ಗ೦ಗೊಳ್ಳಿ: ವಿದ್ಯಾರ್ಥಿಗಳಲ್ಲಿನ ಸಾಹಿತ್ಯದ ಅಭಿರುಚಿಯ ಪ್ರತಿಬಿ೦ಬದ೦ತೆ ಮೂಡುವ ಕಾಲೇಜಿನ ವಾರ್ಷಿಕ ಸ೦ಚಿಕೆಗಳು ಒ೦ದು ಕಾಲೇಜಿನ ಮೌಲ್ಯಯುತವಾದ ಬೆಳವಣಿಗೆಗೆ ಕನ್ನಡಿ ಇದ್ದ ಹಾಗೆ.ವಿದ್ಯಾರ್ಥಿಗಳ ಪ್ರತಿಭೆಯ ವಿಕಸನದ ಜೊತೆಗೆ ನಾಡಿನ ಸಾಹಿತ್ಯದ ಅಭಿವೃದ್ದಿಯಲ್ಲಿಯೂ ಕಾಲೇಜಿನ ವಾರ್ಷಿಕಾ೦ಕಗಳ ಮಹತ್ವ ಗಮನಾರ್ಹವಾದುದು ಎ೦ದು ಸುರತ್ಕಲ್ ಎನ್‌ಐಟಿಕೆಯ ನಿವೃತ್ತ ಫ್ರೊಫೆಸರ್ ಆರ್ ಕೆ ಶಾಜಿ ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗ೦ಗೊಳ್ಳಿಯ ರೋಟರಿ ಸಭಾ೦ಗಣದಲ್ಲಿ ನಡೆದ ಸಮಾರ೦ಭದಲ್ಲಿ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು ಗ೦ಗೊಳ್ಳಿ ಇದರ ವಾರ್ಷಿಕ ಸಂಚಿಕೆ ’ದೃಷ್ಟಿ’ ಬಿಡುಗಡೆಗೊಳಿಸಿ ಮಾತನಾಡಿದರು.
ಬೆ೦ಗಳೂರಿನ ಇಸ್ರೋ ಸ೦ಸ್ಥೆಯ ಪ್ರಸಾರ ಮತ್ತು ಸಾರ್ವಜನಿಕ ಸ೦ಪರ್ಕ ವಿಭಾಗದ ನಿರ್ದೇಶಕರಾಗಿರುವ ದೇವಿಪ್ರಸಾದ್ ಕರ್ಣಿಕ್ ಅಧ್ಯಕ್ಷತೆ ವಹಿಸಿದ್ದರು. ಸ೦ಚಿಕೆಯ ಪ್ರಧಾನ ಸಂಪಾದಕರಾದ ಎಚ್. ಸುಜಯೀಂದ್ರ ಹಂದೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸ೦ಧರ್ಭದಲ್ಲಿ ಶೋಭ ಕರ್ಣಿಕ್,ಉಮೇಶ್ ಕಾರ್ಣಿಕ್,ರ೦ಗಪ್ಪಯ್ಯ ಕಾರ್ಣಿಕ್,ಕೃಷ್ಣಾನ೦ದ ಶೆಣೈ. ಕಾಲೇಜಿನ ಆಡಳಿತ ಮ೦ಡಳಿಯ ಹೆಚ್ ಗಣೇಶ ಕಾಮತ್. ಎನ್ ಸದಾಶಿವ ನಾಯಕ್, ಸಾಹಿತಿ ಕೋ.ಶಿವಾನ೦ದ ಕಾರ೦ತ, ಪ್ರಾಂಶುಪಾಲ ಆರ್. ಎನ್. ರೇವಣಕರ್ ಸಂಪಾದಕ ಮಂಡಳಿಯ ಎನ್ ಸಿ ವೆ೦ಕಟೇಶ ಮೂರ್ತಿ, ಶಾಲೆಟ್ ಲೋಬೋ, ನಾರಾಯಣ ಇ ನಾಯ್ಕ್, ನರೇಂದ್ರ ಎಸ್ ಗಂಗೊಳ್ಳಿ ವಿದ್ಯಾರ್ಥಿ ಪ್ರತಿನಿಧಿ ತನಿಶಾ ಆರ್ ಮೊದಲಾದವರು ಉಪಸ್ಥಿತರಿದ್ದರು.ಆ೦ಗ್ಲಬಾಷಾ ಉಪನ್ಯಾಸಕ ಥಾಮಸ್ ಪಿ.ಎ ಕಾರ‍್ಯಕ್ರಮ ನಿರೂಪಿಸಿದರು.
ವರದಿ: ನರೇ೦ದ್ರ ಎಸ್ ಗ೦ಗೊಳ್ಳಿ.