ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಿಟಿ ಜೇಸಿಐ, ಸಿಟಿ ಜೇಸಿರೆಟ್, ರೆಡ್ಕ್ರಾಸ್ ಘಟಕ ಹಾಗೂ ಆಯುಷ್ಧಾಮ ಆಸ್ಪತ್ರೆ ಆಶ್ರಯದಲ್ಲಿ ನಡೆದ ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕರಿಗೆ ಆರೋಗ್ಯ ತಪಾಸಣಾ ಶಿಬಿರವನ್ನು ಜೇಸಿಸ್ನ ವಲಯ 15 ಸಂಯೋಜಕಿ ಡಿ. ಲತಾ ಸುವರ್ಣ ಉದ್ಘಾಟಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜೇಸಿರೆಟ್ ವಿಭಾಗದ ಸಭಾಪತಿ ಸೋನಿ ಸ್ವಾಗತಿಸಿದರು.
ಸಿಟಿ ಜೇಸಿಐ ಅಧ್ಯಕ್ಷ ವಿಜಯ್ ಭಂಡಾರಿ, ಸ್ಥಾಪಕ ಅಧ್ಯಕ್ಷ ಹುಸೇನ್ ಹೈಕಾಡಿ, ವಲಯ ಸಂಯೋಜಕ ಪ್ರಶಾಂತ್ ಹವಾಲ್ದಾರ್, ಮನೀಶ್ ಆಸ್ಪತ್ರೆ ವೈದ್ಯೆ ಡಾ. ಪ್ರಮೀಳಾ ನಾಯಕ್, ಅಂಗನವಾಡಿ ಸಂಘಟನೆ ಪ್ರಭಾವತಿ ಶೆಟ್ಟಿ, ಉಷಾ, ರೆಡ್ಕ್ರಾಸ್ ಸಂಸ್ಥೆಯ ಗಣೇಶ್ ಆಚಾರ್ಯ, ಆಯುಷ್ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವಿನಯ್ ಚಂದ್ರ ಶೆಟ್ಟಿ, ಡಾ.ಸ್ವಾತಿ ಶೆಟ್ಟಿ, ಡಾ ಅಶ್ವಿನಿ ಹಾಗೂ ಮೆಬಲ್ ಡಿಸೋಜ ಇದ್ದರು.