ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ಪುರಸಭೆಯ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಖಾರ್ವಿಕೇರಿ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯವನ್ನು ಆಯೋಜಿಸಲಾಯಿತು.
ಪುರಸಭಾ ಅಧ್ಯಕ್ಷರಾದ ವಸಂತಿ ಮೋಹನ್ ಸಾರಂಗ, ಉಪಾಧ್ಯಕ್ಷರಾದ ರಾಜೇಶ್ ಕಾವೇರಿ, ಪುರಸಭಾ ಮುಖ್ಯಾಧಿಕಾರಿಯಾದ ಶ್ರೀಮತಿ ವಾಣಿ ವಿ. ಆಳ್ವ, ಹಿರಿಯ ಆರೋಗ್ಯ ನಿರೀಕ್ಷಕರಾದ ಶರತ್ ಎಸ್ ಖಾರ್ವಿ, ಕಿರಿಯ ಆರೋಗ್ಯ ನಿರೀಕ್ಷಕರಾದ ರಾಘವೇಂದ್ರ ಮಂಜುನಾಥ ನಾಯ್ಕ, ಪೌರಕಾರ್ಮಿಕರು ಮತ್ತು ಸದ್ರಿ ವಾರ್ಡಿನ ಸಾರ್ವಜನಿಕರು ಭಾಗವಹಿಸಿ ಉತ್ತಮ ಪ್ರತಿಕ್ರಿಯೆ ನೀಡಿದರು.