ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ವಿನೂತನ ರೀತಿಯಲ್ಲಿ ಆಯೋಜಿಸಲಾಗುತ್ತಿರುವ ಕುಸುಮ ಫೌಂಡೇಷನ್‌ನ ‘ಕುಸುಮಾಂಜಲಿ-2018’ ವಾರ್ಷಿಕ ಸಾಂಸ್ಕೃತಿಕ ಉತ್ಸವವು ಈ ಭಾರಿ ಡಿಸೆಂಬರ್ 22 ಹಾಗೂ 23ರ ಶನಿವಾರ ಮತ್ತು ಭಾನುವಾರದಂದು ನಾಗೂರಿನಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಪ್ರತಿಭಾವಂತ ಗಾಯಕರ ಅನ್ವೇಷಣೆ ಹಾಗೂ ಗಾನಕುಸುಮ 2018ರ ಪ್ರಶಸ್ತಿಗಾಗಿ ಜಿಲ್ಲಾ ಮಟ್ಟದ ಗಾಯನ ಸ್ವರ್ಧೆಯನ್ನು ಆಯೋಜಿಸಲಾಗಿದೆ. ಸಂಪೂರ್ಣ ಉಚಿತವಾಗಿರುವ ಸ್ವರ್ಧೆಗೆ ಆಸಕ್ತರು ಹೆಸರು ನೊಂದಾಯಿಸಬಹುದಾಗಿದೆ.
ಗಾನಕುಸುಮಾ 2018ರ ಪ್ರತಿಭಾನ್ವೇಷಣೆ ವಿವಿಧ ಹಂತಗಳಲ್ಲಿ ನಡೆಯಲಿದ್ದು, ಪ್ರಥಮ ಸುತ್ತಿನ ಆಯ್ಕೆಯನ್ನು ಜುಲೈ 8 ಹಾಗೂ 15ರಂದು ಆದಿತ್ಯವಾರ ಬೈಂದೂರು ತಾಲೂಕು ನಾಗೂರಿನ ಬ್ಲಾಸಂ ಸಂಗೀತ ಮತ್ತು ನೃತ್ಯ ಶಾಲೆಯ ಕೆ.ಎ.ಎಸ್. ಆಡಿಟೋರಿಯಂನಲ್ಲಿ ಆಯೋಜಿಸಲಾಗಿದೆ. ಸ್ಪರ್ಧಿಗಳಿಗೆ ಯಾವುದೇ ಭಾಷೆಯ ಭಾವಗೀತೆ, ಭಕ್ತಿ ಪ್ರಧಾನ ಗೀತೆ, ದೇಶಭಕ್ತಿಗೀತೆ ಹಾಗೂ ಉತ್ತಮ ಅಭಿರುಚಿವುಳ್ಳ ಕಲಾತ್ಮಕ ಚಿತ್ರಗೀತೆಗಳನ್ನು ಆಯ್ದುಕೊಳ್ಳಲು ಅವಕಾಶವಿದೆ.
ಉಡುಪಿ ಜಿಲ್ಲಾ ಮಟ್ಟದಲ್ಲಿ ನಡೆಯಲಿರುವ 01-01-1997 ನಂತರ ಜನಿಸಿದವರು ಮಾತ್ರ ಭಾಗವಹಿಸಬಹುದಾಗಿದೆ. ಉಚಿತ ಸ್ವರ್ಧೆಯಲ್ಲಿ ಫೈನಲ್ ತಲುಪುವ ಎಲ್ಲಾ ಸ್ಪರ್ಧಿಗಳಿಗೆ ವಿಶೇಷ ಪೋತ್ಸಾಹಧನ, ಪ್ರಯಾಣ ಭತ್ಯೆ, ಪ್ರಶಸ್ತಿ ಪತ್ರ ಮತ್ತು ಜೂನಿಯರ್ ಹಾಗೂ ಸೀನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ವಿಜೇತರಿಗೆ ಉತ್ತಮ ಬಹುಮಾನ ನೀಡುವುದರೊಂದಿಗೆ, ಕುಸುಮಾಂಜಲಿ-2018 ಕಾರ್ಯಕ್ರಮದಲ್ಲಿ ಪ್ರಸಿದ್ಧ ವೃತ್ತಿಪರ ಕಲಾವಿದರೊಂದಿಗೆ ಹಾಡುವ ಅವಕಾಶ ನೀಡಲಾಗುತ್ತಿದೆ.
ಸ್ವರ್ಧೆಗೆ ಹೆಸರು ನೋಂದಾಯಿಸುವವರು ಹಾಗೂ ಸ್ವರ್ಧಾ ನಿಯಮಗಳ ಮಾಹಿತಿಗಾಗಿ ಜುಲೈ 8ರ ಒಳಗೆ ಸ್ವರ್ಧಿಗಳ ವಿವರಗಳೊಂದಿಗೆ ನಿರ್ದೇಶಕರು, ಕುಸುಮಾಂಜಲಿ, ಕುಸುಮ ಫೌಂಡೇಷನ್, ಹಿಲ್‌ವ್ಯೂ ಕಾಂಪ್ಲೆಕ್ಸ್, ಎನ್.ಹೆಚ್.66, ನಾಗೂರು 576219 ಈ ವಿಳಾಸದಲ್ಲಿ ಮುಖತಃ ಅಥವಾ ಮೊಬೈಲ್ ಸಂಖ್ಯೆ 9483130844, 9483916833 ಕರೆ ಮಾಡಿ ಸಂಪರ್ಕಿಸಬಹುದಾಗಿದೆ.
ಕುಸುಮಾ ಘೌಂಡೇಶನ್‌ನಿಂದ ಸತತ ಆಯೋಜನೆ:
ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸುತ್ತಿರುವ ಕುಸುಮ ಫೌಂಡೇಶನ್ ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು ಪ್ರಸ್ತುತ ಜಿಲ್ಲಾ ಮಟ್ಟದ ಗಾನ ಕುಸುಮ ಸ್ವರ್ಧೆ ಆಯೋಜಿಸಿದೆ. ಗಾನಕುಸುಮ ಗ್ರಾಮೀಣ ಪ್ರತಿಭೆಗಳಿಗೆ ಒದಗಿಸಬಹುದಾಗ ಉತ್ತಮ ಸಂಗೀತ ವೇದಿಕೆಯಾಗಿದ್ದು, ಈ ವಿಶೇಷ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟೀ ನಳಿನ ಕುಮಾರ ಶೆಟ್ಟಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕುಸುಮಾಂಜಲಿಯ ನಿರ್ದೇಶಕರಾದ ರೇಷ್ಮಾ ಹಾಗೂ ವಿದ್ಯಾ ಉಪಸ್ಥಿತರಿದ್ದರು.