Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನಿವೃತ್ತ ಪ್ರಾಂಶುಪಾಲ ಸಿ.ಎಸ್. ಮಧ್ಯಸ್ಥ ಅವರಿಗೆ ಸನ್ಮಾನ
    ಕುಂದಾಪ್ರದ್ ಸುದ್ಧಿ

    ನಿವೃತ್ತ ಪ್ರಾಂಶುಪಾಲ ಸಿ.ಎಸ್. ಮಧ್ಯಸ್ಥ ಅವರಿಗೆ ಸನ್ಮಾನ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Click Here

    ಕುಂದಾಪುರ: ಹೆಮ್ಮಾಡಿ ಶ್ರೀ.ವಿ.ವಿ.ವಿ.ಮಂಡಳಿ ಆಡಳಿತಕ್ಕೆ ಒಳಪಟ್ಟ ಜನತಾ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಏಳು ವರ್ಷ ಕಾಲ ಭೌತಶಾಸ್ತ್ರ ಉಪನ್ಯಾಸಕ ಹಾಗೂ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ ಸೀತಾರಾಮ ಮಧ್ಯಸ್ಥ ಅವರನ್ನು ಶುಕ್ರವಾರ ಉಪನ್ಯಾಸಕ ವೃಂದ ಹಾಗೂ ವಿದ್ಯಾರ್ಥಿಗಳಿಂದ ಸನ್ಮಾನಿಸಲಾಯಿತು. ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಎಸ್.ಜನಾರ್ದನ ಮರವಂತೆ ಮತ್ತು ಅವರ ಧರ್ಮಪತ್ನಿ ನಿವೃತ್ತ ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಐ.ವಸಂತ ಕುಮಾರಿ ಮಧ್ಯಸ್ಥ ಅವರನ್ನು ಸನ್ಮಾನಿಸಿದರು. ಸನ್ಮಾನಿಸಿದ ಎಸ್.ಜನಾರ್ದನ ಮರವಂತೆ ಮಾತನಾಡಿ, ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಮಧ್ಯಸ್ಥರ ಶಿಸ್ತು ಬಧ್ಧ ಆಡಳಿತದಿಂದ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಗ್ರಾಮೀಣ ಬಡ ವಿಧ್ಯಾರ್ಥಿಗಳ ಬಗ್ಗೆ ಅತೀವ ಕಾಳಜಿ ಹೊಂದಿದ ಪ್ರಾಮಾಣಿಕ ವ್ಯಕ್ತಿ ಇಂದಿನ ಸಮಾಜದಲ್ಲಿ ಸಿಗುವುದು ಬಹಳ ಅಪರೂಪ. ಪ್ರಸ್ತುತ ಶಿಕ್ಷಣ ಸಂಸ್ಥೆಗಳಿಗೆ ಮಧ್ಯಸ್ಥರಂತಹ ವ್ಯಕ್ತಿಗಳ ಸೇವೆ ಇನ್ನೂ ಅವಶ್ಯಕತೆ ಇದೆ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಮಧ್ಯಸ್ಥರು ವೃತ್ತಿ ಜೀವನದಲ್ಲಿ ನನ್ನ ಪ್ರಾಮಾಣಿಕ ಸೇವೆ ಆತ್ಮ ಸಂತೃಪ್ತಿ ತಂದಿದೆ. ನನ್ನ ಸೇವೆಯಿಂದ ನಾಲ್ಕಾರು ಜನ ಪ್ರಯೋಜನ ಪಡೆದುಕೊಂಡರೆ ಅದುವೇ ನನ್ನ ಜೀವನದ ಸಾರ್ಥಕತೆ ಮತ್ತು ನನಗೆ ನೀಡಿದ ಗೌರವ ಎಂದರು.
    ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜನತಾ ಪ್ರೌಢ ಶಾಲಾ ಹಿರಿಯ ಶಿಕ್ಷಕ ದಿನಕರ.ಎಸ್ ಸಭೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನಿತರ ಕುರಿತು ಉಪನ್ಯಾಸಕರಾದ ಗೀತಾ ಜೋಷಿ, ಜೆಸ್ಸಿ ಡಿಸಿಲ್ವ, ಮಂಜುನಾಥ.ಕೆ.ಎಸ್, ಮಂಜುನಾಥ ಚಂದನ್ ಮತ್ತು ವಿದ್ಯಾರ್ಥಿಗಳಾದ ಅವಿನಾಶ, ಅಭಿಷೇಕ, ರಂಜಿತ, ನಿತೇಶ್, ಅಶ್ವತ, ಅನುಷ, ಪ್ರಶಾಂತಿ, ಶ್ವೇತ, ಸುಕೇಶ ಸನ್ಮಾನಿತರ ಕುರಿತು ಮಾತನಾಡಿದರು. ಕನ್ನಡ ಭಾಷಾ ಉಪನ್ಯಾಸಕ ಮಂಜುನಾಥ.ಕೆ.ಎಸ್ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕ ಮಂಜುನಾಥ ಚಂದನ್ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ಉಪನ್ಯಾಸಕ ಹರೀಶ್ ಕಾಂಚನ್ ಅತಿಥಿಗಳನ್ನು ಗೌರವಿಸಿದರು. ಇತಿಹಾಸ ಉಪನ್ಯಾಸಕಿ ಗಿರಿಜಾ ಕೊಡೇರಿ ವಂದಿಸಿದರು.

