ಕುಂದಾಪುರ: ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ನಡೆದ ಸಭೆಯಲ್ಲಿ ಕುಂದಾಪುರದ ಖ್ಯಾತ ವೈದ್ಯ ಡಾ. ಬಿ. ಆರ್. ಶೆಟ್ಟಿ ಅವರು ರೋಟರಿಯ ಚತುರ್ವಿಧ ಪರೀಕ್ಷೆಯ ಪತ್ರಕವನ್ನು ಬಿಡುಗಡೆಗೊಳಿಸಿ, ಚತುರ್ವಿಧ ಪರೀಕ್ಷೆಯನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡಾಗ ರೋಟರಿಯ ಧ್ಯೇಯ ವಾಕ್ಯದಂತೆ ವಿಶ್ವಕ್ಕೆ ವರವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದರು.
ರೋಟರಿ ಕ್ಲಬ್, ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅಧ್ಯಕ್ಷತೆವಹಿಸಿದ್ದರು. ರೋಟರಿ ಪದಪ್ರದಾನ ಕಾರ್ಯಕ್ರಮದ ಕುರಿತು ಮಾತನಾಡಿದ ರೋಟರ‍್ಯಾಕ್ಟ್ ಛೇರ್‌ಮೆನ್ ಎಚ್.ಎಸ್. ಹತ್ವಾರ್ ಅವರು ಸಮಯ ಪ್ರಜ್ಞೆಗೆ ಹೆಚ್ಚಿನ ಆದ್ಯತೆ ನೀಡಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿ ಮುಕ್ತಾಯಗೊಳಿಸಿರುವುದು ರೋಟರಿ ವಲಯ ೧ರ ಸದಸ್ಯರ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಡಾ. ಛಾಯಾ ಹೆಬ್ಬಾರ್, ರವಿರಾಜ್ ಶೆಟ್ಟಿ, ಟಿ. ಬಿ. ಶೆಟ್ಟಿ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ಕೊಡ್ಲಾಡಿ ಸುಭಾಶ್ಚಂದ್ರ ಶೆಟ್ಟಿ ಇನ್ನಿತರರು ಅಭಿಪ್ರಾಯ ಹಂಚಿಕೊಂಡರು. ಕ್ಲಬ್ ಸರ್ವೀಸ್ ನಿರ್ದೇಶಕ ಸಾಲಗದ್ದೆ ಶಶಿಧರ ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.