ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಸ್ಪೆಸ್ಟ್, ಥ್ರಿಲ್ಲರ್, ಸೆಂಟಿಮೆಂಟ್ ಇರುವ ಕುಟುಂಬ ಸಹಿತಿ ನೋಡಬಹುದಾದ ಕುಂದಾಪುರ ಹುಡುಗರು ಸಿದ್ದಪಡಿಸಿ, ನಟಿಸಿದ ಸ್ಟ್ರೇಂಜ್ ಕೇಸ್ ಆಫ್ ಕುಂದಾಪುರ ಕನ್ನಡ ಚಲನಚಿತ್ರ ಶುಕ್ರವಾರ ಕೋಟೇಶ್ವರ ಚಿತ್ರಮಂದಿರದಲ್ಲಿ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಓಂಗುರು ಬಸ್ರೂರು ತಿಳಿಸಿದ್ದಾರೆ.
ಅತೀ ಕಡಿಮೆ ಬಜೆಟ್ ಚಲನಚಿತ್ರವಾಗಿದ್ದು, ರಂಗಭೂಮಿ, ಹಾಗೂ ಸ್ಥಳೀಯ ಕಲಾವಿದರು ನಟಿಸಿದ್ದು, ಎ.ಆರ್.ರೆಹಮಾನ್ ಶಿಷ್ಯ ಉತ್ತಮ ಸಾರಂಗ ಸಂಗೀತ ನೀಡಿದ್ದಾರೆ. ಚಿತ್ರ ಬಿಡುಗಡೆ ನಂತರದ ಯಶಸ್ಸಿನ ಮೇಲೆ ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಶಿವಮೊಗ್ಗೆ ಹಾಗೂ ಉಡುಪಿಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಐದು ಜನ ಹಾಸ್ಯಕಲಾವಿದರು ಚಿತ್ರದಲ್ಲಿ ಮೊದಲ ಬಾರಿ ಕಾಣಿಸಿಕೊಳ್ಳಲಿದ್ದು, ಚಿತ್ರದಲ್ಲಿ ಎರಡು ಹಾಡಿದ್ದು, ಉಡುಪಿ, ಕುಂದಾಪುರ ಪರಿಸರದಲ್ಲಿ ಚಿತ್ರೀಕರಣ ಮಾಡಲಾಗಿದೆ ಎಂದರು. ಸಂಗೀತ ನಿರ್ದೇಶಕ ಉತ್ತಮ ಸಾರಂಗ ಹಾಗೂ ಚಂದ್ರಶೇಖರ ಬಸ್ರೂರು ಇದ್ದರು.