ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ಬೈಂದೂರು ಶಾಖೆಯು ನೂತನ ಕಟ್ಟಡ ಮಂಜುಶ್ರೀ ಬಿಲ್ಡಿಂಗ್ಗೆ ಸ್ಥಳಾಂತರ ಸಮಾರಂಭ ಜರುಗಿತು.
ಉದ್ಘಾಟನೆ ಮತ್ತು ಅಧ್ಯಕ್ಷತೆಯನ್ನು ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಛೇರಿಯ ವ್ಯವಸ್ಥಾಪಕರಾದ ಸೂರ‍್ಯನಾರಾಯಣ ರಾವ್ ವಹಿಸಿದ್ದರು. ಬ್ಯಾಂಕಿನ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮತ್ತು ಶಾಖೆಯ ಪ್ರಗತಿ ಬಗ್ಗೆ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಕಟ್ಟಡದ ಮಾಲೀಕರಾದ ಮಂಜುನಾಥ ಶೆಟ್ಟಿ ಮಾತನಾಡಿ, ಬ್ಯಾಂಕಿನ ಸೇವೆಯನ್ನು ಕೊಂಡಾಡಿದರು ಮತ್ತು ಸಾರ್ವಜನಿಕರಿಗೆ ಈ ಬ್ಯಾಂಕಿನಲ್ಲಿ ತಮ್ಮ ವ್ಯವಹಾರ ನಡೆಸುವಂತೆ ಹೇಳಿದರು. ಮತ್ತೋರ್ವ ಮುಖ್ಯ ಅತಿಥಿಗಳಾದ ವಿಠಲರವರು ಆರ್ಥಿಕ ಸಾಕ್ಷರತೆಯ ಬಗ್ಗೆ ವಿಸ್ತೃತ ಮಾಹಿತಿ ನೀಡಿ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಶಾಖೆಯ ಭದ್ರತಾ ಕೋಶದ ಸೌಲಭ್ಯ ಉದ್ಘಾಟಿಸಿ ಸಾಂಕೇತಿಕವಾಗಿ ಕೀಲಿಕೈ ಗ್ರಾಹಕರಿಗೆ ಹಸ್ತಾಂತರಿಸಲಾಯಿತು. ಗುರುನಾಥ ಭಟ್ ನಿರೂಪಿಸಿದರು. ಶಾಖಾ ವ್ಯವಸ್ಥಾಪಕರಾದ ಸುರೇಶ್ ಕುಮಾರ್ ಉಪಾಧ್ಯ ಸ್ವಾಗತಿಸಿ ವಂದಿಸಿದರು.