ಕುಂದಾಪುರ: ಉತ್ತಮ ವ್ಯಕ್ತಿತ್ವದ ನಿರ್ಮಾಣ ಶಿಕ್ಷಣದಿಂದ ಸಾಧ್ಯ. ಉನ್ನತ ಶಿಕ್ಷಣವನ್ನು ಪಡೆಯುತ್ತಾ ಹೋದಂತೆ ಸಾಮಾಜಿಕ ಗೌರವ, ಉಜ್ವಲ ಭವಿಷ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಕರ್ನಾಟಕ ಶೈಕ್ಷಣಿಕವಾಗಿ ಅಪ್ರತಿಮ ಪ್ರಗತಿಯನ್ನು ಸಾಧಿಸುತ್ತಿರುವುದಕ್ಕೆ ಇಂದಿನ ಮಕ್ಕಳು ಪಡೆಯುತ್ತಿರುವ ಅಂಕಗಳೇ ಸಾಕ್ಷಿ ಗುಣಮಟ್ಟದ ಶಿಕ್ಷಣವನ್ನು ಪಡೆದು ದೇಶದ
ಅಭ್ಯುದಯಕ್ಕೆ ಶ್ರಮಿಸಿ ಎಂದು ಕುಂದಾಪುರ ತಹಶೀಲ್ದಾರ್ ಗಾಯತ್ರಿ ನಾಯಕ್ ಹೇಳಿದರು.
ಅವರು ಇತ್ತೀಚೆಗೆ ರೋಟರಿ ಕ್ಲಬ್ ಕುಂದಾಪುರ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಮೇಘನಾ ಎಂ, ನಿಶಾ ಕಾಮತ್, ಅನಿರುದ್ದ ಮಯ್ಯ, ಪಿಯುಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ಸೌಂದರ್ಯ ಉಪಧ್ಯಾಯ ಅವರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.
ರೋಟರಿ ಅಸಿಸ್ಟೆಂಟ್ ಗವರ್ನರ್ ಮೊಳಹಳ್ಳಿ ಗಣೇಶ ಶೆಟ್ಟಿ, ವಲಯ ಸೇನಾನಿ ಕೆ. ಕೆ. ಕಾಂಚನ್ ಶುಭಹಾರೈಸಿದರು. ರೋಟರಿ ಕ್ಲಬ್ ಕುಂದಾಪುರದ ಅದ್ಯಕ್ಷ ಮನೋಜ್ ನಾಯರ್ ಸ್ವಾಗತಿಸಿ, ಅಧ್ತಕ್ಷತೆವಹಿಸಿದ್ದರು. ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಎಚ್.ಎಸ್. ಹತ್ವಾರ್, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಕಾರ್ಯದರ್ಶಿ ಕೆ. ವಿ. ನಾಯಕ್ ವಂದಿಸಿದರು.