ಮುಂಬೈ ಮೊಗವೀರ ಬ್ಯಾಂಕಿಗೆ ನೂತನ ಆಡಳಿತ ಮಂಡಳಿ

Call us

Call us

Call us

Call us

ಮುಂಬಯಿ: ಇದು ಸಮಸ್ತ ಮೊಗವೀರ ಸಮಾಜದ ಗೆಲುವಾಗಿದೆ. ನಾವೆ ಲ್ಲರೂ ಒಂದೇ. ಮೊಗವೀರ ಬ್ಯಾಂಕ್‌ ನಮ್ಮದೇ ಆಗಿದೆ. ನಮ್ಮಲ್ಲಿ ಯಾವುದೇ  ಭಿನ್ನಾಭಿಪ್ರಾಯ ವಿಲ್ಲ. ಚುನಾವಣೆಗೆ ಮೊದಲು ಬೇರೆ ಬೇರೆ ಪ್ಯಾನೆಲ್‌ಗ‌ಳನ್ನು ಬೆಂಬಲಿಸಿದರೂ ಚುನಾವಣೆ ಬಳಿಕ‌ ನಾವೆಲ್ಲರೂ ಬ್ಯಾಂಕಿನ ಏಳಿಗೆಗಾಗಿ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ನಾಡೋಜ ಡಾ| ಜಿ. ಶಂಕರ್‌  ಹೇಳಿದರು.

Call us

Click Here

Click here

Click Here

Call us

Visit Now

Click here

ಅಂಧೇರಿ ಪಶ್ಚಿಮದ ಮೊಗವೀರ ವ್ಯವಸ್ಥಾಪಕ ಮಂಡಳಿಯ ಶಾಲಿನಿ ಜಿ. ಶಂಕರ್‌ ಸಭಾಗೃಹದಲ್ಲಿ ಜರಗಿದ ಮೊಗವೀರ ಬ್ಯಾಂಕಿನ ನೂತನ ನಿರ್ದೇಶಕ ಮಂಡಳಿಯ ವಿಜೇತ ಸದಸ್ಯರ ಅಭಿನಂದನೆ ಮತ್ತು ಶೇರುದಾರರ ಕೃತಜ್ಞತಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಬ್ಯಾಂಕ್‌ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿಯು ಒಟ್ಟಿಗೆ ಸಾಗಿದರೆ, ಸಮಾಜಕ್ಕೆ ಒಳಿತಾಗುತ್ತದೆ. ಬ್ಯಾಂಕ್‌ ಅಭಿವೃದ್ಧಿಯತ್ತ ಸಾಗುತ್ತದೆ. ಈ ದೃಷ್ಟಿಯಿಂದ ದಕ್ಷಿಣ ಕನ್ನಡ, ಕುಂದಾಪುರದ ಮೊಗವೀರರು ಎಂಬ ಭೇದ-ಭಾವವನ್ನು ಮರೆತು  ಒಟ್ಟಾಗಿ ಕಾರ್ಯನಿರ್ವಹಿಸಬೇಕಾಗಿದೆ. ಹೊಸದಾಗಿ ಆಯ್ಕೆಯಾದ ಆಡಳಿತ ಮಂಡಳಿಯಲ್ಲಿ ಸಮಾಜವು ಬಹಳಷ್ಟು ಆಕಾಂಕ್ಷೆಯನ್ನು ಇಟ್ಟುಕೊಂಡಿದೆ. ಅವರ ಆಕಾಂಕ್ಷೆಯನ್ನು ಈಡೇರಿಸಬೇಕಾಗಿರುವುದು ನಿರ್ದೇಶಕರ ಕೆಲಸವಾಗಿದೆ. ನಿಮ್ಮ ಜವಾಬ್ದಾರಿ ತುಂಬಾ ಇದೆ. ನಾವೆಲ್ಲರೂ ನಿಮ್ಮ ಕಾರ್ಯವನ್ನು ಗಮನಿಸುತ್ತೇವೆ. ಬ್ಯಾಂಕಿನ ಅಭಿವೃದ್ಧಿಗೆ ನಮ್ಮೆಲ್ಲರ ಬೆಂಬಲ, ಪ್ರೋತ್ಸಾಹ ಸದಾ ಇರುತ್ತದೆ. ಬ್ಯಾಂಕಿನ ನೌಕರರು ಗ್ರಾಹಕರಿಗೆ ಉತ್ತಮ ಸೇವೆಗಳನ್ನು ನೀಡಿ, ಗ್ರಾಹಕರ ಹಾಗೂ ಬ್ಯಾಂಕಿನ ಸಂಬಂಧವನ್ನು ಗಟ್ಟಿಗೊಳಿಸಬೇಕು. ಬಡವರಿಗೆ ಬೇಕಾಗಿ ಬ್ಯಾಂಕ್‌ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ ಎಂದರು.

ಸಮಾಜ ಸೇವಕ ಕೇಶವ ಕುಂದರ್‌ ಮಾತ ನಾಡಿ, ಜಿ. ಶಂಕರ್‌ ಅವರ ಪ್ರೋತ್ಸಾಹದಲ್ಲಿ ಸಮಾ ಜವು ಇಂದು ಒಗ್ಗಟ್ಟಾಗಿದೆ. ಬ್ಯಾಂಕಿನ ಅಭಿವೃದ್ಧಿಯಲ್ಲೂ ಅವರ ಮಾರ್ಗ ದರ್ಶನದಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯಬೇಕು. ಬ್ಯಾಂಕಿನ ಶಾಖೆ ಗಳನ್ನು ವಿಸ್ತರಿಸಬೇಕು ಎಂದರು.

