ಗಂಗೊಳ್ಳಿ: ಜೆಟ್ಟಿ ಪುನರ್ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಕಳಪೆ ಕಾಮಗಾರಿಯಿಂದಾಗಿ ಶಿಥಿಲಾವಸ್ಥೆಗೆ ತಲುಪಿದ್ದ ಗಂಗೊಳ್ಳಿ ಬಂದರಿನ ಜೆಟ್ಟಿಯ ಪುನರ್ ನಿರ್ಮಾಣಕ್ಕೆ ರೂ.16 ಕೋಟಿ ಅನುದಾನ ದೊರೆತಿದೆ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ತಿಳಿಸಿದರು

Call us

Click Here

ಅವರು ಇಲ್ಲಿನ ಸಮೀಪದ ಗಂಗೊಳ್ಳಿ ಬಂದರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರೂ. 12 ಕೋಟಿ ವೆಚ್ಚದ ಜೆಟ್ಟಿ ಮರು ನಿರ್ಮಾಣದ ಕಾಮಗಾರಿ ಮತ್ತು ರೂ. 1 ಕೋಟಿ ವೆಚ್ಚದ ರಸ್ತೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗಂಗೊಳ್ಳಿಯಿಂದ ಶಿರೂರು ವರೆಗಿನ ಮೀನುಗಾರಿಕಾ ರಸ್ತೆಗೆ ರೂ. 12 ಕೋಟಿ ಅನುದಾನ ಒದಗಿಸಲಾಗಿದೆ. ಕೋಡೇರಿ ಬಂದರಿಗೆ ರೂ 2.80 ಕೋಟಿ ಸೇರಿ ಒಟ್ಟು ರೂ 35 ಕೋಟಿ ಅನುದಾನ ನೀಡಲಾಗಿದೆ. ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಈಗಾಗಲೇ ರೂ. 1,600 ಕೋಟಿ ಅನುದಾನ ಬಂದಿದೆ. ರೂ 550 ಕೋಟಿ ವೆಚ್ಚದಲ್ಲಿ ಕ್ಷೇತ್ರದ ಪ್ರತಿ ಮನೆಗೂ ಕುಡಿಯುವ ನೀರು ಒದಗಿಸುವ ಕಾರ್ಯ ಯೋಜನೆ ರೂಪಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಶೋಭಾ ಪುತ್ರನ್, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ ಖಾರ್ವಿ, ಉಪಾಧ್ಯಕ್ಷೆ ಪ್ರೇಮಾ ಪೂಜಾರಿ, ಮೀನುಗಾರರ ಸಂಘದ ಅಧ್ಯಕ್ಷ ಸದಾಶಿವ ಗಂಗೊಳ್ಳಿ, ಹಸಿ ಮೀನು ಸಂಘದ ಅಧ್ಯಕ್ಷ ಜನಾರ್ದನ ಖಾರ್ವಿ, ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕುಂದಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯ್ ಎಸ್. ಪೂಜಾರಿ, ಉದ್ಯಮಿ ರಂಜಿತ್ ಕುಮಾರ ಶೆಟ್ಟಿ ಕುಂದಾಪುರ, ಮೀನುಗಾರಿಕಾ ಇಲಾಖೆ ಅಧಿಕಾರಿ ಅಂಜನಾ ದೇವಿ, ಎಂಜಿನಿಯರ್ ಟಿ.ಎಲ್. ಮಂಜಯ್ಯ ಗೌಡ ಹಾಗೂ ವಿಜಯ್ ಶೆಟ್ಟಿ, ನಾರಾಯಣ ಖಾರ್ವಿ, ಉದಯ್ ಕುಮಾರ್ ಶೆಟ್ಟಿ, ಗುತ್ತಿಗೆದಾರರಾದ ರೋವನ್ ಡಿಕೋಸ್ತ, ಕಮಲಾ ಕಿಶೋರ್ ಇದ್ದರು.

Leave a Reply