ಗೊಂಬೆಯಾಟ ಅಕಾಡೆಮಿಯಲ್ಲಿ ಯಕ್ಷಗಾನ ಗಾನ ವೈಭವ

Call us

Call us

Call us

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಭವನ ಗೊಂಬೆಮನೆಯಲ್ಲಿ ಜೂನ್ ತಿಂಗಳ ಕಾರ್ಯಕ್ರಮವಾಗಿ ದಿ ರಾಮ ಮಯ್ಯ ಸಾಂಸ್ಕೃತಿಕ ಪ್ರತಿಷ್ಠಾನ, ಉಪ್ಪಿನಕುದ್ರು ಇದರ ಉದ್ಘಾಟನಾ ಸಮಾರಂಭ ಇತ್ತೀಚೆಗೆ ಜರುಗಿತು. ತಿಂಗಳ ಅತಿಥಿಯಾಗಿ ಡಾ. ಎಂ.ವಿ.ಹೊಳ್ಳ, ಅಶ್ವಿನಿ ಕ್ಲಿನಿಕ್, ತಲ್ಲೂರು ಭಾಗವಹಿಸಿದ್ದರು. ದಿ ರಾಮ ಮಯ್ಯ ಪ್ರತಿಷ್ಠಾನದ ಅಧ್ಯಕ್ಷರಾದ ಸೂರ್ಯನಾರಾಯಣ ಮಯ್ಯ ಹಾಗೂ 2014-15 ನೇ ಸಾಲಿನ ಪಿ.ಯು.ಸಿ ಕಲಾ ವಿಭಾಗದಲ್ಲಿ ಉಡುಪಿ ಜಿಲ್ಲೆಗೆ  ಪ್ರಥಮ ಸ್ಥಾನ ಪಡೆದ ಕುಮಾರಿ ಮಹಾಲಕ್ಷ್ಮಿ, ಉಪ್ಪಿನಕುದ್ರು ಇವರನ್ನು ಗೊಂಬೆಯಾಟ ಅಕಾಡೆಮಿ ವತಿಯಿಂದ ಸನ್ಮಾನಿಸಲಾಯಿತು.

Call us

Click Here

        ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್, ವೇ|ಮೂ| ಚಂದ್ರಶೇಖರ ಅಡಿಗ, ವೇ|ಮೂ| ಮಂಜುನಾಥ ಐತಾಳ್, ವೆಂಕಟರಮಣ ಹೊಳ್ಳ, ಬಿ.  ನಾಗೇಶ್  ಸೇರುಗಾರ್, ನಿತ್ಯಾನಂದ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು. ಬಳಿಕ ಹೆರಂಜಾಲು ಗೋಪಾಲ ಗಾಣಿಗ, ಪರಮೇಶ್ವರ ನಾಯಕ್ ಹಾಗೂ ನಿತ್ಯಾನಂದ  ಹೆಬ್ಬಾರ್ ಇವರಿಂದ ಯಕ್ಷಗಾನ ಗಾನ ವೈಭವ ನಡೆಯಿತು. ನಾಗೇಶ್ ಶ್ಯಾನುಭಾಗ್ ಮತ್ತು ವಿಠ್ಠಲ್ ಕಾಮತ್  ಕಾರ್ಯಕ್ರಮ ನಿರೂಪಿದರು.

Leave a Reply