿದರು, ಪತ್ರಕರ್ತ ಸಂತೋಷ ಕೋಣಿ ಕಾರ್ಯಕ್ರಮ ನಿರೂಪಿಸಿ ಶೇಖರ್ ದೇವಾಡಿಗ ಬಸ್ರೂರು ವಂದಿಸಿದರು.

Click here

Click here

Click here

Click Here

Call us

Call us

 

Leave a Reply