ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸರಕಾರವು ಪಿಎಂಎವೈ ಯೋಜನೆಯಡಿ ಮೊದಲನೇ ಮನೆ ನಿರ್ಮಾಣ ಮಾಡುವವರಿಗೆ 2.67 ಲಕ್ಷ ರೂ ಸಹಾಯಧನ ನೀಡುತ್ತಿದ್ದು, ಹಾಗೂ ಎಲ್ಲರಿಗೂ ಸೂರು (PMAY(U)Housing For All) ಯೋಜನೆಯ ಸೌಲಭ್ಯ ಪಡೆಯಲು ಬ್ಯಾಂಕಿನ ಪೋರ್ಟಲ್ ನಲ್ಲಿ ಅಪ್ಡೇಟ್ ಆಗದ ಕಾರಣ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ ಇದರ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುವುದನ್ನು ಅರಿತ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ. ವೈ. ರಾಘವೇಂದ್ರ ಅವರು ತುರ್ತಾಗಿ ಸ್ಪಂದಿಸಿ ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಂಡಿದ್ದಾರೆ.
ಬೈಂದೂರು ಪಟ್ಟಣ ಪಂಚಾಯತ್ ಅಭಿವೃದ್ಧಿ ಕಾಮಗಾರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಶೀಘ್ರ ಕ್ರಮ ಕೈಗೊಳ್ಳುವಂತೆ ಅವರು ಕೇಂದ್ರದ ಅಧಿಕಾರಿಗಳಿಗೆ ಸೂಚಿಸಿದ್ದು ಅದರಂತೆ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯ ದಿಂದ ಆದೇಶ ಮಾಡಿಸಿದ್ದಾರೆ.ಇದರಿಂದ ಇನ್ನೂ ಮುಂದೆ ಹೊಸದಾಗಿ ಮೊದಲನೇ ಮನೆ ಕಟ್ಟುವವರಿಗೆ 2.67 ಲಕ್ಷ ಸಬ್ಸಿಡಿ ಹಾಗೂ ಎಲ್ಲರಿಗೂ ಸೂರು ಸೌಲಭ್ಯ ಅರ್ಹ ಫಲಾನುಭವಿಗಳಿಗೆ ಸಿಗಲಿದೆ.ತಂತ್ರಾಂಶದಲ್ಲಿ ಬೈಂದೂರು ಪಟ್ಟಣ ಪಂಚಾಯತ್ ಅಪ್ಡೇಟ್ ಆಗಬೇಕಾಗಿದ್ದು, ಅದನ್ನು ರಾಜ್ಯ ರಾಜೀವ ಗಾಂಧಿ ವಸತಿ ನಿಗಮದವರು ಮಾಡಲಿದ್ದಾರೆ.ಹಾಗೆಯೇ ಯುಸರ್ ಐಡಿ ಹಾಗೂ ಪಾಸ್ವರ್ಡ್ ಮಾಡವ ಕಾರ್ಯವೂ ಚಾಲನೆಯಲ್ಲಿದೆ.ಕೆಲವೇ ದಿನಗಳಲ್ಲಿ ವಾರ್ಡ್ ವಿಂಗಡಣೆ ಅಂತಿಮಗೊಳ್ಳಲಿದ್ದು ಅತೀ ಶೀಘ್ರದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸೌಲಭ್ಯ ಬೈಂದೂರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅರ್ಹ ಫಲಾನುಭಾವಿಗಳಿಗೆ ಸಿಗಲಿದೆ.