ಕರ್ನಾಟಕದಲ್ಲಿ ಜುಲೈ 1ನ್ನು ಪತ್ರಿಕಾ ದಿನಾಚರಣೆಯಾನ್ನಾಗಿ ಆಚರಿಸಲಾಗಿತ್ತಿದೆ. ಕನ್ನಡದ ಮೊದಲ ಪತ್ರಿಕೆ ”ಮಂಗಳೂರು ಸಮಾಚಾರ” ಜುಲೈ 1, ಕ್ರಿ.ಶ.1843ರಲ್ಲಿ ರೆವರೆಂಡ್ ಫಾದರ್ ಹರ್ಮನ್ ಮೊಗ್ಲಿಂಗ್ ಇವರ ಸಂಪಾದಕತ್ವದಲ್ಲಿ ಆರಂಭಗೊಂಡಿತು. ಈ ದಿನದ ನೆನಪಾಗಿ ಕರ್ನಾಟಕದಲ್ಲಿ ಜುಲೈ 1ನ್ನು ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ. 1982 ರಲ್ಲಿ ಅಸ್ತಿತ್ವಕ್ಕೆ ಬಂದ ಮಾದ್ಯಮ ಅಕಾಡೆಮಿ ಪತ್ರಿಕಾ ದಿನಾಚರಣೆಯ ಮುಂದಾಳತ್ವವನ್ನು ವಹಿಸುತ್ತಿದೆ. 1996 ರಿಂದ ಪ್ರತಿ ವರ್ಷ ಈ ಆಚರಣೆ ನಡೆಯುತ್ತಿರುವುದು ಗಮನಾರ್ಹ.
ಹರ್ಮನ್ ಮೊಗ್ಲಿಂಗ್:
ಕನ್ನಡದ ಮೊದಲ ಪತ್ರಿಕೆಯನ್ನು ಆರಂಭಿಸಿದ ಹರ್ಮನ್ ಮೊಗ್ಲಿಂಗ್ ಅವರನ್ನು ಕನ್ನಡ ಪತ್ರಿಕೆಯ ಪಿತಾಮಹ ಎಂದು ಕರೆಯಲಾಗಿದೆ. 1811ರಲ್ಲಿ ಜರ್ಮನಿಯ ಬ್ರಾಕನ್ ಹೀಮ್ ಎಂಬಲ್ಲಿ ಜನಿಸಿದ ರೆವರೆಂಡ್ ಹರ್ಮನ್ ಮೊಗ್ಲಿಂಗ್ ವಿದೇಶಿಗನಾದರೂ ಕನ್ನಡದಲ್ಲಿ ಅಪಾರ ಪ್ರೇಮವನ್ನಿಟ್ಟು ಕನ್ನಡಕ್ಕೆ ಸಂಬಂಧಿಸಿದ ಅನೇಕ ವಿಷಯಗಳಲ್ಲಿ ಮೊದಲಿಗನಾದವನು. 4 ಪುಟಗಳ ಪಾಕ್ಷಿಕ ಪತ್ರಿಕೆಯಾಗಿ ಹೊರಬಂದ ”ಮಂಗಳೂರು ಸಮಾಚಾರ” ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಕಲ್ಲಚ್ಚಿನಲ್ಲಿ ಮುದ್ರಿತಗೊಳ್ಳುತ್ತಿದ್ದ ಪತ್ರಿಕೆಯ ಬೆಲೆ ಆ 2 ಪೈಸೆಯಾಗಿತ್ತು. ‘ಜಾತಿ ವಿಚಾರಣೆ’, ‘ದೇವ ವಿಚಾರಣೆ’ ಹಾಗು ‘ಬೈಬಲ್ಲಿನ ಕೆಲ ಕತೆಗಳು’ ಮೊಗ್ಲಿಂಗ್ ನ ಕೆಲವು ಕೃತಿಗಳಾಗಿವೆ.
***
ಮಂಗಳೂರು ಸಮಾಚಾರದಿಂದ ಆರಂಭಗೊಂಡ ಕನ್ನಡ ಪತ್ರಿಕೋದ್ಯಮದ ಇತಿಹಾಸ ಹತ್ತಾರು ಆಯಾಮಗಳನ್ನು ದಾಟಿ ಬಂದಿದೆ. ಹಸ್ತಾಕ್ಷರ, ಮೊಳೆ ಜೋಡಿಸುವ ಮುದ್ರಣ ಮಾದ್ಯಮದಿಂದ ಆರಂಭಗೊಂಡು ರೇಡಿಯೋ, ಟಿ.ವಿ ನಂತರ ವೆಬ್ ಮಾಧ್ಯಮವನ್ನು ಒಳಗೊಂಡು ಇಂದು ಯಶಸ್ವಿಯಾಗಿ ಸಾಗುತ್ತಿದೆ. ಸ್ವಾತಂತ್ರ್ಯ ಪೂರ್ವದ ಪತ್ರಿಕೋದ್ಯಮದ ವ್ಯಾಖ್ಯಾನಗಳು ಇಂದು ಬದಲಾಗಿದೆ. ಹೊಸತನವನ್ನೂ ಒಳಗೊಂಡು ಮುನ್ನಡೆಯುತ್ತಿದೆ.
ಕನ್ನಡ ಪತ್ರಿಕೋದ್ಯಮದ ಏಳಿಗೆಗೆ ಕಾರಣರಾದ ಎಲ್ಲರನ್ನೂ ನೆನೆಯುತ್ತಾ, ಪ್ರಯೋಗಶೀಲತೆಯ ಮೂಲಕ ಪತ್ರಿಕೋದ್ಯಮ ತನ್ನ ನಿರಂತರತೆಯನ್ನು ಕಾಯ್ದುಕೊಳ್ಳಲಿ ಎಂದು ಆಶಿಸುತ್ತಾ, ಎಲ್ಲಾ ಮಾಧ್ಯಮಗಳು ತಮ್ಮ ಜವಾಜ್ದಾರಿಯನ್ನು ನಿಭಾಯಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಎತ್ತಿ ಹಿಡಿಯಲಿ ಎಂದು ಬಯಸುತ್ತಾ, ಪತ್ರಿಕಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಿದ್ದೆವೆ.
-ಸಂ