ಗೊಂದಲ ಬೇಡ: ಕುಂದಾಪುರ ಉಪವಿಭಾಗದಲ್ಲಿ ಸೀಲ್‌ಡೌನ್ ಇರಲ್ಲ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಉಪವಿಭಾಗ ವ್ಯಾಪ್ತಿಯ ಯಾವುದೇ ಪ್ರದೇಶಗಳನ್ನೂ ಸೀಲ್‌ಡೌನ್ ಮಾಡುವುದಿಲ್ಲ. ಈಗಾಗಲೇ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಗಡಿಯಲ್ಲಿ ಮಾತ್ರವೇ ಭಾಗಶಃ ಸೀಲ್‌ಡೌನ್ ಮಾಡಲಾಗಿದೆ. ಈ ಬಗ್ಗೆ ಗೊಂದಲ ಬೇಡ ಎಂದು ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

Call us

Click Here

ಅವರು ತಮ್ಮ ಕಛೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ ಜಿಲ್ಲೆಯಲ್ಲಿ ಕೋವಿಡ್ -19 ಸೋಂಕಿತರು ಚೇತರಿಸಿಕೊಂಡಿದ್ದು, ಜಿಲ್ಲೆಯ ಒಳಗೆ ಕೊರೊನಾ ಭೀತಿಯಿಲ್ಲ. ಆದರೆ ಹೊರ ಜಿಲ್ಲೆಗಳಿಂದ ಬಂದವರಿದ್ದರೆ ಅಂತಹ ಸಂದರ್ಭದಲ್ಲಿ ಅಚಾತುರ್ಯ ಸಂಭವಿಸಬಾರದು ಎನ್ನುವ ದೃಷಿಯಿಂದ ಲಾಕ್‌ಡೌನ್ ಮುಂದುವರೆಯಲಿದೆ. ಆದರೆ ಸೀಲ್‌ಡೌನ್ ಮಾಡುವ ಯಾವುದೇ ಪ್ರಸ್ತಾಪಗಳಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Watch Video

ಕುಂದಾಪುರ ಪೊಲೀಸ್ ಉಪವಿಭಾಗದ ವ್ಯಾಪ್ತಿಯ ಕೆಲವೊಂದು ಪ್ರದೇಶಗಳಲ್ಲಿ ದಿನಬಳಕೆಯ ವಸ್ತುಗಳ ಖರೀದಿ ಕಷ್ಟವಾಗುತ್ತಿದೆ ಎನ್ನುವ ದೂರುಗಳು ಕೇಳಿ ಬಂದಿವೆ. ಇನ್ನು ಕೆಲವು ಕಡೆ ಹಿರಿಯ ನಾಗರಿಕರಿಗೆ ಖರೀದಿಗೆ ಬರುವುದು ಸಾಧ್ಯವಾಗುತ್ತಿಲ್ಲ. ವಿಕಲಚೇತನರೂ ಸಮಸ್ಯೆಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಹಾಗಾಗಿ ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿರುವವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ಪೈಲೆಟ್ ಪ್ರಾಜೆಕ್ಟ್ ನಿರ್ವಹಿಸಲು ಯೋಜಿಸಲಾಗಿದೆ. ಪ್ರತೀ ವಾರ್ಡ್‌ಗಳಿಗೆ ಡೋರ್ ಡೆಲಿವರಿ ಮಾಡಲು ಇಬ್ಬರು ಸ್ವಯಂ ಸೇವಕರನ್ನು ನೇಮಿಸಲಾಗಿದ್ದು ಕೋವಿಡ್ ಟಾಸ್ಕ್ ಪೋರ್ಸ್ ಮಾರ್ಗದರ್ಶನದಲ್ಲಿ ಅವರು ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಸೋಮವಾರದಿಂದಲೇ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇದರ ಹೊರತಾಗಿ ಯಾವುದೇ ಸೀಲ್‌ಡೌನ್ ಇರುವುದಿಲ್ಲ. ಎಂದಿನಂತೆ ಬೆಳಿಗ್ಗೆ 7 ರಿಂದ 11 ಗಂಟೆಯ ತನಕವೂ ತರಕಾರಿ, ಬೇಕರಿ, ದಿನಸಿ ಅಂಗಡಿಗಳು ತೆರೆದಿರಲಿವೆ ಎಂದರು./ಕುಂದಾಪ್ರ ಡಾಟ್ ಕಾಂ ಸುದ್ದಿ/

Click here

Click here

Click here

Click Here

Call us

Call us

ಇದನ್ನೂ ಓದಿ:
► ಬೈಂದೂರು, ಕುಂದಾಪುರ ನಾಗರಿಕರ ಮನೆ ಬಾಗಿಲಿಗೆ ಬರಲಿದೆ ಅಗತ್ಯ ವಸ್ತುಗಳು – https://kundapraa.com/?p=36911 .

 

 

Leave a Reply