ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಶನಿವಾರ ಒಂದು ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ದುಬೈನಿಂದ ವಾಪಾಸಾಗಿರುವ ಹಿನ್ನೆಲೆಯಿರುವ ಒಂದು ವರ್ಷದ ಮಗುವಿಗೆ ಕೊರೋನಾ ವರದಿ ಪಾಸಿಟಿವ್ ಬಂದಿದೆ.
ಮೇ 12ರಂದು ಮಂಗಳೂರಿಗೆ ಆಗಮಿಸಿದ ವಿಮಾನದಲ್ಲಿ ತನ್ನ ಪೋಷಕರೊಂದಿಗೆ ಮಗು ಆಗಮಿಸಿತ್ತು. ಈಗಾಗಲೇ ಮಧ್ಯಾಹ್ನ ಮಗುವಿನ ತಂದೆ ಹಾಗೂ ತಾಯಿಯಲ್ಲಿ ಪಾಸಿಟಿವ್ ಕಂಡುಬಂದಿತ್ತು. ಒಂದು ವರ್ಷದ ಮಗು ತಾಯಿಯೊಂದಿಗೆ ಆಸ್ಪತ್ರೆಯಲ್ಲಿತ್ತು ಎನ್ನಲಾಗಿದೆ. ಇದೀಗ ಮಗುವನ್ನು ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಸದ್ಯ ಇರುವ ಸೋಂಕಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, 3 ಬಿಡುಗಡೆಯಗಿದ್ದು, 6 ಮಂದಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.