ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಭಾನುವಾರ 216 ಪಾಸಿಟಿವ್, 629 ನೆಗೆಟಿವ್

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸೆ.6ರ ಭಾನುವಾರ 216 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 43, ಉಡುಪಿ ತಾಲೂಕಿನ 137 ಹಾಗೂ ಕಾರ್ಕಳ ತಾಲೂಕಿನ 31 ಮಂದಿಗೆ ಪಾಸಿಟಿವ್ ಬಂದಿದೆ. 5 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ. ಈತನಕ ಜಿಲ್ಲೆಯಲ್ಲಿ ಒಟ್ಟು 112 ಮಂದಿ ಮೃತಪಟಿದ್ದಾರೆ.

Call us

Click Here

ಒಟ್ಟು ಪ್ರಕರಣಗಳಲ್ಲಿ 120 ಸಿಂಥಮೇಟಿವ್ ಹಾಗೂ 69 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 74, ILI 84, ಸಾರಿ 11 ಪ್ರಕರಣವಿದ್ದು, 40 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 7 ಮಂದಿ ಹೊರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಇಂದು 106 ಮಂದಿ ಆಸ್ಪತ್ರೆಯಿಂದ ಹಾಗೂ 164 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ.

629 ನೆಗೆಟಿವ್:
ಈ ತನಕ ಒಟ್ಟು 77829 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 64752 ನೆಗೆಟಿವ್, 12727 ಪಾಸಿಟಿವ್ ಬಂದಿದ್ದು, 350 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 629 ನೆಗೆಟಿವ್, 216 ಪಾಸಿಟಿವ್ ಬಂದಿದೆ.

1,852 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 12727 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 10763 ಮಂದಿ ಬಿಡುಗಡೆಯಾಗಿದ್ದು, ಒಟ್ಟು 1852 ಸಕ್ರಿಯ ಪ್ರಕರಣಗಳಲ್ಲಿ 933 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 919 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 112 ಮಂದಿ ಮೃತಪಟ್ಟಿದ್ದಾರೆ.

Click here

Click here

Click here

Click Here

Call us

Call us

 

Leave a Reply