ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಸೆ.6ರ ಮಂಗಳವಾರ 247 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 83, ಉಡುಪಿ ತಾಲೂಕಿನ 115 ಹಾಗೂ ಕಾರ್ಕಳ ತಾಲೂಕಿನ 45 ಮಂದಿಗೆ ಪಾಸಿಟಿವ್ ಬಂದಿದೆ. 4 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ 130 ಸಿಂಥಮೇಟಿವ್ ಹಾಗೂ 117 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, ಒಟ್ಟು ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 0, ILI 11, ಸಾರಿ 6 ಪ್ರಕರಣವಿದ್ದು,226 ಪ್ರಕರಣದ ಮೂಲ ಪತ್ತೆಹಚ್ಚಲಾಗುತ್ತಿದೆ. 4 ಮಂದಿ ಹೊರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.
ಇಂದು 77 ಮಂದಿ ಆಸ್ಪತ್ರೆಯಿಂದ ಹಾಗೂ 101 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಉಡುಪಿಯ 66, 55, 42, ,60, 66 ವರ್ಷದ ಪುರುಷ, 74 ವರ್ಷದ ಮಹಿಳೆ ಹಾಗೂ ಕುಂದಾಪುರದ 70 ವರ್ಷದ ಮಹಿಳೆ ಇಂದು ಮೃತಪಟ್ಟಿದ್ದಾರೆ.
1057 ನೆಗೆಟಿವ್:
ಈ ತನಕ ಒಟ್ಟು 79489 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 66091 ನೆಗೆಟಿವ್, 13087 ಪಾಸಿಟಿವ್ ಬಂದಿದ್ದು, 311 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1057 ನೆಗೆಟಿವ್, 247 ಪಾಸಿಟಿವ್ ಬಂದಿದೆ.
1,844 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 13087 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 11124 ಮಂದಿ ಬಿಡುಗಡೆಯಾಗಿದ್ದು, ಒಟ್ಟು 1844 ಸಕ್ರಿಯ ಪ್ರಕರಣಗಳಲ್ಲಿ 876 ಮಂದಿ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಮೂಲಕ ನಿಗಾದಲ್ಲಿದ್ದಾರೆ ಹಾಗೂ 968 ಮಂದಿ ಹೋಮ್ ಐಸೋಲೇಶನಿನಲ್ಲಿದ್ದಾರೆ. ಈವರೆಗೆ ಒಟ್ಟು 121 ಮಂದಿ ಮೃತಪಟ್ಟಿದ್ದಾರೆ.