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಖಂಬದಕೋಣೆ ಕ್ಲಸ್ಟ‌ರ್ ಮಟ್ಟದ ಅಥ್ಲೆಟಿಕ್‌ ಕ್ರೀಡಾಕೂಟದಲ್ಲಿ ಜನತಾ ವಿದ್ಯಾರ್ಥಿನಿಯರು ತಾಲೂಕು ಮಟ್ಟಕ್ಕೆ ಆಯ್ಕೆ

    23/09/2026

    ಜನತಾ ಪ.ಪೂ ಕಾಲೇಜಿನ 8 ವಿದ್ಯಾರ್ಥಿಗಳು ಕುಸ್ತಿ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

    17/09/2026

    ಜನತಾ ಪ.ಪೂ ಕಾಲೇಜಿನ ಬಾಲಕ ಹಾಗೂ ಬಾಲಕಿಯರ ಕಬಡ್ಡಿ ತಂಡವು ಜಿಲ್ಲಾ ಮಟ್ಟಕ್ಕೆ ಆಯ್ಕೆ

    16/09/2026
    Leave A Reply Cancel Reply

    9 + 4 =

    Call us

    Click Here

    Call us

    Call us

    Call us
    Highest Viewed Recently
    • ಡಾ .ಬಿ.ಬಿ. ಹೆಗ್ಡೆ ಕಾಲೇಜು: ಮೂಟ್ ಕೋರ್ಟ್ ಮಾದರಿಯ ಅಂತರ್ ತರಗತಿ ಕಾನೂನು ಸ್ಪರ್ಧೆ ʼವಿಧಿಕ್ತʼ ಸಂಪನ್ನ
    • ಕೋಟ ಸೇವಾ ಸಂಗಮ ಶಿಶು ಮಂದಿರ: ದಸರಾ ಶಿಬಿರ ಆಯೋಜನೆ 
    • ಮಕ್ಕಳಲ್ಲಿ ಸಾಹಿತ್ಯದ ಅಭಿರುಚಿ ಶ್ಲಾಘನೀಯ: ರವೀಂದ್ರ ಕೋಟ
    • ತ್ಯಾಜ್ಯ ಕಡಿತವೇ ಮೊದಲ ಹೆಜ್ಜೆ; ಪ್ರತಿ ಗ್ರಾಮವೂ ಸ್ವಚ್ಛತೆಯ ಮಾದರಿಯಾಗಬೇಕು: ವಿವೇಕ ಆಳ್ವ
    • ಭಂಡಾರ್ಕಾರ್ಸ್ ಕಾಲೇಜಿನಲ್ಲಿ ರಕ್ಷಕ – ಶಿಕ್ಷಕರ ಸಂಘದ ಸಭೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.