ಉದ್ಯಮಿ ವೇದಾ ಪ್ರಕಾಶ್‌  ಮಾತನಾಡಿ, ನೂತನ ನಿರ್ದೇಶಕರನ್ನು ಆಯ್ಕೆ ಮಾಡುವಲ್ಲಿ ಸಹಕರಿಸಿದ ಎಲ್ಲರಿಗೂ ವಂದನೆಗಳು. ಈಗ ಮೊಗವೀರರಾದ ನಾವೆಲ್ಲರೂ ಒಂದೇ ಆಗಿದ್ದೇವೆ. ನಮ್ಮ ದೃಷ್ಟಿ ಬ್ಯಾಂಕಿನ ಅಭಿವೃದ್ಧಿಯೊಂದೇ ಆಗಬೇಕು. ಅದಕ್ಕಾಗಿ ಶೇ. 100ರಷ್ಟು ಕಾರ್ಯನಿರ್ವಹಿಸಬೇಕಾಗಿದೆ. ಇದರಲ್ಲಿ ಬ್ಯಾಂಕಿನ ನೌಕರರ ಪಾತ್ರ ತುಂಬಾ ಇದೆ. ಅವರ ಸಮಸ್ಯೆಗಳನ್ನು ನೂತನ ಆಡಳಿತ ಮಂಡಳಿಗೆ ತಿಳಿಸಿ ಬಗೆಹರಿಸಬಹುದು ಎಂದು ಹೇಳಿದರು.

ಪ್ರಾರಂಭದಲ್ಲಿ ವಿಜೇತ ಮಂಡಳಿ ಸದಸ್ಯರಿಗೆ ಡಾ| ಜಿ. ಶಂಕರ್‌ ಅವರು ಪುಷ್ಪಗುತ್ಛವಿತ್ತು  ಅಭಿನಂದಿಸಿದರು. ವೇದಿಕೆಯಲ್ಲಿ ಬ್ಯಾಂಕಿನ ಮಾಜಿ ಕಾರ್ಯಾಧ್ಯಕ್ಷರಾದ ಕೀರ್ತಿರಾಜ್‌ ಸಾಲ್ಯಾನ್‌ ಮತ್ತು ಡಿ. ಎಲ್‌. ಅಮೀನ್‌ ಉಪಸ್ಥಿತರಿದ್ದರು. ಮೊಗವೀರ ವ್ಯವಸ್ಥಾಪಕ ಮಂಡಳಿ ವಿಶ್ವಸ್ತ ಡಿ. ಕೆ. ಪ್ರಕಾಶ್‌, ಮೊಗವೀರ ಮಹಾಜನ ಸೇವಾ ಸಂಘ  ಬಗ್ವಾಡಿ ಹೋಬಳಿ ಅಧ್ಯಕ್ಷ ಮಹಾಬಲ ಕುಂದರ್‌, ಶ್ರೀ ಮದ್ಭಾರತ ಮಂಡಳಿ ಅಧ್ಯಕ್ಷ ಜಗನ್ನಾಥ ಪುತ್ರನ್‌, ಮಹಾಲಕ್ಷ್ಮಿ ಭಜನಾ ಮಂಡಳಿ ಅಧ್ಯಕ್ಷ ಗಣಪ ಸುವರ್ಣ, ಬ್ಯಾಂಕಿನ ಸಿಇಒ ಎಂ. ಸಿ. ಶೆಟ್ಟಿ, ನೂತನವಾಗಿ ನಿರ್ದೇಶಕ ಮಂಡಳಿಗೆ ಆಯ್ಕೆಯಾದ ಸುರೇಶ್‌ ಕಾಂಚನ್‌, ಗೋಪಾಲ್‌ ಪುತ್ರನ್‌, ದಾಮೋದರ್‌ ಡಿ. ಕರ್ಕೇರ, ಜಯಶೀಲ ತಿಂಗಳಾಯ, ಭಾಸ್ಕರ್‌ ಕಾಂಚನ್‌, ನ್ಯಾಯವಾದಿ ಜನಾರ್ದನ ಟಿ. ಮೂಲ್ಕಿ, ಕೆ. ಎಲ್‌. ಬಂಗೇರ, ಮುಕೇಶ್‌ ಕೆ. ಬಂಗೇರ, ಧರ್ಮಪಾಲ್‌ ಪಿ., ಪುರುಷೋತ್ತಮ್‌ ಶ್ರೀಯಾನ್‌, ಜಗದೀಶ್‌ ಜೆೆ. ಕಾಂಚನ್‌, ಶೀಲಾ ಐ. ಅಮೀನ್‌, ಸೋನಂ ಎ. ಸುವರ್ಣ, ಮಹಾಲಕ್ಷ್ಮಿ ಹೌಸಿಂಗ್‌ ಸೊಸೈಟಿಯ ಭಾಸ್ಕರ ಸಾಲ್ಯಾನ್‌ ಮೊದಲಾದವರು ವೇದಿಕೆಯಲ್ಲಿದ್ದರು.

Call us

ಮೊಗವೀರ ವ್ಯವಸ್ಥಾಪಕ ಮಂಡಳಿ ಕಾರ್ಯದರ್ಶಿ ಎಸ್‌. ಕೆ. ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.  ಪ್ಯಾನೆಲ್‌  ವಿಜಯಕ್ಕೆ ಸಹಕರಿಸಿದವರನ್ನು ಗೌರವಿಸ ಲಾಯಿತು.

ಚಿತ್ರ, ವರದಿ : ಸುಭಾಶ್‌ ಶಿರಿಯಾ

Leave a Reply

Your email address will not be published. Required fields are marked *

four × 2 =