ಕುಂದಾಪುರ ಫ್ಲೈ ಓವರ್ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಒತ್ತಾಯಿಸಿ ಪತ್ರ ಚಳುವಳಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಕಳೆದ 10 ವರ್ಷಗಳಿಂದ ಕುಂದಾಪುರದಲ್ಲಿ ಶಾಸ್ತ್ರಿ ಸರ್ಕಲ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಪ್ಲೈಓವರ್ ಕಾಮಗಾರಿ ಕೆಲಸ ನಡೆಯುತ್ತಿದ್ದ ಈವರೆಗೂ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಭಾನುವಾರ ಟೀಂ ಕುಂದಾಪುರಿಯನ್ಸ್ ಸಂಘಟನೆ ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಪತ್ರ ಚಳವಳಿ ನಡೆಸಿತು.

Call us

Click Here

ಉಡುಪಿ ಜಿಲ್ಲಾಧಿಕಾರಿಗಳು, ಉಡುಪಿ ಭಾಗದ ಶಾಸಕರು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು, ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದರು, ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಕೇಂದ್ರ ನಾಯಕರು ಮತ್ತು ಪ್ರಧಾನ ಮಂತ್ರಿಗಳಿಗೂ ಪತ್ರ ಕಳುಹಿಸಲಾಯಿತು. ಜೊತೆಗೆ ಕಾಮಗಾರಿ ವಹಿಸಿಕೊಂಡ ನವಯುಗ ಕಂಪೆನಿಗೂ ಪತ್ರ ರವಾನಿಸಲಾಯಿತು.

ಇದನ್ನೂ ಓದಿ:
► ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಈವರೆಗೂ ಅಪೂರ್ಣhttps://kundapraa.com/tag/nh66/

ಕುಂದಾಪುರದ ಶಾಸ್ತ್ರಿ ಸರ್ಕಲ್ನಲ್ಲಿ ಫ್ಲೈ ಓವರ್ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಇದರಿಂದ ವಾಹನ ಸವಾರರಿಗೆ ಅಡಚಣೆ ಉಂಟಾಗಿ ಅಪಘಾತಗಳು ಸಂಭವಿಸುತ್ತಿದೆ. ಅಲ್ಲದೇ ಸ್ಥಳದಲ್ಲಿ ಸೂಕ್ತ ಚರಂಡಿ ವ್ಯವಸ್ಥೆಯಿಲ್ಲದೇ ಚರಂಡಿ ನೀರು ರಸ್ತೆ ಮೇಲೆ ನೀರು ಹರಿಯುತ್ತಿದೆ. ಹಲವು ವರ್ಷಗಳಿಂದ ಪದೇ ಕಾಮಗಾರಿ ಮುಕ್ತಾಯದ ಅವಧಿಯನ್ನು ಮುಂದೂಡಲಾಗುತ್ತಿದೆ. ಕಾಮಗಾರಿ ಗುತ್ತಿಗೆ ತೆಗೆದುಕೊಂಡ ನವಯುಗ ಪ್ರೈವೇಟ್ ಲಿಮಿಟೆಟ್ ಕಂಪನಿ ಇನ್ನು 40% ರಷ್ಟು ಪ್ಲೈಓವರ್ ಕಾಮಗಾರಿ ಪೂರ್ಣಗೊಳಿಸಲು ಬಾಕಿಯಿದ್ದು, ಇದೇ ರೀತಿ ಕೆಲಸ ಮಂದಗತಿಯಲ್ಲಿ ಸಾಗಿದರೆ ಕಾಮಗಾರಿ ಪೂರ್ಣಗೊಳಿಸಲು ಇನ್ನು ಕೆಲವು ಕೆಲವು ವರ್ಷ ಬೇಕಾಗಬಹುದು. ಕಾಮಗಾರಿ ವಿಳಂಬದಿಂದ ಸ್ಥಳೀಯರಿಗೆ ಹಲವಾರು ವಿಧಗಳಿಂದ ಸಮಸ್ಯೆಗಳಾಗುತ್ತಿದೆ.ಹೀಗಾಗಿ ಪತ್ರ ಚಳುವಳಿ ಮೂಲಕ ಫ್ಲೈಓವರ್ ಮಾರ್ಚ್ 31ರ ಒಳಗೆ ಪೂರ್ಣಗೊಳಿಸಲು ಒತ್ತಾಯಿಸಲಾಯಿತು.

ಅಭಿಯಾನದಲ್ಲಿ ರಂಜೀತ್ ಶಿರಿಯಾರ್, ರೂಪೇಶ್ ಪೂಜಾರಿ ಬೈಂದೂರು, ಶ್ರೀಕಾಂತ್, ನವೀನ್ ಆಚಾರ್ಯ ಸೇರಿದಂತೆ ಸೇರಿದಂತೆ ಬೆಂಗಳೂರಿನಲ್ಲಿ ನೆಲೆಸಿರುವ ಕುಂದಾಪುರದ ಯುವಕರುಗಳು ಭಾಗಿಯಾಗಿದ್ದರು.

Click here

Click here

Click here

Click Here

Call us

Call us

 

ಇದನ್ನೂ ಓದಿ:
► ‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಸಂಘಟನೆ ಲೋಕಾರ್ಪಣೆ – https://kundapraa.com/?p=32510 .

Leave a Reply