ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಉಪ್ಪುಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಪ್ಪುಂದ ಕಲ್ಯಾಣಿ ಪರಮೇಶ್ವರ ಭಟ್ ಟ್ರಸ್ಟ್ ರಿ. ಬೆಂಗಳೂರು ಇದರ ವತಿಯಿಂದ ವಿದ್ಯಾರ್ಥಿಗಳಿಗೆ 90 ಸಾವಿರ ಮೌಲ್ಯದ ಉಚಿತ ನೋಟ್ ಪುಸ್ತಕ ಹಾಗೂ ಕಲಿಕಾ ಸಾಮಾಗ್ರಿಗಳ ವಿತರಣಾ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಸತ್ತಿನ ಮಾಜಿ ಅಧ್ಯಕ್ಷ ಉಪ್ಪುಂದ ಚಂದ್ರಶೇಖರ ಹೊಳ್ಳರವರು ಆಧುನಿಕ ಪ್ರಪಂಚದಲ್ಲಿ ಪ್ರತಿ ಕ್ಷೇತ್ರದಲ್ಲ್ಲಿಯೂ ಬದಲಾವಣೆಗಳು ಸ್ವಾಭಾವಿಕವಾಗಿದ್ದು ಆದರಂತೆ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆಗಳಾಗಿದ್ದು ಆದರೆ ನಮ್ಮ ಸಂಸ್ಕೃತಿಯ ಪರಿಚಯ ನಿರಂತರವಾಗಿ ಸಾಗಬೇಕು, ಜೊತೆಯಲ್ಲಿ ಆಧುನಿಕ ಶಿಕ್ಷಣ ಪದ್ಧತಿ ಅಳವಡಿಕೆಯಾಗುವುದರೊಂದಿಗೆ ಗ್ರಾಮೀಣ ಭಾಗದ ಎಲ್ಲಾ ವಿದ್ಯಾರ್ಥಿಗಳಿಗೂ ಲಭ್ಯವಾಗಬೇಕು ಎಂದು ಹೇಳುತ್ತಾ ಉಪ್ಪುಂದ ಮಾದರಿ ಶಾಲೆಯ ಸಮಗ್ರ ಬೆಳವಣಿಗೆಯಲ್ಲಿ ದಾನಿಗಳ ಕೊಡುಗೆ ಬಹಳ ದೊಡ್ಡದು ಅದರಂತೆ ಯು.ಕೆ ಪಿ.ಬಿ ಟ್ರಸ್ಟ್ ಕೊಡುಗೆ ಸಹ ಶ್ಲಾಘನೀಯವಾಗಿದ್ದು ಎಂದು ಹೇಳಿದ್ದಾರೆ.
ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ರಾಜರಾಮ ಪಡಿಯಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಯು. ಕೆ ಪಿ ಟ್ರಸ್ಟ್‌ನ ಸದಸ್ಯ ಯು. ಸಂದೇಶ್ ಭಟ್, ಗ್ರಾಮ ಪಂಚಾಯತ್ ಸದಸ್ಯರಾದ ಐ. ನಾರಾಯಣ, ನಾಗರಾಜ್, ಹಿರಿಯರಾದ ರಮೇಶ್ ವೈದ್ಯ, ಸಮಾಜ ಸೇವಕ ದೀಟಿ ಸೀತಾರಾಮ ಮಯ್ಯ ಮಾಜಿ ಕೃಷಿ ಅಧಿಕಾರಿ ವಿ. ಹೆಚ್ ನಾಯಕ್, ಉಪ್ಪುಂದ ಏಜುಕೇಶನ್ ಟ್ರಸ್ಟ್‌ನ ಅಧ್ಯಕ್ಷರಾದ ಗಣೇಶ್ ಮುಖ್ಯೋಪದ್ಯಾಯರಾದ ಮಹಾಬಲ ಗೌಡ ವೇದಿಕೆಯಲ್ಲಿದ್ದರು.
ಟ್ರಸ್ಟ್ ವತಿಯಿಂದ ಕಳೆದಸಾಲಿನ 7ನೇ ತರಗತಿಯಲ್ಲಿ ಪ್ರಥಮಸ್ಥಾನಗಳಿಸಿದ ನಿಶಾ ಗೆ ರೂ 3,೦೦೦/- ಹಾಗೂ ದ್ವೀತಿಯ ಸ್ಥಾನಗಳಿಸಿದ ರವೀನಾ ಗೆ ರೂ 2,೦೦೦/- ನಗದು ಪುರಸ್ಕಾರ ನೀಡಿ ಪ್ರೋತ್ಸಹಿಸಲಾಯಿತು ಎಲ್ಲಾ ಮಕ್ಕಳಿಗೆ ಸಿಹಿತಿಂಡಿ ವಿತರಿಸಲಾಯಿತು.
ಟ್ರಸ್ಟ್‌ನ ಸದಸ್ಯ ಯು. ಸಂದೇಶ್ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ವಿದ್ಯಾರ್ಥಿ ನಿಶಾ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕಿ ಭಾಸ್ಕರ ಪ್ರಭು ವಿದ್ಯಾರ್ಥಿಗಳ ಪಟ್ಟಿವಾಚಿಸಿ ವಂದಿಸಿದರು.