ಗಾಂಧಿ ಗ್ರಾಮ ಪುರಸ್ಕಾರಕ್ಕೆ ಅರ್ಹತೆ ಪಡೆದ ಮರವಂತೆ ಗ್ರಾಮ ಪಂಚಾಯಿತಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮರವಂತೆ: ದ್ವಿತೀಯ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರವನ್ನು ತನ್ನದಾಗಿಸಿಕೊಂಡ ಮರವಂತೆ ಗ್ರಾಮ ಪಂಚಾಯಿತಿ, 2019-20ನೇ ವರ್ಷದಲ್ಲಿ ಸಾಧಿಸಿದ ಜೀವನ ಗುಣಮಟ್ಟ, ಸ್ವಂತ ಸಂಪನ್ಮೂಲ ಕ್ರೋಢೀಕರಣ, ಮೂಲ ಸೌಕರ್ಯ ಅಭಿವೃದ್ಧಿ, ತ್ಯಾಜ್ಯ ನಿರ್ವಹಣೆ, ಉತ್ತಮ ಆಡಳಿತ, ಸೇವಾ ಪೂರೈಕೆ ಮತ್ತು ನಾವೀನ್ಯತಾ ಯೋಜನೆಗಳ ವಿವಿಧ ಮಾನದಂಡಗಳಿಗೆ ನಿಗದಿಗೊಳಿಸಿದ 200 ಅಂಕಗಳಲ್ಲಿ 161 ಅಂಕ ಗಳಿಸಿ ಈ ಪ್ರಶಸ್ತಿಗೆ ಪಾತ್ರವಾಗಿದೆ.

Call us

Click Here

2,000ಕ್ಕಿಂತ ಈಚೆಗೆ ಮರವಂತೆ ಪಂಚಾಯಿತಿ ಅನನ್ಯ ಸಾಧನೆಗಳ ಮೂಲಕ ರಾಜ್ಯ, ರಾಷ್ಟ್ರದ ಗಮನ ಸೆಳೆದಿದೆ. ಸ್ವಯಂಪ್ರೇರಿತ ಸಮಗ್ರ ಸಾಮಾಜಿಕ ಆರ್ಥಿಕ ಸಮೀಕ್ಷೆ, ಯಶಸ್ವಿ ಸಂಪೂರ್ಣ ಸ್ವಚ್ಛತಾ ಆಂದೋಲನ, ಜನತಾ ಜೀವ ವೈವಿಧ್ಯ ದಾಖಲಾತಿ ಮತ್ತು ಪ್ರಕಟಣೆ, ಕುಡಿಯುವ ನೀರು ಪೂರೈಕೆ ಯೋಜನೆ, ಕೇಂದ್ರೀಕೃತ ಸೋಲಾರ್ ಬೀದಿದೀಪ, ದಾನಿಯಿಂದ ಪಂಚಾಯತ್ ಸೌಧ ನಿರ್ಮಾಣ, ಸುವರ್ಣ ಗ್ರಾಮೋದಯ ಯೋಜನೆ ಮೂಲಕ ಗ್ರಾಮದ ಮೂಲ ಸೌಲಭ್ಯ ವೃದ್ಧಿ, ಆರ್ಥಿಕ ಶಿಸ್ತು ಪಾಲನೆ, ವಸತಿ ಸಭೆ, ವಾರ್ಡ್‌ಸಭೆ, ಗ್ರಾಮಸಭೆ, ಮಹಿಳಾ ಗ್ರಾಮಸಭೆ, ಮಕ್ಕಳ ಗ್ರಾಮಸಭೆ, ದಲಿತ ಗ್ರಾಮಸಭೆಗಳ ಮೂಲಕ ಆಡಳಿತ ಮತ್ತು ಅಭಿವೃದ್ಧಿಯಲ್ಲಿ ಎಲ್ಲರನ್ನು ಒಳಗೊಳ್ಳುವುದರ ಜತೆಗೆ ಪಾರದರ್ಶಕತೆ, ಉತ್ತರದಾಯಿತ್ವ, ಸಾಮಾಜಿಕ ನ್ಯಾಯ ಪಾಲನೆಯಲ್ಲಿ ಅದರದು ಉನ್ನತ ಮಟ್ಟದ ಸಾಧನೆ. ಈಗಷ್ಟೆ ಅವಧಿ ಅಂತ್ಯಗೊಂಡ ಆಡಳಿತ ಮಂಡಳಿ ಈ ಪರಂಪರೆಯನ್ನು ಮುಂದಕ್ಕೆ ಒಯ್ದಿರುವುದರ ಜತೆಗೆ ಘನ ದ್ರವ ಸಂಪನ್ಮೂಲ ನಿರ್ವಹಣೆಯಲ್ಲಿ ಗಣನೀಯ ಯಶಸ್ಸು ಸಾಧಿಸಿ, ’ಬ್ರ್ಯಾಂಡ್’ಗೆ ಒಳಪಡಲು ಆಯ್ಕೆಯಾಗಿದೆ. ಸಂಪನ್ಮೂಲ ಕ್ರೋಢೀಕರಣ, ಬೀದಿದೀಪ ಅಳವಡಿಕೆ ಮತ್ತು ನಿರ್ವಹಣೆ, ಉದ್ಯೋಗ ಖಾತರಿ ಯೋಜನೆ ಅನುಷ್ಠಾನ, ನಾವೀನ್ಯತಾ ಕಾರ್ಯಕ್ರಮಗಳಲ್ಲೂ ಗಮನಾರ್ಹ ಸಾಧನೆ ಮಾಡಿರುವುದನ್ನು ಈ ಪ್ರಶಸ್ತಿ ಗುರುತಿಸಿದೆ.

ಈ ವರೆಗೆ ಗಳಿಸಿದ ಪುರಸ್ಕಾರ, ನಗದು ಬಹುಮಾನ (ಲಕ್ಷಗಳು)

  • 2007 ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕಾರ ರೂ 4.00
  • 2011 ರಜತ ನೈರ್ಮಲ್ಯ ಪ್ರಶಸ್ತಿ ರೂ 2.00
  • 2013 ರಾಷ್ಟ್ರೀಯ ಪಂಚಾಯತ್ ರಾಜ್ ಸಶಕ್ತೀಕರಣ ಪುರಸ್ಕಾರ ರೂ 14.00
  • 2014 ಗಾಂಧಿಗ್ರಾಮ ರಾಜ್ಯ ಪುರಸ್ಕಾರ ರೂ 5.00
  • 2013, 2014 ಸಮಗ್ರ ನಿರ್ವಹಣೆಗೆ ಜಿಲ್ಲಾ ಮಟ್ಟದ ಪ್ರಶಸ್ತಿ
  • 2020 ಗಾಂಧಿಗ್ರಾಮ ರಾಜ್ಯ ಪುರಸ್ಕಾರ

ಇದನ್ನೂ ಓದಿ:
► ಹೊಂಬಾಡಿ – ಮಂಡಾಡಿ ಗ್ರಾಮ ಪಂಚಾಯಿತಿಗೆ ಗಾಂಧಿ ಗ್ರಾಮ ಪುರಸ್ಕಾರ – https://kundapraa.com/?p=41444 .

Click here

Click here

Click here

Click Here

Call us

Call us

Leave a Reply