ಪ್ರವೀಣ ಶೆಟ್ಟಿ ಅವರ ‘ತುಂಬಿ ತುಳುಕಿದ ಸಾಲು’ ಕವನ ಸಂಕಲನ ಬಿಡುಗಡೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕಂಬದಕೋಣೆಯ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಸಾಪ ತಾಲೂಕು ಘಟಕ ಮತ್ತು ಗೆಳೆಯರ ಬಳಗ ಬೈಂದೂರು ಇವರ ಆಶ್ರಯದಲ್ಲಿ ಬಿ. ಪ್ರವೀಣ ಶೆಟ್ಟಿ ಅವರ ‘ತುಂಬಿ ತುಳುಕಿದ ಸಾಲು’ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು.

Call us

Click Here

ಕುಂದಾಪುರ ತಾಲೂಕು ಕಸಾಪ ಅಧ್ಯಕ್ಷ ಡಾ. ಕಿಶೋರ ಕುಮಾರ ಶೆಟ್ಟಿ ಮಾತನಾಡಿ, ತನ್ನ ಸಮಾಜದ ಕುರಿತು ಚಿಂತಿಸುವ, ಬಡವರ ಕಷ್ಟಕ್ಕೆ ಮಿಡಿಯುವ ಸಾಹಿತ್ಯದಿಂದ ಸಾಮಾಜಿಕ ಸುಧಾರಣೆಗೆ ಹೊಸ ಸಾಧ್ಯತೆಗಳು ತೆರೆಯಲ್ಪಡುತ್ತದೆ. ಮನಸ್ಸಿನ ಯೋಚನೆ, ಹೃದಯದ ಭಾವನೆ ಆರೋಗ್ಯಕರವಾಗಿ ಬೆರೆತಾಗ ಸೃಜನಶೀಲ ಕವನ ಮೂಡಿಬರುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಮ್ಮನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ನಾವು ಕಲೆ, ಸಾಹಿತ್ಯ, ಸಂಗೀತ ಮೊದಲಾದ ಪ್ರಕಾರಗಳಿಂದ ನೆಮ್ಮದಿ, ಸಂತೋಷವನ್ನು ಹುಡುಕಿಕೊಳ್ಳಬೇಕಾಗಿದೆ ಇಂಜಿನಿಯರ್ ಆಗಿದ್ದರು ಸಹ ತಾವು ಹೊರ ಪ್ರಪಂಚದಲ್ಲಿ ಕಂಡು, ಕೇಳಿದ ವಿಚಾರಗಳನ್ನು ಆಂತರಂಗಿಕವಾಗಿ ವಿಮರ್ಶಿಸಿ ಕವನ ರೂಪದಲ್ಲಿ ಹೊರಹಾಕಿದ್ದಾರೆ. ಇಂದಿನ ಯುವ ಬರಹಗಾರರಿಗೆ ಇವರ ಕವಿತೆಗಳು ಹೊಸ ಆಯಾಮವನ್ನು ತೋರಿಸುತ್ತದೆ. ವಿಭಿನ್ನ ಕ್ಷೇತ್ರದಲ್ಲಿರುವವರು ಸಾಹಿತ್ಯರಚನೆಗೆ ಮುಂದಾದಾಗ ಓದುಗರಿಗೆ ವಿವಿಧ ರಂಗಗಳ ಒಳಸುಳಿವು, ಕಷ್ಟ, ನಷ್ಟಗಳ ಪರಿಚಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಜೀವ ವಿಮಾ ಅಭಿವೃದ್ಧಿ ಅಧಿಕಾರಿ ಹಾಗೂ ಸಾಹಿತಿ ಡಾ. ಎಸ್. ಶ್ರೀನಿವಾಸ ಶೆಟ್ಟಿ ಮಾತನಾಡಿದರು. ನಿವೃತ್ತ ಶಿಕ್ಷಕರಾದ ಪಿ.ಶೇಷಪ್ಪಯ್ಯ ಹೆಬ್ಬಾರ್, ಸೀತಾಲಕ್ಷ್ಮೀ, ರೋಮನ್ ಲೋಬೋ, ಬಿ. ಸುಶೀಲರವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಕಸಾಪದ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್, ಉದ್ಯಮಿ ಜಗನ್ನಾಥ ಶೆಟ್ಟಿ ನಾಕಟ್ಟೆ, ಕನಕ ಗ್ರೂಪ್‌ಆಫ್ ಹೊಟೇಲ್‌ನ ಮಾಲಕ ಜಗದೀಶ ಶೆಟ್ಟಿ, ಹಿರಿಯ ನಾಗರೀಕ ವೇದಿಕೆ ಅಧ್ಯಕ್ಷ ಗೋವಿಂದ ಎಂ., ಪುಂಡಲೀಕ್ ನಾಯಕ್, ಲಾವಣ್ಯ  ಬೈಂದೂರು ಅಧ್ಯಕ್ಷ ಉದಯ ಆಚಾರ್ ಉಪಸ್ಥಿತರಿದ್ದರು. ಬಿ.ಪ್ರವೀಣ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು. ಡಾ. ಪ್ರತಿಭಾ ರೈ ಕಾರ್ಯಕ್ರಮ ನಿರೂಪಿಸಿ, ಬಾಡಾ ಭಾಸ್ಕರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Leave a Reply