ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರೊಡಕ್ಷನ್ ನಂ.1 ಹಾಗೂ ಕಲಾತರಂಗ ಬಸ್ರೂರು ಇವರ ಸಹಯೋಗದೊಂದಿಗೆ ಸಾಂಡಲ್‌ವುಡ್ ನೂತನ ಚಲನಚಿತ್ರಕ್ಕೆ ಸಿದ್ಧತೆ ನಡೆದಿದ್ದು, ಕರಾವಳಿಯ ಯುವ ಪ್ರತಿಭೆಗಳಿಗಾಗಿ ಬಸ್ರೂರಿನ ಬಿ.ಎಂ.ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಡಿಷನ್ ನಡೆಯಿತು.
ಕಾರ್ಯಕ್ರಮವನ್ನು ಹಾಸ್ಯನಟ ರಘು ಪಾಂಡೇಶ್ವರ ಉದ್ಘಾಟಿಸಿ ಮಾತನಾಡಿ ಓಂಗುರು ಬಸ್ರೂರು ಹಾಗೂ ಚಂದ್ರಶೇಖರ್ ಬಸ್ರೂರು ಅವರು ಪ್ರಥಮ ಭಾರಿಗೆ ನಿರ್ಮಾಣ ಮಾಡುತ್ತಿರುವ ಪ್ರೊಡಕ್ಷನ್ ನಂ.೧ ಚಿತ್ರದ ಮೂಲಕ ಕರಾವಳಿಯ ಪ್ರತಿಭೆಗಳಿಗೆ ಉತ್ತಮ ಅವಕಾಶ ದೊರೆಯುವಂತಾಗಲಿ ಎಂದರು.
ಕತ್ತಲೆಕೋಣೆ ಸಿನೆಮ ನಿರ್ದೇಶಕಮ ನಟ ಸಂದೇಶ್ ಶೆಟ್ಟಿ ಆಜ್ರಿ ಮಾತನಾಡಿ ನಿಮ್ಮ ಹುಚ್ಚಿಗೆ ಚಿತ್ರರಂಗಕ್ಕೆ ಬರಬೇಡಿ, ಚಿತ್ರ ರಂಗದ ಬಗ್ಗೆ ಆಸಕ್ತಿ ಗೌರವ ಕಾಳಜಿ ಇದ್ದರೆ ಮಾತ್ರ ಬನ್ನಿ. ಯಾವುದೋ ಸಿನಿಮಾ ನೋಡಿ ಹುಚ್ಚಿನ ಗೀಳಿಗೆ ಬಿದ್ದು ಚಿತ್ರರಂಗದಲ್ಲಿ ನಟನೆಗೆ ಅವಕಾಶ ಪಡೆದು ನಂತರ ನಿರ್ದೇಶಕರಿಗೆ ಮತ್ತು ಚಿತ್ರ ತಂಡಕ್ಕೆ ತಲೆ ನೋವು ಮಾಡಬೇಡಿ ಚಿತ್ರ ರಂಗವನ್ನು ಪ್ರೀತಿಸಿ ಗೌರವಿಸಿ ಎಂದು ಸಲಹೆ ನೀಡಿದರು.
ಅತಿಥಿಗಳಾಗಿ ಸಂಗೀತ ನಿರ್ದೇಶಕ ಉತ್ತಮ್ ಸಾರಂಗ, ನಟಿ ಸ್ವರಾಜ್ ಲಕ್ಷ್ಮೀ, ಗೀತ ರಚನಕಾರ ಅಶೋಕ್ ನೀಲಾವರ, ಓಂಗುರು ಬಸ್ರೂರು, ಚಂದ್ರಶೇಖರ ಬಸ್ರೂರು ಉಪಸ್ಥಿvರಿದ್ದರು. ಸುಮಾರು ೯೦ಕ್ಕೂ ಪ್ರತಿಭೆಗಳು ಆಡಿಷನ್‌ನಲ್ಲಿ ಭಾಗವಹಿಸಿದ್ದರು.