ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಮ್ಮ ವಿದ್ಯಾರ್ಥಿ ಜೀವನದಲ್ಲಿ ಸಮಾಜ ಸೇವೆಗಳಲ್ಲಿ ಭಾಗಿಯಾಗುವುದರ ಮೂಲಕ ಮಕ್ಕಳು ಆತ್ಮವಿಶ್ವಾಸ ವೃದ್ಧಿಸಿಕೊಂಡು ಸತ್ಪ್ರಜೆಯಾಗಿ ರೂಪಿಸುವಲ್ಲಿ ಇಂಟರ‍್ಯಾಕ್ಟ್ ಕ್ಲಬ್ ಸಹಾಯಕಾರಿಯಾಗುತ್ತದೆ ಎಂದು ಇಂಟರ‍್ಯಾಕ್ಟ್ ಕ್ಲಬ್ ನಿರ್ದೇಶಕ ಎಂ. ಎನ್. ಶೇರಿಗಾರ್ ಹೇಳಿದರು.
ಬೈಂದೂರು ರತ್ತೂಬಾ ಜನತಾ ಫ್ರೌಡಶಾಲೆಯಲ್ಲಿ ರೋಟರಿ ಕ್ಲಬ್ ಪೂರಕ ಸಂಸ್ಥೆ ಇಂಟರ‍್ಯಾಕ್ಟ್ ಕ್ಲಬ್ಬಿನ ನೂತನ ಪದಾಧಿಕಾರಿಗಳಿಗೆ ಪದಪ್ರದಾನಿಸಿ ಮಾತನಾಡಿದರು. ಸ್ಥಳೀಯ ರೋಟರಿ ಕ್ಲಬ್ ಅಧ್ಯಕ್ಷ ಐ. ನಾರಾಯಣ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ರತ್ತೂಬಾ ಜನತಾ ಫ್ರೌಡಶಾಲೆಯ ಇಂಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಲಕ್ಷ್ಮೀನಾರಾಯಣ, ಕಾರ್ಯದರ್ಶಿಯಾಗಿ ಮೇಘಾ ಹಾಗೂ ಇತರ ಪದಾಧಿಕಾರಿಗಳು ಪ್ರಮಾಣ ವಚನ ಸ್ವೀಕರಿಸಿದರು. ರೋಟರಿ ಕಾರ್ಯದರ್ಶಿ ಸುಬ್ರಹ್ಮಣ್ಯ ಜಿ. ಉಪ್ಪುಂ, ಶಿಕ್ಷಕಿಯರಾದ ಚೈತ್ರಾ, ಹೇಮಾವತಿ, ನಿರ್ಮಲಾ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಮಂಜು ಕಾಳಾವರ ಸ್ವಾಗತಿಸಿದರು. ಕ್ಲಬ್‌ನ ಮಾರ್ಗದರ್ಶಕ ಶಿಕ್ಷಕ ಆನಂದ ಮದ್ದೋಡಿ ಪ್ರಾಸ್ತಾವಿಸಿದರು. ವಿದ್ಯಾರ್ಥಿಗಳಾದ ಸುರೇಂದ್ರ ಹಾಗೂ ಸುದರ್ಶನ್ ನಿರೂಪಿಸಿ, ಪ್ರಕಾಶ್ ಮಾಕೋಡಿ ವಂದಿಸಿದರು.