ಉಡುಪಿ-ಮಂಗಳೂರು ಸಂಚಾರಕ್ಕೆ ಪಾಸ್ ಬೇಕಿಲ್ಲ, ನಿರ್ಬಂಧ ತೆರವು

Click Here

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ನಡುವೆ ಸಂಚಾರಕ್ಕೆ ಅಂತರ್ಜಿಲ್ಲಾ ಪಾಸ್ ಪಡೆಯದೇ, ಆಯಾ ಸಂಸ್ಥೆಗಳ ಗುರುತು ಪತ್ರದೊಂದಿಗೆ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ಸಂಚರಿಸಬಹುದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಆದೇಶಿಸಿದ್ದಾರೆ.

Click Here

Call us

Click Here

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ಒಂದೇ ಘಟಕವಾಗಿ ಪರಿಗಣಿಸಲಾಗಿದೆ. ಹಾಗಾಗಿ ಈಗಾಗಲೇ ಅನುಮತಿಸಲಾಗಿರುವ ಚಟುವಟಿಕೆಗಳನ್ನು ಕೈಗೊಳ್ಳಲು ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯ ತನಕ ವ್ಯಕ್ತಿಗಳು ಕೆಲಸ ಮಾಡುತ್ತಿರುವ ಸಂಸ್ಥೆಯಿಂದ ನೀಡಲಾಗುವ ಪತ್ರ, ಹಾಗೂ ಸಂಸ್ಥೆಯ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶ ನೀಡಲಾಗಿದ್ದು, ಪ್ರತ್ಯೇಕ ಪಾಸ್ ಅಗತ್ಯವಿರುವುದಿಲ್ಲ. ಸಂಜೆ 7 ರಿಂದ ಬೆಳಿಗ್ಗೆ 7ರ ತನಕದ ಕರ್ಪ್ಯೂ ಅವಧಿಯಲ್ಲಿ ಈ ಹಿಂದೆ ಅಗತ್ಯ ಚಟುವಟಿಕೆಗಳಿಗೆ ನೀಡಲಾಗಿರುವ ಪಾಸ್‌ನ್ನೇ ಮಾನ್ಯ ಮಾಡಲಾಗಿದೆ. ಉಡುಪಿ ಮಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳ ಸಂಚಾರಕ್ಕೆ ಈ ಆದೇಶ ಅನ್ವಯಿಸುವುದಿಲ್ಲ. /ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಉಡುಪಿ ಜಿಲ್ಲೆಯಲ್ಲಿ ಫೇಸ್ ಮಾಸ್ಕ್ ಧರಿಸದಿದ್ದರೆ ಬೀಳುತ್ತೆ ರೂ.100 ದಂಡ – https://kundapraa.com/?p=37467 .
► ಮುಂಬೈಯಿಗರು ಉಡುಪಿ ಜಿಲ್ಲೆಗೆ ಆಗಮಿಸಲು ಅನುಮತಿ. ಸೇವಾಸಿಂಧು ಪಾಸ್, ಕ್ವಾರಂಟೈನ್ ಕಡ್ಡಾಯ – https://kundapraa.com/?p=37387 .
► ಅಂತರಾಜ್ಯ ಸಂಚಾರಕ್ಕೆ ಸೇವಾಸಿಂಧುವಿನಲ್ಲಿ ನೊಂದಣಿ ಅಗತ್ಯ – https://kundapraa.com/?p=37276 .

 

Click here

Click here

Click here

Call us

Call us

Leave a Reply